ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟದ ಮೂರನೇ ದಿನ ಭಾನುವಾರ ವೇಟ್‌ಲಿಫ್ಟಿಂಗ್ ಮತ್ತು ನೆಟ್‌ಬಾಲ್ ಪಂದ್ಯಾಟದ ಫೈನಲ್‌ನಲ್ಲಿ ದಕ್ಷಿಣ ಕನ್ನಡದ ಕ್ರೀಡಾಪಟುಗಳು ಪಾರಮ್ಯ ಮೆರೆದಿದ್ದಾರೆ.ಉರ್ವಸ್ಟೋರ್‌ನ ಅಂಬೇಡ್ಕರ್ ಭವನದಲ್ಲಿ ನಡೆದ ವೇಟ್‌ಲಿಫ್ಟಿಂಗ್‌ನ ಮೂರನೇ ದಿನದ ಸ್ಪರ್ಧೆಯಲ್ಲಿ ಪುರುಷರ ಹಾಗೂ ಮಹಿಳಾ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ಹಾಗೂ ಉಜಿರೆ ಎಸ್‌ಡಿಎಂ ಕಾಲೇಜು ತಂಡ ಅಗ್ರಸ್ಥಾನ ಕಾಯ್ದುಕೊಂಡಿದೆ. ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜು 228 ಅಂಕ ಪಡೆದು ಚಿನ್ನ ಗೆದ್ದುಕೊಂಡರೆ, ಉಜಿರೆ ಎಸ್‌ಡಿಎಂ ಕ್ರೀಡಾ ಕ್ಲಬ್ ತಂಡ 203 ಅಂಕ ಪಡೆದು ಬೆಳ್ಳಿಗೆ ತೃಪ್ತಿಪಟ್ಟಿತು. ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜು ತಂಡ 230 ಅಂಕಗಳೊಂದಿಗೆ ಪ್ರಥಮ ಹಾಗೂ ಉಜಿರೆ ಎಸ್‌ಡಿಎಂ ಸ್ಪೋರ್ಟ್ಸ್ ಕ್ಲಬ್ ತಂಡ 197 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆಯಿತು. ನೆಟ್‌ಬಾಲ್‌ನಲ್ಲಿ ದ.ಕ, ಹಾಸನಕ್ಕೆ ಚಿನ್ನ: ನಗರದ ಮಂಗಳಾ ಕ್ರೀಡಾಂಗಣದಲ್ಲಿ ನೆಟ್‌ಬಾಲ್ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯ ನಡೆದಿದ್ದು, ಮಹಿಳಾ ವಿಭಾಗದಲ್ಲಿ ದಕ್ಷಿಣ ಕನ್ನಡ ತಂಡ ಚಿನ್ನದ ಪದಕ ಗೆದ್ದುಕೊಂಡಿದೆ. ಪುರುಷರ ವಿಭಾಗದಲ್ಲಿ ಹಾಸನ ಜಿಲ್ಲಾ ತಂಡ ಚಿನ್ನದ ಪದಕ ಗೆದ್ದಿದೆ.
ದಕ್ಷಿಣ ಕನ್ನಡ ತಂಡ ಮತ್ತು ಬೆಂಗಳೂರು ಮಹಿಳಾ ತಂಡದ ನಡುವಿನ ಫೈನಲ್ ಪಂದ್ಯದಲ್ಲಿ ದಕ್ಷಿಣ ಕನ್ನಡ 37 ಮತ್ತು ಬೆಂಗಳೂರು ನಗರ 29 ಅಂಕ ಗಳಿಸಿತು. ಇದರೊಂದಿಗೆ ದ.ಕ. ಚಾಂಪಿಯನ್ ಆಗಿ ಹೊರಹೊಮ್ಮಿತು. ಮೂರನೇ ಸ್ಥಾನವನ್ನು ರಾಮನಗರ ಮತ್ತು ಹಾಸನ ಜಂಟಿಯಾಗಿ ಪಡೆಯಿತು.ಪುರುಷರ ವಿಭಾಗದಲ್ಲಿ ಹಾಸನ ತಂಡ 42 ಮತ್ತು ಬೆಂಗಳೂರು ನಗರ ತಂಡ 36 ಅಂಕ ಗಳಿಸಿ, ಹಾಸನ ತಂಡ ಪ್ರಥಮ ಸ್ಥಾನ ಪಡೆಯಿತು. ಮೂರನೇ ಸ್ಥಾನವನ್ನು ಮೈಸೂರು ಮತ್ತು ಚಾಮರಾಜನಗರ ತಂಡ ಜಂಟಿಯಾಗಿ ಹಂಚಿಕೊಂಡಿತು.ಫೆನ್ಸಿಂಗ್ ಅಂತಿಮದಲ್ಲಿ ಬೆಂಗಳೂರು ಪಾರಮ್ಯ: ಕರ್ನಾಟಕ ಕ್ರೀಡಾಕೂಟದ ಫೆನ್ಸಿಂಗ್ ಕ್ರೀಡೆಯ ಫೈನಲ್ ಪಂದ್ಯಗಳು ಭಾನುವಾರ ನಡೆದಿದ್ದು, ಮೂರು ವಿಭಾಗಗಳಲ್ಲಿ ಬೆಂಗಳೂರಿನ ಕ್ರೀಡಾಪಟುಗಳು ಪಾರಮ್ಯ ಸಾಧಿಸಿದ್ದಾರೆ.
