ಸಾರಾಂಶ
ಕ್ಷೇತ್ರದಲ್ಲಿ ಜನಪರ ಅಭಿವೃದ್ಧಿಗೆ ಸದಾ ಸಿದ್ಧನಾಗಿದ್ದು, ಜನರ ಸಹಕಾರದಿಂದ ಮಾತ್ರ ಮತ್ತಷ್ಟೂ ಅಭಿವೃದ್ಧಿ ಕಾರ್ಯಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ಹುಣಸಗಿ: ಕ್ಷೇತ್ರದಲ್ಲಿ ಜನಪರ ಅಭಿವೃದ್ಧಿಗೆ ಸದಾ ಸಿದ್ಧನಾಗಿದ್ದು, ಜನರ ಸಹಕಾರದಿಂದ ಮಾತ್ರ ಮತ್ತಷ್ಟೂ ಅಭಿವೃದ್ಧಿ ಕಾರ್ಯಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.
ಪಟ್ಟಣದ ಆಶ್ರಯ ಕಾಲೋನಿ ಹತ್ತಿರದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ವತಿಯಿಂದ, ಕೆಕೆಆರ್‌ಡಿಬಿಯಡಿಯಲ್ಲಿ 5 ಕೋಟಿ ರು.ಗಳ ವೆಚ್ಚದ ಅನುದಾನದಲ್ಲಿ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ನೂತನ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.ಹುಣಸಗಿ ಈ ಭಾಗದಲ್ಲಿ ಶೈಕ್ಷಣಿಕವಾಗಿ ಅಭ್ಯುದಯ ಸಾಧಿಸಲು ವಸತಿ ಸೌಕರ್ಯ ವಿದ್ಯಾರ್ಥಿಗಳಿಗೆ ಬಹಳ ಅನುಕೂಲ ಆಗಲಿದೆ. ಈಗಾಗಲೇ ಸರಕಾರಿ ಡಿಗ್ರಿ ಕಾಲೇಜು ನೂತನ ಕಟ್ಟಡ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಸಾರಿಗೆ ಡಿಪೋ, ಪ್ರಜಾಸೌಧ, ಬಿಇಓ ಕಚೇರಿ, ಕ್ರೀಡಾಂಗಣ ಹೀಗೇ ತಾಲೂಕು ಅಭಿವೃದ್ಧಿಗೆ ಹಲವಾರು ಕಾಮಗಾರಿಗಳನ್ನು ಶೀಘ್ರವೇ ಕೈಗೊಳ್ಳಲು ಮತುವರ್ಜಿ ವಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ ವಜ್ಜಲ್, ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ಪ.ಪಂ.ಅಧ್ಯಕ್ಷ ತಿಪ್ಪಣ್ಣನಾಯ್ಕ ರಾಠೋಡ, ಉಪಾಧ್ಯಕ್ಷ ಶಾಂತಣ್ಣ ಮಲಗಲದಿನ್ನಿ, ಮಲ್ಲಣ್ಣ ಸಾಹು ಮುಧೋಳ, ಪ.ಪಂ.ಸದಸ್ಯರಾದ ಚನ್ನಯ್ಯಸ್ವಾಮಿ ಹಿರೇಮಠ, ಶರಣು ದಂಡಿನ ಮುಂತಾದವರಿದ್ದರು.