ಸಾರಾಂಶ
ಷಣಾ ಸೇವಾ ಟ್ರಸ್ಟ್ ಸಂಸ್ಥಾಪಕ ಅಮರನಾಥರಾಜೇ ಅರಸು ಅವರು ವೈದ್ಯವಾರ್ತಾ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಮಾಡುವರು
ಕನ್ನಡಪ್ರಭ ವಾರ್ತೆ ಮೈಸೂರು
ಅನ್ವೇಷಣಾ ಸೇವಾ ಟ್ರಸ್ಟ್, ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ಫೆ.2 ರಂದು ಬೆಳಗ್ಗೆ 10.30ಕ್ಕೆ ಜೆಎಲ್ ಬಿ ರಸ್ತೆ. ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಸೇರಿದಂತೆ ಆರು ಮಂದಿಗೆ ಧ್ವನಿ ಕೊಟ್ಟ ದಣಿ ಪ್ರಶಸ್ತಿ ಪ್ರದಾನ ಮಾಡಲಿದೆ.ಅಂಶಿ ಪ್ರಸನ್ನಕುಮಾರ್, ಎಸ್.ಟಿ. ರವಿಕುಮಾರ್, ಆರ್. ಕೃಷ್ಣ, ಕೆ. ನರಸಿಂಹಮೂರ್ತಿ, ಟಿ.ವಿ. ರಾಜೇಶ್ವರ್, ಎಂ.ಎ. ಶ್ರೀರಾಂ ಅವರಿಗೆ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮ ಪ್ರವರ್ತಕ ಭೀಮೇಶ್ವರ ಜೋಶಿ ಪ್ರಶಸ್ತಿ ಪ್ರದಾನ ಮಾಡುವರು.
ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಭಾವಚಿತ್ರಕ್ಕೆ ಶಾಸಕ ಡಾ.ಡಿ. ತಿಮ್ಮಯ್ಯ ಪುಷ್ಪಾರ್ಚನೆ ಮಾಡುವರು. ಅನ್ವೇಷಣಾ ಸೇವಾ ಟ್ರಸ್ಟ್ ಸಂಸ್ಥಾಪಕ ಅಮರನಾಥರಾಜೇ ಅರಸು ಅವರು ವೈದ್ಯವಾರ್ತಾ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಮಾಡುವರು. ಕಂಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಅರಸು ಅಧ್ಯಕ್ಷತೆ ವಹಿಸುವರು.ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟಿನ ಉಪಾಧ್ಯಕ್ಷ ಎಚ್.ಎ. ವೆಂಕಟೇಶ್, ವಿಪ್ರ ಮುಖಂಡ ಕೆ. ರಘುರಾಂ ವಾಜಪೇಯಿ, ಅರಸು ಮಂಡಳಿ ಅಧ್ಯಕ್ಷ ಎಚ್.ಎಂ.ಟಿ. ಲಿಂಗರಾಜೇ ಅರಸು, ಚುಟುಕು ಸಾಹಿತ್ತ್ಯ ಪರಿಷತ್ ಸಂಸ್ಥಾಪಕ ಡಾ.ಎಂಜಿಆರ್ ಅರಸು ಮುಖ್ಯ ಅತಿಥಿಗಳಾಗಿರುವರು.