ಅಳ್ವೆಕೋಡಿ ಕಿರುಬಂದರು ಮೇಲ್ದರ್ಜೆಗೆ ಪ್ರಸ್ತಾವ: ಮಂಕಾಳು ವೈದ್ಯ

| Published : Jun 20 2024, 01:06 AM IST

ಅಳ್ವೆಕೋಡಿ ಕಿರುಬಂದರು ಮೇಲ್ದರ್ಜೆಗೆ ಪ್ರಸ್ತಾವ: ಮಂಕಾಳು ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ಅಳ್ವೆಕೋಡಿಯಲ್ಲಿ 720 ಮೀ. ತಡೆಗೋಡೆ ಇದ್ದು, ಇದನ್ನು ಮತ್ತೆ ೧೦೦ ಮೀಟರ್ ವಿಸ್ತರಿಸಲಾಗುತ್ತಿದ್ದು, ಈ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ.

ಭಟ್ಕಳ: ತಾಲೂಕಿನ ತೆಂಗಿನಗುಂಡಿ ಬಂದರು ಪ್ರದೇಶಕ್ಕೆ ಮೀನುಗಾರಿಕಾ ಮತ್ತು ಬಂದರು ಸಚಿವ ಮಂಕಾಳು ಎಸ್. ವೈದ್ಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಳ್ವೆಕೋಡಿ ಕಿರುಬಂದರನ್ನು ಮೇಲ್ದರ್ಜೆಗೆ ಏರಿಸಿ ಬಂದರನ್ನಾಗಿ ಮಾಡುವ ₹25 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಿದ್ಧವಾಗಿದೆ. ಈ ಅನುದಾನ ಸಚಿವ ಸಂಪುಟದಲ್ಲಿ ಮಂಜೂರಿಯಾಗಬೇಕು. ಶೀಘ್ರದಲ್ಲಿ ಅಳ್ವೆಕೋಡಿ ಬಂದರಿಗೆ ಹಾಗೂ ಮೀನುಗಾರರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಅಳ್ವೆಕೋಡಿಯಲ್ಲಿ 720 ಮೀ. ತಡೆಗೋಡೆ ಇದ್ದು, ಇದನ್ನು ಮತ್ತೆ ೧೦೦ ಮೀಟರ್ ವಿಸ್ತರಿಸಲಾಗುತ್ತಿದ್ದು, ಈ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದರು.

ಮೀನುಗಾರರ ಮುಖಂಡರು ಸಚಿವರಲ್ಲಿ ಬಂದರು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ರವಿ, ತೆಂಗಿನಗುಂಡಿ ಬಂದರಿನ ಪರ್ಸಿಯನ್ ಬೋಟ್ ಅಧ್ಯಕ್ಷ ಜಟಕಾ ಮೊಗೇರ, ಅಳ್ವೆಕೋಡಿ ಶ್ರೀ ದುರ್ಗಾ ಮೊಗೇರ ಅಸೋಸಿಯೇಶನ್ ಅಧ್ಯಕ್ಷ ಯಾದವ ಮೊಗೇರ, ಶಿರಾಲಿ ಗ್ರಾಪಂ ಅಧ್ಯಕ್ಷ ಭಾಸ್ಕರ ದೈಮನೆ, ಅಳ್ವೆಕೋಡಿ ಮೀನುಗಾರರ ಸೊಸೈಟಿಯ ನಿರ್ದೇಶಕರು, ಮೀನುಗಾರರ ಮುಖಂಡರಿದ್ದರು.