ಪುರುಷರ ಸೆಬ್ರಿ ವಿಭಾಗದಲ್ಲಿ ಬೆಂಗಳೂರಿನ ಯಧುನಂದನ್ ಡಿ. ಚಿನ್ನ, ಮೈಸೂರಿನ ಧನುಷ್ ಪಿ.ಎ. ಬೆಳ್ಳಿ ಹಾಗೂ ಬೆಂಗಳೂರಿನ ರಾಜೇಂದರ್ ಹಾಗೂ ರೋಹಿತ್ ಅವರು ಕಂಚು ಗೆದ್ದುಕೊಂಡಿದ್ದಾರೆ.ಮಹಿಳೆಯರ ಸೆಬ್ರಿ ವಿಭಾಗದಲ್ಲಿ ಬೆಂಗಳೂರಿನ ಎಸ್. ತಾನ್ವಿ ಚಿನ್ನ, ಬೆಂಗಳೂರಿನ ಲಕ್ಷನ್ಯ ಕೃಷ್ಣಪ್ರಸಾದ್ ಬೆಳ್ಳಿ ಮತ್ತು ಬೆಂಗಳೂರಿನ ವಂದನಾ ಮತ್ತು ಯಶಸ್ವಿನಿ ಆರ್. ಕಂಚು ಗೆದ್ದುಕೊಂಡಿದ್ದಾರೆ.ಪುರುಷರ ಇಫಿ ವಿಭಾಗದಲ್ಲಿ ಬಾಗಲಕೋಟೆಯ ಬಾಹುಬಲಿ ಚಿನ್ನ, ಬೆಂಗಳೂರಿನ ದುರ್ಗೇಶ್ವರ್ ಎಸ್.ಬಿ. ಬೆಳ್ಳಿ ಹಾಗೂ ಬೆಂಗಳೂರಿನ ರಾಹುಲ್ ಗೌಡ ಕೆ.ಆರ್. ಮತ್ತು ಮೈಸೂರಿನ ಜಯಸೂರ್ಯ ಎಂ. ಕಂಚು ಗೆದ್ದುಕೊಂಡಿದ್ದಾರೆ.ಮಹಿಳೆಯರ ಇಫಿ ವಿಭಾಗದಲ್ಲಿ ಬೆಂಗಳೂರಿನ ಸ್ಪರ್ಧಾಳುಗಳಾದ ಸೇಜಲ್ ಚಿನ್ನ, ಪಾವನಿ ಪಿ. ಬೆಳ್ಳಿ ಹಾಗೂ ನೈದೆಲೆ ಬಿ. ಮತ್ತು ಯುಕ್ತ ಸಿರಿಲ್ ಕಂಚು ಗೆದ್ದುಕೊಂಡಿದ್ದಾರೆ.ಪುರುಷರ ಫಾಯಿಲ್ ವಿಭಾಗದಲ್ಲಿ ಬೆಂಗಳೂರಿನ ಸಾತ್ವಿಕ್ ಮಂಜುನಾಥ ಚಿನ್ನ, ಸೈಯದ್ ಬಹುದ್ದೀನ್ ಬೆಳ್ಳಿ ಹಾಗೂ ಚಿಕ್ಕಮಗಳೂರಿನ ನಿಖಿಲ್ ಮತ್ತು ಬೆಳಗಾವಿಯ ವಿನೋದ್ ಕಂಚು ಗೆದ್ದುಕೊಂಡಿದ್ದಾರೆ.ಮಹಿಳೆಯರ ಫಾಯಿಲ್ ವಿಭಾಗದಲ್ಲಿ ಬೆಂಗಳೂರಿನ ಸ್ಪರ್ಧಿಗಳಾದ ಶಾಯಿದಾ ಇಫ್ತಕರ್ ಬಾನು ಚಿನ್ನ, ಶ್ರೀರಕ್ಷಾ ಐ.ಕೆ. ಬೆಳ್ಳಿ, ದೃತಿಕಾ ಎನ್. ಮತ್ತು ಸಮೀರಾ ಅಂಜುಮ್ ಕಂಚು ಗೆದ್ದುಕೊಂಡಿದ್ದಾರೆ.ವುಶು ಸ್ಪರ್ಧಾ ವಿಜೇತರಿಗೆ ಪದಕ ಪ್ರದಾನ
ಮಂಗಳೂರಿನಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಭಾಭವನದಲ್ಲಿ ಕಳೆದೆರಡು ದಿನಗಳಿಂದ ನಡೆಯುತ್ತಿದ್ದ ಕರ್ನಾಟಕ ಕ್ರೀಡಾಕೂಟದ ವುಶು ಸ್ಪರ್ಧೆಗೆ ಶನಿವಾರ ತೆರೆಬಿದ್ದಿದೆ. ಎರಡನೇ ದಿನ ವಿವಿಧ ವಿಭಾಗದ ಸ್ಪರ್ಧೆಯ ಜೊತೆ ಪದಕ ವಿತರಣೆ ಸಮಾರಂಭ ನಡೆಯಿತು.ಮಹಿಳೆಯರ ಚಾಂಕ್ವಾನ್ ವಿಭಾಗದಲ್ಲಿ ಬಾಗಲಕೋಟೆಯ ತೇಜಸ್ವಿನಿ ಹೊಟ್ಟಿ-ಚಿನ್ನ, ಬೆಂಗಳೂರಿನ ಅಶ್ವಿನಿ ವಿ.-ಬೆಳ್ಳಿ, ಬೆಂಗಳೂರಿನ ಲಾಯಶ್ರೀ ಲೋಕೇಶ್ ಮತ್ತು ಉಡುಪಿಯ ಶರಣ್ಯ ಎನ್. ಜಂಟಿಯಾಗಿ ಕಂಚಿನ ಪದಕ ಪಡೆದಿದ್ದಾರೆ. ನಾಂಕ್ವಾನ್ ವಿಭಾಗದಲ್ಲಿ ಬಾಗಲಕೋಟೆಯ ಶ್ರುತಿ ದಾಸರ-ಚಿನ್ನ, ಬೆಳಗಾವಿಯ ನಿವೇದಿತ ಸುಭಾಶ್ ವಡ್ಡರ್-ಬೆಳ್ಳಿ, ಗದಗದ ಕವಿತ ಎಂ. ಮತ್ತು ಚಿತ್ರದುರ್ಗದ ಶೋಭಾ ಟಿ. ಕಂಚಿನ ಪದಕ ಗಳಿಸಿದ್ದಾರೆ. ಗುನ್ಶು ವಿಭಾಗದಲ್ಲಿ ಬಾಗಲಕೋಟೆಯ ರಾಣಿ-ಚಿನ್ನ, ವಿಜಯಪುರದ ಶುೃತಿ-ಬೆಳ್ಳಿ, ಕೊಪ್ಪಳದ ಅನುಷಾ ಮತ್ತು ಚಿತ್ರದುರ್ಗದ ಅಶ್ವಿನಿ ವಿ. ಕಂಚಿನ ಪದಕ ಹಂಚಿಕೊಂಡಿದ್ದಾರೆ. 42 ಫಾಮ್ ತೈಜಿಕ್ವಾನ್ ವಿಭಾಗದಲ್ಲಿ ದಕ್ಷಿಣ ಕನ್ನಡದ ಜಯಶ್ರೀ ಡಿ.-ಚಿನ್ನ, ಬೆಂಗಳೂರಿನ ಅವನಿತ ಶ್ರೀರಾಮ್-ಬೆಳ್ಳಿ, ಬಾಲಕೋಟೆಯ ಚಂದನ ಮತ್ತು ಬಾಗಲಕೋಟೆಯ ಆಶಾ ಕಂಚಿನ ಪದಕ ಪಡೆದಿದ್ದಾರೆ. ತಯ್ಜಿಶಾನ್ ವಿಭಾಗದಲ್ಲಿ ಬಾಲಕೋಟೆಯ ನಿಖಿತ ಎಂ.-ಚಿನ್ನ, ದಾರವಾಡದ ಸೌಜನ್ಯ ಎಲ್.-ಬೆಳ್ಳಿ, ದಕ್ಷಿಣ ಕನ್ನಡದ ವಿನಯ ಮತ್ತು ದಾವಣಗೆರೆಯ ಪ್ರಿಯದರ್ಶಿನಿ ಕೆ.ಜಿ. ಕಂಚಿನ ಪದಕ ಹಂಚಿಕೊಂಡಿದ್ದಾರೆ.ಪುರುಷರ ವಿಭಾಗ: ಪುರುಷರ ಚಾಂಕ್ವಾನ್ ವಿಭಾಗದಲ್ಲಿ ಬಾಗಲಕೋಟೆಯ ಶ್ರವಣ್ ಕುಮಾರ್-ಚಿನ್ನ, ಬೆಂಗಳೂರು ಪೂರ್ವದ ರಾಕೇಶ್ ಆರ್.-ಬೆಳ್ಳಿ, ರಾಮನಗರದ ಸಂದೀಪ್ ಎಚ್.ಜಿ. ಮತ್ತು ಮಂಡ್ಯದ ಗೌತಮ್ ಆರ್. ಕಂಚು ತನ್ನದಾಗಿಸಿಕೊಂಡಿದ್ದಾರೆ. ನಾಂಕ್ವಾನ್ ವಿಭಾಗದಲ್ಲಿ ರಾಮನಗರದ ಚೇತನ್ ಆರ್.