ಆಳ್ವಾಸ್‌ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ: ಶೈಕ್ಷಣಿಕ ಪ್ರವೇಶ ಆಹ್ವಾನ

| Published : Mar 07 2025, 11:47 PM IST

ಆಳ್ವಾಸ್‌ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ: ಶೈಕ್ಷಣಿಕ ಪ್ರವೇಶ ಆಹ್ವಾನ
Share this Article
  • FB
  • TW
  • Linkdin
  • Email

ಸಾರಾಂಶ

ಮೂಡುಬಿದಿರೆ ಆಳ್ವಾಸ್ ಪದವಿ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸಹಯೋಗದ ‘ಆಳ್ವಾಸ್ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ’ವು 2024-2025ರ ಜನವರಿ ಆವೃತ್ತಿಯ ಪ್ರಥಮ ವರ್ಷದ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಇಲ್ಲಿನ ಆಳ್ವಾಸ್ ಪದವಿ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸಹಯೋಗದ ‘ಆಳ್ವಾಸ್ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ’ವು 2024-2025ರ ಜನವರಿ ಆವೃತ್ತಿಯ ಪ್ರಥಮ ವರ್ಷದ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ.

ಈ ಕೇಂದ್ರದ ಮೂಲಕ ವಿದ್ಯಾರ್ಥಿಗಳು ಸ್ನಾತಕ (ಯುಜಿ)ದ ಬಿ.ಎ, ಬಿ.ಕಾಂ, ಬಿ.ಲಿಬ್.ಐ.ಎಸ್.ಸಿ, ಬಿ.ಬಿ.ಎ, ಬಿ.ಎಸ್.ಡಬ್ಲ್ಯೂ., ಬಿ.ಎಸ್ಸಿ (ಸಂಯೋಜನೆಗಳು), ಬಿ.ಎಸ್‌ಸಿ ಹೋಮ್-ಇನ್ಫಾರ್ಮೇಷನ್ ಟೆಕ್ನಾಲಜಿ, ಬಿ.ಸಿ.ಎ (ಬ್ಯಾಚುರಲ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್) ಪದವಿಗಳನ್ನು ಮಾಡಬಹುದಾಗಿದೆ.

ಸ್ನಾತಕೋತ್ತರ ವಿಭಾಗದಲ್ಲಿ ಎಂ.ಎ- ಶಿಕ್ಷಣ, ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ಇತಿಹಾಸ, ರಾಜ್ಯಶಾಸ್ತç, ಸಾರ್ವಜನಿಕ ಆಡಳಿತ, ಉರ್ದು, ಸಂಸ್ಕೃತ, ಸಮಾಜಶಾಸ್ತç, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಎಂ.ಎಸ್.ಡಬ್ಲ್ಯೂ, ಎಂ.ಬಿ.ಎ-ಆನ್‌ಲೈನ್ ಪ್ರವೇಶ ಪರೀಕ್ಷೆ ಮೂಲಕ (ಫೈನಾನ್ಸ್, ಮಾರ್ಕೆಟಿಂಗ್, ಎಚ್.ಆರ್. ಆಪರೇಷನ್. ಟೂರಿಸಂ ಕಾಪ್ರೊರೇಟ್ ಲಾ, ಇನ್‌ಫರ್ಮನೇಷನ್ ಟೆಕ್ನಾಲಜಿ, ಆಸ್ಪತ್ರೆ ಮತ್ತುಆರೋಗ್ಯ ಕಾಳಜಿ ನಿರ್ವಹಣೆ.), ಎಂ.ಕಾಂ. ಡ್ಯುಯೆಲ್ ಸ್ಪೆಷಲೈಜೇಷನ್

