ಪಟ್ಟಣದ ಸರ್ವಜ್ಞ ವೃತ್ತದಲ್ಲಿ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಆಚರಿಸಲಾಯಿತು.
ಹಿರೇಕೆರೂರು: ಪಟ್ಟಣದ ಸರ್ವಜ್ಞ ವೃತ್ತದಲ್ಲಿ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಆಚರಿಸಲಾಯಿತು.ಈ ವೇಳೆ ಮಾತನಾಡಿದ ವಿಶ್ವಕರ್ಮ ಸಮಾಜದ ಮುಖಂಡ ನಿಂಗಾಚಾರಿ ಮಾಯಾಚಾರ, ಅಮರಶಿಲ್ಪಿ ಜಕಣಾಚಾರಿ ಅವರು ಈ ನಾಡಿಗೆ ನೀಡಿದಂತ ಅನೇಕ ಶಿಲ್ಪ ಪ್ರಕಾರಗಳ ಬಗ್ಗೆ ಹಾಗೂ ಸಂಸ್ಕೃತಿಗಳನ್ನು ಬೆಳೆಸುವಂತಹ ಕೆಲಸವನ್ನು ಹಾಗೂ ದೈವಿಕವಾಗಿ ಈ ಲೋಕಕ್ಕೆ ನೀಡಿದಂತ ಕೊಡುಗೆಗಳು ಅಪಾರವಾಗಿವೆ ಎಂದರು. ಪಟ್ಟಣದ ಯಾವುದಾರೂ ಒಂದು ವೃತ್ತಕ್ಕೆ ಅಮರಶಿಲ್ಪಿ ಜಕಣಾಚಾರ್ಯ ಹೆಸರನ್ನು ನಾಮಕರಣವನ್ನು ಮಾಡುವುದರ ಮೂಲಕ ಅವರ ಹೆಸರನ್ನು ಸ್ಮರಿಸುವಂತ ಕಾರ್ಯ ಎಲ್ಲ ನಾಗರಿಕರು ಮಾಡಬೇಕು ಎಂದು ಮನವಿ ಮಾಡಿದರು.ವಿಶ್ವಕರ್ಮ ಸಮಾಜದ ಮುಖಂಡರಾದ ಪ್ರಕಾಶ ನಿಟ್ಟೂರ, ಅಶೋಕ ಬಡಿಗೇರ, ರಾಜಶೇಖರ ಬಡಿಗೇರ, ವಿಜಯಕುಮಾರ ಮಾಯಾಚಾರಿ, ನಾಗಲಿಂಗ ಮಾಯಾಚಾರ, ನಾಗರಾಜ ಆರ್ಕಾಚಾರಿ, ಮೌನೇಶ ಆರ್ಕಾಚಾರಿ, ರಾಜಶೇಖರ ಮಾಯಾಚಾರ, ಉದಯಕುಮಾರ ಆರ್ಕಾಚಾರಿ, ರಾಮಲಿಂಗ ಬಡಿಗೇರ್, ಕಾಳಿಂಗಾಚಾರ ಮಾಯಚಾರ, ಮನು ಮಾಯಾಚಾರ ಸೇರಿ ಇತರರಿದ್ದರು.