ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಲು ಸದಾ ಸಿದ್ಧ

| Published : May 01 2025, 12:51 AM IST

ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡಲು ಸದಾ ಸಿದ್ಧ
Share this Article
  • FB
  • TW
  • Linkdin
  • Email

ಸಾರಾಂಶ

ನನ್ನ ಪತ್ನಿ ವೀರಶೈವ ಲಿಂಗಾಯತಕ್ಕೆ ಸಮಾಜದವರು.ನನ್ನ ಪತ್ನಿಗೂ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು.

ಬಳ್ಳಾರಿ: ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಲು ನಾನು ಸದಾ ಸಿದ್ಧ. ಯಾರೇ ಬಡ ವಿದ್ಯಾರ್ಥಿಗಳಿರಲಿ ನನ್ನನ್ನು ಸಂಪರ್ಕಿಸಿದರೆ ಅವರಿಗೆ ಶಿಕ್ಷಣಕ್ಕೆ ಸಹಾಯ ಮಾಡುವೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಭರವಸೆ ನೀಡಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ರಾತ್ರಿ ಜರುಗಿದ ಬಸವೇಶ್ವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನನ್ನ ಪತ್ನಿ ವೀರಶೈವ ಲಿಂಗಾಯತಕ್ಕೆ ಸಮಾಜದವರು.ನನ್ನ ಪತ್ನಿಗೂ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು.ಶೈಕ್ಷಣಿಕ ನೆರವು ನೀಡಬೇಕು ಎಂಬ ಮಹಾದಾಸೆ ಅವರದ್ದು. ನನಗೂ ಹಾಗೂ ನಮ್ಮ ತಂದೆಯವರಿಗೆ ರಾಜಕೀಯ ಭವಿಷ್ಯ ನೀಡಿದ ವೀರಶೈವ ಲಿಂಗಾಯತ ಸಮಾಜವನ್ನು ನಾವೆಂದೂ ಮರೆಯಲು ಸಾಧ್ಯವಿಲ್ಲ. ವೀರಶೈವ ಲಿಂಗಾಯತರ ಋಣ ತೀರಿಸಲು ನನ್ನ ಕೈಲಾದ ನೆರವು-ಸಹಾಯ ಮಾಡುವೆ ಎಂದರು.

ಬಳ್ಳಾರಿಯ ಕೆಇಬಿ ವೃತ್ತದಲ್ಲಿ ಒಂದುವರೆ ಕೋಟಿ ವೆಚ್ಚದಲ್ಲಿ ಅಶ್ವರೋಹಿ ಬಸವೇಶ್ವರ ಪುತ್ಥಳಿ ನಿರ್ಮಿಸಲು ನಿರ್ಧರಿಸಲಾಗಿದ್ದು, ಇಂದು ಭೂಮಿಪೂಜೆ ಮಾಡಲಾಗಿದೆ. ಬಳ್ಳಾರಿಯಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಬಸವ ಸಂಗಮ ಕಾರ್ಯಕ್ರಮ ಆಯೋಜಿಸಲಾಗುವುದು.ರಾಜ್ಯದ ನಾನಾ ಕಡೆಗಳಿಂದ ಸ್ವಾಮೀಜಿಗಳು, ವಿವಿಧ ಮಠಾಧೀಶರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ವೀರಶೈವ ಲಿಂಗಾಯತ ಸಮಾಜದವರು ಒಂದೆಡೆ ಸೇರಿಸಿ ದೊಡ್ಡ ಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಸಂಪೂರ್ಣ ಖರ್ಚುವೆಚ್ಚಗಳನ್ನು ನಾನೇ ವ್ಯಯಿಸುವೆ ಎಂದರಲ್ಲದೆ, ವೀರಶೈವ ಸಮಾಜ ನನಗೆ ಮಾಡಿದ ಸಹಾಯ ನಾನೆಂದೂ ಮರೆಯಲು ಸಾಧ್ಯವಿಲ್ಲ ಎಂದು ಪುನರುಚ್ಛರಿಸಿದರು.

