ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ವೆಂಕಟಯ್ಯನಛತ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎ.ಎಂ.ಸೋಮಣ್ಣ, ಉಪಾಧ್ಯಕ್ಷರಾಗಿ ಪರ್ವತಪ್ಪ ಅವಿರೋಧವಾಗಿ ಆಯ್ಕೆಯಾದರು. ಸಂಘದ ಅಧ್ಯಕ್ಷರಾಗಿದ್ದ ಎಚ್.ವಿ.ಗಿರಿಮಲ್ಲು, ಉಪಾಧ್ಯಕ್ಷರಾಗಿದ್ದ ಮಹದೇವಸ್ವಾಮಿ ಅವರು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಸಭಾಂಗಣದಲ್ಲಿ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಎ.ಎಂ.ಸೋಮಣ್ಣ, ಉಪಾಧ್ಯಕ್ಷ ಸ್ಥಾನಕ್ಕೆ ಪರ್ವತಪ್ಪ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಶಿಲ್ಪಶ್ರೀ ಅವರು ಅಧಿಕೃತವಾಗಿ ಘೋಷಣೆ ಮಾಡಿದರು. ಸಂಘದ ಅಭಿವೃದ್ಧಿಗೆ ಬದ್ಧ:ನೂತನ ಅಧ್ಯಕ್ಷ ಎ.ಎಂ.ಸೋಮಣ್ಣ ಅಧಿಕಾರ ಸ್ವೀಕರಿಸಿ ಮಾತನಾಡಿ, ಸಂಘದ ಅಧ್ಯಕ್ಷನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದಕ್ಕೆ ಸಂಘದ ಸರ್ವ ಸದಸ್ಯರು ಹಾಗೂ ಸಹಕಾರಿ ಮುಖಂಡರು ಮತ್ತು ಹಿರಿಯರಿಗೆ ಆಭಾರಿಯಾಗಿದ್ದೇನೆ. ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಸಂಘವು ಬಹಳಷ್ಟು ಅಭಿವೃದ್ಧಿಯಾಗಿದೆ, ಅವರ ಮಾರ್ಗದರ್ಶನ ಹಾಗೂ ಹಿರಿಯ ಸಹಕಾರಿಗಳಾದ ಎಚ್.ಎಸ್.ಬಸವರಾಜು, ಎಚ್.ಎಂ. ಬಸವಣ್ಣ ಅವರ ಸಲಹೆ, ಸೂಚನೆಗಳನ್ನು ಪಡೆದು ಸಂಘವನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿ ಪಡಿಸುವುದಾಗಿ ತಿಳಿಸಿದರು. ಸಭೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ಗಿರಿಮಲ್ಲು, ಮಾಜಿ ಉಪಾಧ್ಯಕ್ಷ ಮಹದೇವಸ್ವಾಮಿ, ನಿರ್ದೇಶಕರಾದ ಚನ್ನರಾಜು, ಜೆ.ಮಧು, ಸಿ.ಶಿವಣ್ಣ, ನಂದೀಶ್, ಅರುಣಕುಮಾರಿ, ರಾಗಿಣಿ, ಸೋಮಣ್ಣ, ಚಲುವಯ್ಯ, ಚಾಮುಲ್ ನಿರ್ದೇಶಕ ಎಚ್.ಎಸ್.ಬಸವರಾಜು, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಚ್.ಎಂ. ಬಸವಣ್ಣ, ಗ್ರಾಪಂ ಉಪಾದ್ಯಕ್ಷ ಕೃಷ್ಣಮೂರ್ತಿ, ಸದಸ್ಯರಾದ ಆಶೋಕ್, ಸ್ವಾಮಿ, ಪ್ರಮೀಳಾ, ಮುಖಂಡರಾದ ನಂಜುಂಡಸ್ವಾಮಿ, ಸಿಇಒ ನಾಗರಾಜಮ್ಮ, ಸಿಬ್ಬಂದಿ ಮಹೇಶ್ ಇತರರು ಇದ್ದರು.