(ಅಕೌಂಟಿಂಗ್ ಮತ್ತು ಫೈನಾನ್ಸ್ / ಎಚ್‌ಆರ್‌ಎಂ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್ ಮತ್ತು ಎಚ್‌ಆರ್‌ಎಂ / ಫೈನಾನ್ಸ್), ಎಂ.ಸಿ.ಎ, ಎಂ.ಲಿಬ್.ಐ.ಎಸ್‌ಸಿ, ಎಂ.ಎಸ್‌ಸಿ (ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ, ಬಯೋಕೆಮಿಸ್ಟ್ರಿ, ಬಯೋಟೆಕ್ನಾಲಜಿ, ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯಟಿಷಿಯನ್, ಪರಿಸರ ವಿಜ್ಞಾನ, ಭೂಗೋಳಶಾಸ್ತ್ರ, ಮೈಕ್ರೋಬಯಾಲಜಿ ಮನಃಶಾಸ್ತ್ರ, ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ, ಫುಡ್ ಮತ್ತು ನ್ಯೂಟ್ರಿಷನ್ ಸೈನ್ಸ್ ಮಾಹಿತಿ ತಂತ್ರಜ್ಞಾನ ಡಾಟಸೈನ್, ಕಂಪ್ಯೂಟರ್‌ಸೈನ್ಸ್). ಪಿಜಿ ಸರ್ಟಿಫಿಕೇಟ್ ಕಾರ್ಯಕ್ರಮಗಳು- ಇಂಗ್ಲಿಷ್, ಕಮ್ಯುನಿಕೇಶನ್, ಇಂಗ್ಲಿಷ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ಕುವೆಂಪು ಸಾಹಿತ್ಯ, ಹಣಕಾಸು ನಿರ್ವಹಣೆ ಮಾನವ ಸಂಪನ್ಮೂಲ ನಿರ್ವಹಣೆ, ಬಿಸಿನೆಸ್ ಲಾ, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್, ಅಂಬೇಡ್ಕರ್ ಅಧ್ಯಯನಗಳನ್ನು ಅಭ್ಯಸಿಸಬಹುದಾಗಿದೆ.

ಡಿಪ್ಲೋಮ ಶಿಕ್ಷಣ ಕಾರ್ಯಕ್ರಮಗಳಾದ ಕನ್ನಡ, ಪತ್ರಿಕೋದ್ಯಮ, ನ್ಯೂಟ್ರಿಷನ್ ಮತ್ತು ಹೆಲ್ತ್ ಎಜುಕೇಷನ್, ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ಅಪ್ಲಿಕೇಷನ್, ಅರ್ಲಿ ಚೈಲ್ಡ್ಹುಡ್‌ಕೇರ್ ಎಜುಕೇಷನ್ ಹಾಗೂ ಸರ್ಟಿಫಿಕೇಟ್ ಶಿಕ್ಷಣ ಕಾರ್ಯಕ್ರಮಗಳಾದ(ಆರು ತಿಂಗಳು)- ಪಂಚಾಯತ್‌ರಾಜ್, ನ್ಯೂಟ್ರಿಷನ್ ಮತ್ತು ಫುಡ್, ಮಾಹಿತಿ ಸಂವಹನ ತಂತ್ರಜ್ಞಾನದ (ಐಸಿಟಿ) ಕೋರ್ಸಗಳನ್ನು ಮಾಡಬಹುದಾಗಿದೆ.

ಈ ಮೇಲಿನ ಪದವಿ, ಸ್ನಾತಕೋತ್ತರ ಹಾಗೂ ಡಿಪ್ಲೊಮಾಗಳಿಗೆ ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ +917090715010, 9591546202 ಸಂಪರ್ಕಿಸಬಹುದು. ಇಲ್ಲವೇ, ಇಮೇಲ್:administration@alvas.org ಮೂಲಕವೂ ಮಾಹಿತಿ ಪಡೆದುಕೊಳ್ಳಬಹುದು.

ಔದ್ಯೋಗಿಕ ನೆಲೆಯಲ್ಲಿ ಸ್ನಾತಕೋತ್ತರ, ಪದವಿ, ಒಂದು ವರ್ಷದ ಡಿಪ್ಲೊಮಾ ಹಾಗೂ ಆರು ತಿಂಗಳ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ವಿವಿಧ ವಿಷಯಗಳಲ್ಲಿ ಮಾಡಲು ಅವಕಾಶವಿದ್ದು, ಉದ್ಯೋಗ ಮಾಡಿಕೊಂಡು ಕೋರ್ಸ್ ಮಾಡಲು ಅವಕಾಶ ದೊರೆತಿದೆ.