-ಚಿನ್ನ, ದಾವಣಗೆರೆಯ ದೇವರಾಜ್ ಕೆ.-ಬೆಳ್ಳಿ, ಶಿವಮೊಗ್ಗದ ಎಂ.ಡಿ. ಜಾಫರ್ ಸಿದ್ಧಿಕ್ ಮತ್ತು ಬಾಗಲಕೋಟೆಯ ಸಮಥ್‌ರ್ ಗಾಣಿಗ ಕಂಚಿನ ಪದಕವನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ. ಕ್ವಂಗ್ಶು ವಿಭಾಗದಲ್ಲಿ ಬಾಗಲಕೋಟೆಯ ರಮೇಶ್ ಬೂಸಣ್ಣನವರ್-ಚಿನ್ನ, ವಿಜಯಪುರದ ಪ್ರಜ್ವಲ್ ವಿ.ಎಲ್.-ಬೆಳ್ಳಿ, ಗದಗದ ಅಥರ್ವ ಹಿರೇಮಠ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಆರ್. ಡೇನಿಯಲ್ ಜಂಟಿಯಾಗಿ ಕಂಚು ಪಡೆದಿದ್ದಾರೆ.42 ಫಾಮ್ ತೈಜಿಕ್ವಾನ್ ವಿಭಾಗದಲ್ಲಿ ಬಾಗಲಕೋಟೆಯ ಅಭಿಜಿತ್ ಪಾಟೀಲ್‌ಟಿಲ್-ಚಿನ್ನ, ಬೆಂಗಳೂರು ಪೂರ್ವದ ಶಬರೀಶ್ ಎಂ.-ಬೆಳ್ಳಿ, ದಾರವಾಡದ ಸುದರ್ಶನ್ ಹಡಗಲಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವೇಕ್ ಜೆ. ಪೂಜಾರಿ ಅವರುಗಳು ಕಂಚಿನ ಪದಕ ಪಡೆದಿದ್ದಾರೆ. ದೌಶು ವಿಭಾಗದಲ್ಲಿ ಬಾಗಲಕೋಟೆಯ ದಿನೇಶ್ ಎ.ಎಂ.-ಚಿನ್ನ, ಬೆಂಗಳೂರು ಪೂರ್ವದ ರಕ್ಷಿತ್ ಎಂ.ಎಲ್.-ಬೆಳ್ಳಿ, ವಿಜಯನಗರದ ಎಸ್. ಅಖಿಲ್ ಮತ್ತು ಬೆಳಗಾವಿಯ ಅನಿರುದ್ಧ್ ಜಂಟಿಯಾಗಿ ಕಂಚಿನ ಪದಕ ಪಡೆದುಕೊಂಡರು.
ಮಂಗಳೂರಲ್ಲಿ ಇಂದಿನ ಪಂದ್ಯಜ.20ರಂದು ಮಂಗಳೂರಿನ ಯು.ಎಸ್.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಬಾಸ್ಕೆಟ್ ಬಾಲ್, ನೆಹರೂ ಕ್ರೀಡಾಂಗಣದಲ್ಲಿ ಫುಟ್‌ಬಾಲ್, ಎಮ್ಮೆಕೆರೆ ಅಂ.ರಾ. ಈಜು ಕೊಳದಲ್ಲಿ ಈಜು ಸ್ಪರ್ಧೆ, ರಾಜ್ಯ ಸರ್ಕಾರಿ ನೌಕರರ ಸಭಾಭವನದಲ್ಲಿ ಟೇಕ್ವಾಂಡೋ, ಮಂಗಳಾ ಕ್ರೀಡಾಂಗಣದಲ್ಲಿ ವಾಲಿಬಾಲ್ ಸ್ಪರ್ಧೆಗಳು ನಡೆಯಲಿವೆ.