ಸಾರಾಂಶ
ದಿನದ ೨೪ ಗಂಟೆಯೂ ತಮ್ಮನ್ನು ಜನರು ಭೇಟಿ ಮಾಡಬಹುದು. ಅಥವಾ ದೂರವಾಣಿ ಕರೆ ಮಾಡಬಹುದು. ತಾವು ಸಾಧ್ಯವಾದಷ್ಟೂ ಪ್ರಾಮಾಣಿಕವಾಗಿ ಜನರ ಆಶೋತ್ತರವನ್ನು ಈಡೇರಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ಜನರ ಆಶೋತ್ತರಗಳಿಗೆ ಸದಾ ಸ್ಪಂದಿಸುವುದಾಗಿ ಬೆಂಗಳೂರು ವಕೀಲರ ಸಂಘದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಬಹುಮತದಿಂದ ಆಯ್ಕೆಯಾದ ಎಚ್.ವಿ.ಪ್ರವೀಣ್ ಗೌಡ ಹೇಳಿದರು.ಕಾರ್ಯದರ್ಶಿಯಾಗಿ ಆಯ್ಕೆಯಾದ ನಂತರ ತಮ್ಮ ಸ್ವಗ್ರಾಮಕ್ಕೆ ಆಗಮಿಸಿದ ಪ್ರವೀಣ್ ಗೌಡ, ಅಭಿಮಾನಿ ಬಳಗ ನೀಡಿದ ಭವ್ಯ ಸ್ವಾಗತವನ್ನು ಸ್ವೀಕರಿಸಿ ಮಾತನಾಡಿ, ಈಗಾಗಲೇ ತಾವು ಬೆಂಗಳೂರು ವಕೀಲರ ಸಂಘದಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಈಗ ಎಲ್ಲಾ ವಕೀಲರು ಪ್ರಧಾನ ಕಾರ್ಯದರ್ಶಿಯಂಥ ಸ್ಥಾನವನ್ನು ನೀಡಿ ಹೆಚ್ಚು ಜವಾಬ್ದಾರಿ ನೀಡಿದ್ದಾರೆ. ಇದಕ್ಕೆ ತಾವು ಋಣಿ. ತಮ್ಮ ಗೆಲುವಿಗೆ ಈ ಕ್ಷೇತ್ರದ ಜನರ ಆಶೀರ್ವಾದವೂ ಇದೆ. ಅಲ್ಲದೇ ಬೆಂಗಳೂರು ನಗರದ ವಕೀಲರ ಸಹಕಾರ ಮರೆಯುವಂತೆಯೇ ಇಲ್ಲ ಎಂದು ಹೇಳಿದರು.
ದಿನದ ೨೪ ಗಂಟೆಯೂ ತಮ್ಮನ್ನು ಜನರು ಭೇಟಿ ಮಾಡಬಹುದು. ಅಥವಾ ದೂರವಾಣಿ ಕರೆ ಮಾಡಬಹುದು. ತಾವು ಸಾಧ್ಯವಾದಷ್ಟೂ ಪ್ರಾಮಾಣಿಕವಾಗಿ ಜನರ ಆಶೋತ್ತರವನ್ನು ಈಡೇರಿಸಲು ಪ್ರಯತ್ನಿಸುವುದಾಗಿ ಹೇಳಿದರು.ಸಂಭ್ರಮ: ಬೆಂಗಳೂರು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರವೀಣ್ ಗೌಡ ಪಟ್ಟಣಕ್ಕೆ ಬರುತ್ತಿದ್ದಂತೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ, ಬೃಹತ್ ಗಾತ್ರದ ಹೂಮಾಲೆ ಹಾಕಿ ಸ್ವಾಗತಿಸಿದರು.
ಮಾವಿನಕೆರೆ ತ್ರಿಜೇಶ್, ಮಾದಿಹಳ್ಳಿ ಕುಶ, ಮಾದಿಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಆನೇಮೆಳೆ ನಂಜುಂಡಪ್ಪ, ಟಿ.ಹೊಸಳ್ಳಿಯ ಚಿದಾನಂದ್, ವೆಂಕಟೇಶ್, ಮಂಜುನಾಥ್, ಶಮಂತ್, ಶ್ರೀನಿವಾಸ್, ಮಾದಿಹಳ್ಳಿ ನವೀನ್ ಕುಮಾರ್, ಗೋಣಿ ತುಮಕೂರು ನಂದೀಶ್, ಮಲ್ಲಾಘಟ್ಟ ಪುಟ್ಟರಾಜು, ಕನ್ನಡದ ಕಂದ ವೆಂಕಟೇಶ್, ವಕೀಲರ ಸಂಘದ ಅಧ್ಯಕ್ಷರಾದ ನಟರಾಜು, ವಕೀಲರಾದ ಈಶ್ವರ್, ಶ್ರೀನಿವಾಸ್, ಎಂ.ಡಿ.ನಟರಾಜು, ವಿನಯ್, ರವಿಕುಮಾರ್, ದೇವರಾಜು, ಸುನಿಲ್, ಹರೀಶ್, ನಂಜೇಗೌಡ ಸೇರಿ ಹಲವರು ಪ್ರವೀಣ್ ಗೌಡರನ್ನು ಅಭಿನಂದಿಸಿದರು.