ಬಸವ ಜಯಂತಿ ಕಾರ್ಯಕ್ರಮಕ್ಕೆ ವೀರಶೈವ ಸಮಾಜದವರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಐಕ್ಯತೆ ಪ್ರದರ್ಶಿಸಿದೆ. ಜನಸಾಗರ ನೋಡಿ ನನಗೆ ಅತ್ಯಂತ ಸಂತಸಗೊಂಡಿದ್ದೇನೆ.ವೀರಶೈವ ಸಮಾಜದ ಅತ್ಯಂತ ಸಾತ್ವಿಕ ಸಮಾಜವಾಗಿದ್ದು, ಸಮಯ ಬಂದಾಗ ಬಸವಣ್ಣನವರಂತೆ ಅಶ್ವರೋಹಿಯಾಗಿ ಹೋರಾಟಕ್ಕೂ ಮುನ್ನುಗ್ಗುವ ಸಮಾಜವಾಗಿದೆ. ಶರಣರ ತತ್ವಗಳ ರಕ್ಷಣೆಗಾಗಿ ತ್ಯಾಗಕ್ಕೂ ಸಿದ್ಧವಾಗುವ ಈ ಸಮಾಜವು ನಾಡಿಗೆ ನೀಡಿದ ಕೊಡುಗೆ ದೊಡ್ಡದು.ರಾಜ್ಯದ ನೂರಾರು ಮಠ ಮಾನ್ಯಗಳು ಎಲ್ಲ ಸಮುದಾಯಗಳ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಅಕ್ಷರದಾಸೋಹ ಮಾಡಿವೆ. ಅನ್ನ, ಆಶ್ರಯ ಹಾಗೂ ಅಕ್ಷರ ನೀಡಿ ಸಲುಹಿರುವ ವೀರಶೈವ ಮಠ ಮಾನ್ಯಗಳ ಕೊಡುಗೆ ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿದರು.

ಕೊಟ್ಟೂರು ಸಂಸ್ಥಾನ ಮಠದ ಬಸವಲಿಂಗಸ್ವಾಮಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ವೀರಶೈವ ಸಮಾಜದ ಹಿರಿಯ ಮುಖಂಡರಾದ ಸಿರಿಗೇರಿ ಪನ್ನರಾಜ್, ಅಲ್ಲಂ ಪ್ರಶಾಂತ್, ಮಾಜಿ ಮೇಯರ್ ರಾಜೇಶ್ವರಿ, ವೀವಿ ಸಂಘದ ಕಾರ್ಯದರ್ಶಿ ಡಾ. ಅರವಿಂದ ಪಾಟೀಲ್, ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಚಾನಾಳ್ ಶೇಖರ್, ಸಾಹುಕಾರ ಸತೀಶ್ ಬಾಬು, ದರೂರು ಪುರುಷೋತ್ತಮಗೌಡ, ಪಾಲಿಕೆ ಸದಸ್ಯೆ ಸುರೇಖಾ ಮಲ್ಲನಗೌಡ, ಮಿಂಚು ಶ್ರೀನಿವಾಸ್, ತೆಂಗಿನಕಾಯಿ ರಾಜಣ್ಣ, ದರೂರು ಶಾಂತನಗೌಡ, ಚೋರನೂರು ಕೊಟ್ರಪ್ಪ, ಸಾಗರ್‌ ದರೂರು, ಮೀನಳ್ಳಿ ಚಂದ್ರಶೇಖರಗೌಡ, ಟಿಎಚ್ಎಂ ಬಸವರಾಜ, ತಿಮ್ಮನಗೌಡ, ಯಾಳ್ಪಿ ಪಂಪನಗೌಡ, ಬಸವದಳದ ಕಾರ್ಯದರ್ಶಿ ರವಿಶಂಕರ್

ಸೇರಿದಂತೆ ವೀರಶೈವ ಸಮಾಜದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.