ಬಾಳೆಹೊನ್ನೂರುಶ್ರೀ ಗುರುವಿನ ಶಕ್ತಿ ಸಾಮರ್ಥ್ಯ ಅಗಾಧವಾದುದು. ಗುರುವಿನ ಅಂತರಂಗದಲ್ಲಿ ಆತ್ಮಾನುಭವದ ಮಕರಂದ ಸುಜ್ಞಾನ ಸೌರಭ ಕಾಣಬಹುದು. ಶ್ರೀ ಗುರು ಆಧ್ಯಾತ್ಮ ಲೋಕದಲ್ಲಿ ಅರಳಿದ ಅಮರ ಪುಷ್ಪ ಎಂದು ಶ್ರೀ ರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರು ಹೇಳಿದರು.

ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಧರ್ಮ ಸಮಾರಂಭ

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಶ್ರೀ ಗುರುವಿನ ಶಕ್ತಿ ಸಾಮರ್ಥ್ಯ ಅಗಾಧವಾದುದು. ಗುರುವಿನ ಅಂತರಂಗದಲ್ಲಿ ಆತ್ಮಾನುಭವದ ಮಕರಂದ ಸುಜ್ಞಾನ ಸೌರಭ ಕಾಣಬಹುದು. ಶ್ರೀ ಗುರು ಆಧ್ಯಾತ್ಮ ಲೋಕದಲ್ಲಿ ಅರಳಿದ ಅಮರ ಪುಷ್ಪ ಎಂದು ಶ್ರೀ ರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರು ಹೇಳಿದರು.

ರಂಭಾಪುರಿ ಪೀಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಗುರುವಾರ ನಡೆದ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಭೌತಿಕ ಜೀವನದಲ್ಲಿ ತಂದೆ ತಾಯಿ ಒಡಹುಟ್ಟಿದ ಸಹೋದರ ಸಹೋದರಿಯರ ಮತ್ತು ಸತಿ ಪತಿಗಳ ಪ್ರಾಪಂಚಿಕ ಸಂಬಂಧ ಗಳು ಒಂದೊಂದು ನಿಮಿತ್ತದಿಂದಾಗಿದೆ. ಈ ಸಂಬಂಧ ಇಲ್ಲದಿದ್ದರೆ ನಮ್ಮತ್ತ ಅವರು ತಿರುಗಿ ನೋಡುವುದಿಲ್ಲ. ಆದರೆ ಗುರು ಶಿಷ್ಯರಲ್ಲಿ ಪ್ರಾಪಂಚಿಕವಾದ ಯಾವ ಸಂಬಂಧವೂ ಇಲ್ಲ. ಗುರು ಶಿಷ್ಯರಲ್ಲಿ ಕೊಡಕೊಳ್ಳುವ ಲೌಕಿಕ ಸಂಬಂಧ ಅವರಲ್ಲಿಲ್ಲ.

ಸತ್ಯಾನುಭೂತಿಗಳಾಗಿ ಸಮಸ್ತ ಜಗತ್ತನ್ನೇ ಸರಿಸಿ ಬಂದವ ಶ್ರೀ ಗುರು. ಗುರು ಸಾನ್ನಿಧ್ಯದಲ್ಲಿ ಆತ್ಮಾನುಭವ ಪಡೆಯಲು ಬಂದವ ಶಿಷ್ಯ. ಪರಮ ಗುರುವಿನ ಜ್ಞಾನ ಬೋಧನೆಯಿಂದ ಶಿಷ್ಯನ ಸಂಶಯಗಳೆಲ್ಲ ದೂರವಾಗುತ್ತವೆ. ನಿಜಾನಂದ ಪ್ರಾಪ್ತವಾ ಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಜಗತ್ ಕಲ್ಯಾಣಕ್ಕಾಗಿ ಜನಮನ ಜಾಗೃತಿಗೊಳಿಸಲು ಬಂದವರು. ಜಾತಿ ಮತ ಪಂಥಗಳನ್ನು ಮೀರಿ ಜನರ ಒಳಿತು, ಶ್ರೇಯಸ್ಸಿಗಾಗಿ ಶ್ರಮಿಸಿದ್ದನ್ನು ಮರೆಯಲಾಗದು ಎಂದರು.

ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನದಲ್ಲಿ ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾ ರ್ಯರು ಮಾತನಾಡಿ, ಗುರು ಶಿಷ್ಯರ ಸಂಬಂಧ ಎಲ್ಲ ಸಂಬಂಧಗಳಿಗಿಂತ ಮಿಗಿಲಾದದ್ದು. ಎಲ್ಲ ಕಾಲದಲ್ಲೂ ಗುರು ಶಿಷ್ಯರ ಸಂಬಂಧ ಬೆಳೆದುಕೊಂಡು ಬಂದಿದೆ. ತಂದೆ ಜನ್ಮಕ್ಕೆ ಕಾರಣಿಭೂತನಾದರೆ ಗುರುವು ಸನ್ಮಾರ್ಗಕ್ಕೆ ಕರೆದೊಯ್ಯುವ ಮಹಾನ್ ಶಕ್ತಿಯಾಗಿದ್ದಾನೆ.

ತಂದೆಯಿಂದ ಭೌತಿಕ ಸಿರಿ ಸಂಪತ್ತು ಪಡೆಯಬಹುದು. ಆದರೆ ಗುರುವು ಅಮರ ಸಿರಿ ದಿವ್ಯ ಜೀವನ ಕರುಣಿಸುವ ಜ್ಞಾನ ಸಾಗರ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ವಿಚಾರ ಧಾರೆಗಳು ಜೀವ ಸಂಕುಲದ ಶ್ರೇಯಸ್ಸಿಗೆ ಸಂಜೀವಿನಿ ಯಾಗಿವೆ ಎಂದರು.

ಅಂಬಾಜೋಗಾಯಿ ಶಂಭುಲಿಂಗ ಶ್ರೀ, ತಡವಲಗಾ ರಾಚೋಟೇಶ್ವರ ಶ್ರೀ, ಹನುಮಾಪುರ ಡಾ. ಸೋಮಶೇಖರ ಶ್ರೀ, ಹುಡುಗಿ ಹಿರೇಮಠದ ಸೋಮೇಶ್ವರ ಶ್ರೀ ಮತ್ತು ಕರ್ಜಿಗಿ ಶಂಭು ಸೋಮನಾಥ ಶ್ರೀ, ಗುರುವಿನ ಮಹತ್ವದ ಕುರಿತು ಮಾತನಾಡಿದರು.

ಇದೇ ಸಂದರ್ಭದಲ್ಲಿ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವದ ಆಮಂತ್ರಣ ಪತ್ರಿಕೆ ಶ್ರೀ ರಂಭಾಪುರಿ ಜಗದ್ಗುರು ಬಿಡುಗಡೆ ಮಾಡಿದರು. ವೀರಶೈವ-ಲಿಂಗಾಯತ ಸಂಘಟನಾ ವೇದಿಕೆ ಪ್ರದೀಪ ಕಂಕನವಾಡಿ, ಚಂದ್ರಶೇಖರ್, ಬೆಂಗಳೂರಿನ ಎಸ್.ಆರ್.ವೀರಭದ್ರಯ್ಯ, ಪ್ರಭುದೇವ ಕಲ್ಮಠ, ಎಂ.ಕೊಟ್ರೇಶಪ್ಪ, ಯು.ಎಂ.ಬಸವರಾಜ, ಪ್ರಭು ಅಣ್ಣಿಗೇರಿ, ಶಿಗ್ಗಾಂವಿ ಲಿಂಗಯ್ಯ ಹಿರೇಮಠ, ಪ್ರೊ. ತೊಂಡಿಹಾಳ, ಪ್ರೊ.ಶಿವಣ್ಣನವರು ಮುಂತಾದವರು ಪಾಲ್ಗೊಂಡಿದ್ದರು.

ಲೋಕಕಲ್ಯಾಣ, ವಿಶ್ವಶಾಂತಿಗಾಗಿ ಶ್ರೀ ರಂಭಾಪುರಿ ಜಗದ್ಗುರು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಬಂದ ಭಕ್ತ ಸಮುದಾ ಯಕ್ಕೆ ಶುಭ ಹಾರೈಸಿದರು. ಪ್ರಾತಃಕಾಲದಲ್ಲಿ ಶ್ರೀ ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಹಾಗೂ ಪುಷ್ಪಾಲಂಕಾರ ನಡೆಯಿತು. ೨೭ಬಿಹೆಚ್‌ಆರ್ ೫:

ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜಾ ಸಮಾರಂಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು.