ಜನರ ಸೇವೆಗೆ ಸದಾ ಸಿದ್ಧ: ಶಾಸಕ ತುನ್ನೂರು

| Published : Oct 15 2023, 12:46 AM IST

ಸಾರಾಂಶ

ಜಿಲ್ಲೆಯ ವಡಗೇರಾ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಯಾದಗಿರಿ-ವಡಗೇರಾ-ಶಹಾಪುರ ಹಾಗೂ ಯಾದಗಿರಿ-ವಡಗೇರಾ-ಸುರಪುರಗೆ ಆರಂಭವಾದ ನೂತನ ಬಸ್‌ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಡಗೇರಾದಲ್ಲಿ ನೂತನ ಬಸ್‌ಗಳ ಸಂಚಾರಕ್ಕೆ ಚಾಲನೆ ಯಾದಗಿರಿ: ಮತಕ್ಷೇತ್ರದ ಗ್ರಾಮೀಣ ಭಾಗದ ಸಾರ್ವಜನಿಕರ ಹಿತವೇ ನನಗೆ ಅತಿ ಮುಖ್ಯವಾಗಿದೆ. ಅವರ ಸೇವೆಗೆ ನಾನು ಸದಾ ಸಿದ್ಧನಿದ್ದೇನೆ ಎಂದು ಯಾದಗಿರಿ ಶಾಸಕ ಚನ್ನಾರೆಡ್ಡಿಗೌಡ ಪಾಟೀಲ್ ತುನ್ನೂರು ಹೇಳಿದರು. ಜಿಲ್ಲೆಯ ವಡಗೇರಾ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಯಾದಗಿರಿ-ವಡಗೇರಾ-ಶಹಾಪುರ ಹಾಗೂ ಯಾದಗಿರಿ-ವಡಗೇರಾ-ಸುರಪುರಗೆ ಆರಂಭವಾದ ನೂತನ ಬಸ್‌ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಾರಿಗೆ ವ್ಯವಸ್ಥೆಯು ಜನರಿಗೆ ತುಂಬಾ ಅವಶ್ಯಕತೆ ಇದೆ. ಅದನ್ನು ಮನಗಂಡು ಬಸ್‌ಗಳನ್ನು ಬಿಡುಗಡೆಗೊಳಿಸಿದ್ದೇನೆ. ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆಯುತ್ತಿದೆ. ಕಟ್ಟ ಕಡೆಯ ವ್ಯಕ್ತಿಗೂ ಕೂಡ ಎಲ್ಲಾ ರೀತಿಯ ಸೌಲಭ್ಯಗಳನ್ನು ದೊರಕಿಸಿ ಕೊಡುವುದೇ ನಮ್ಮ ಸರಕಾರದ ಉದ್ದೇಶವಾಗಿದೆ ಎಂದರು. ನೂತನ ಬಸ್‌ಗಳ ಮಾರ್ಗ ಯಾದಗಿರಿಯಿಂದ ವಡಗೇರಾ, ಕಂಠಿ ಗೊಂದೆನೂರ ಕ್ರಾಸ್, ಹಯ್ಯಾಳ, ಬೀರನೂರ, ಮರಕಲ್, ಲಕ್ಷಂಪುರ, ಸುರಪುರ ತಲುಪುತ್ತದೆ. ಇನ್ನೊಂದು ಬಸ್ ಯಾದಗಿರಿಯಿಂದ ವಡಗೇರಾ, ಗೊಂದೆನೂರ ಕ್ರಾಸ್, ಹಯ್ಯಾಳ, ಹತ್ತಿಗೂಡುರ ಮೂಲಕ ಶಹಾಪುರ ತಲುಪುತ್ತದೆ. ಗ್ರಾಪಂ ಅಧ್ಯಕ್ಷ ಅಶೋಕ ಸಾಹುಕಾರ ಕರಣಗಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮರೆಪ್ಪ ಬಿಳ್ಹಾರ, ವಿಭಾಗ ನಿಯಂತ್ರಣಾಧಿಕಾರಿ ಸುನಿಲ್‌ಕುಮಾರ್ ಚಂದ್ರಗಿ, ವಿಭಾಗೀಯ ಸಂಚಾರ ಅಧಿಕಾರಿ ಎಂ.ಎಸ್. ಹಿರೇಮಠ್, ಪ್ರಶಾಂತ್ ಸುರಪುರ, ಸಾಯಿಬಣ್ಣ, ರವಿಶಂಕರ, ಬಾಶುಮೀಯಾ ನಾಯ್ಕೋಡಿ, ಶರಣು ಇಟಗಿ, ಸಂಗುಗೌಡ ಮಾಲಿ ಪಾಟೀಲ್, ಮೈನುದ್ದೀನ್ ದೇವದುರ್ಗ, ನಿಂಗಣ್ಣಗೌಡ ಬೋರಡ್ಡಿ, ಶಿವರಾಜ್ ಬಾಗುರ, ಶಾಸಕರ ಆಪ್ತಸಹಾಯಕ ರೇವಣಸಿದ್ದಯ್ಯ ಸೆರಿದಂತೆ ಇತರರಿದ್ದರು.