ಧ್ವನಿ ಸುರುಳಿ ಬಿಡುಗಡೆ ಅಮರಶ್ರೀ ಪ್ರಶಸ್ತಿ ಪ್ರದಾನ

| Published : Jun 06 2024, 12:30 AM IST

ಸಾರಾಂಶ

ಕನ್ನಡಪ್ರಭವಾರ್ತೆ ಗುಳೇದಗುಡ್ಡ ಸಮೀಪದ ಕೋಟೆಕಲ್ ಗ್ರಾಮದ ಅಮರೇಶ್ವರ ಮಠದ ಅಮರೇಶ್ವರ ಶ್ರೀಗಳ 55ನೇ ಪುಣ್ಯಾರಾಧನೆ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀಮಠದ ಕುರಿತಾಗಿ ಕಮಲಾಬಾಯಿ ಕಮತರ ಅವರು ಹೊರತಂದಿರುವ ಶ್ರೀ ಅಮರೇಶಂ ಭಜೆ ಸುಪ್ರಭಾತ ಗೀತೆಯ ಧ್ವನಿಸುರುಳಿಯನ್ನು ಮಂಗಳವಾರ ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶೀವಾಚಾರ್ಯ ಮಹಾಸ್ವಾಮಿಗಳು ಬಿಡುಗಡೆಗೊಳಿಸಿದರು.

ಕನ್ನಡಪ್ರಭವಾರ್ತೆ ಗುಳೇದಗುಡ್ಡಸಮೀಪದ ಕೋಟೆಕಲ್ ಗ್ರಾಮದ ಅಮರೇಶ್ವರ ಮಠದ ಅಮರೇಶ್ವರ ಶ್ರೀಗಳ 55ನೇ ಪುಣ್ಯಾರಾಧನೆ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀಮಠದ ಕುರಿತಾಗಿ ಕಮಲಾಬಾಯಿ ಕಮತರ ಅವರು ಹೊರತಂದಿರುವ ಶ್ರೀ ಅಮರೇಶಂ ಭಜೆ ಸುಪ್ರಭಾತ ಗೀತೆಯ ಧ್ವನಿಸುರುಳಿಯನ್ನು ಮಂಗಳವಾರ ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶೀವಾಚಾರ್ಯ ಮಹಾಸ್ವಾಮಿಗಳು ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಜಗದ್ಗುರುಗಳು, ಅಮರೇಶಂ ಭಜೆ ಸುಪ್ರಭಾತ ಬಹಳ ಚೆನ್ನಾಗಿ ಮೂಡಿ ಬಂದಿದ್ದು, ಶ್ರೀಮಠದ ಕುರಿತಾಗಿ ಸುಪ್ರಭಾತ ಮಾಡಿದ್ದು ಖುಷಿಯ ವಿಚಾರವಾಗಿದ್ದು, ಕಮತರ ಸೇವೆ ಶ್ಲಾಘನೀಯವಾದುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಅಮರ ಆದರ್ಶ ದಂಪತಿಗಳಿಗೆ ಸತ್ಕಾರ ಮಾಡಲಾಯಿತು. ಸಂಗೀತ ಶಿಕ್ಷಕ ಜ್ಞಾನೇಶ್ವರ ಬೊಂಬಲೇಕರ ಅವರಿಗೆ ಅಮರ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಯ್ಯಾಚಾರ ದೀಕ್ಷೆ ಕಾರ್ಯಕ್ರಮ ನಡೆಸಿಕೊಡಲಾಯಿತು.

ಸೊಲ್ಲಾಪುರದ ಪಂಡಿತ ಬಸವರಾಜ ಶಾಸ್ತ್ರೀಗಳು, ನಿರಂಜನರಾಧ್ಯರು, ವಿನಯಕುಮಾರ ಶಾಸ್ತ್ರಿಗಳು, ವೀರಯ್ಯ ಶಾಸ್ತ್ರಿಗಳು, ವಿಜಯಕುಮಾರ ಶಾಸ್ತ್ರಿಗಳು ಅವರು ಪೌರೋಹಿತ್ಯದಲ್ಲಿ ಬೆಳಗ್ಗೆ 6 ಗಂಟೆಗೆ ಅಮರೇಶ್ವರ ಶ್ರೀಗಳ ಗದ್ದುಗೆಗೆ ಮಹಾರುದ್ರಾಭಿಷೇಕ ಹಾಗೂ ಬಿಲ್ವಾರ್ಚಣೆ ಮಹಾ ಮಂಗಳಾರತಿ ನಡೆಯಿತು. ವಿಶ್ವ ಶಾಂತಿಗಾಗಿ ಮಹಾಮೃತ್ಯುಂಜಯ ಹೋಮವನ್ನು ಶ್ರೀಮಠದ ಪೀಠಾಧ್ಯಕ್ಷ ಡಾ.ನೀಲಕಂಠ ಶಿವಾಚಾರ್ಯ ಶ್ರೀಗಳು ನೆರವೇರಿಸಿದರು. ಕೊಟ್ಟೂರಿನ ಡಾ.ಸಿದ್ದಲಿಂಗ ಶಿವಾಚಾರ್ಯ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು.

ಕೆರೂರು ಚರಂತಿಮಠದ ಡಾ.ಶಿವಕುಮಾರ ಶಿವಾಚಾರ್ಯ ಶ್ರೀಗಳು, ಹೊಳೆಹುಚ್ಚೇಶ್ವರ ಮಠದ ಹೊಳೆಹುಚ್ಚೇಶ್ವರ ಶ್ರೀಗಳು, ಒಪ್ಪತ್ತೇಶ್ವರ ಮಠದ ಒಪ್ಪತ್ತೇಶ್ವರ ಶ್ರೀಗಳು, ಡಾ.ಮಹಾಂತಲೀಂಗ ಶಿವಾಚಾರ್ಯ ಶ್ರೀಗಳು, ಕೆಲೂರಿನ ಡಾ.ಮಲಯ ಶಾಂತಮುನಿ ಶ್ರೀಗಳು, ಅಭಿನವ ಪಂಚಾಕ್ಷರಿ ಶ್ರೀಗಳು, ಶಿವಾನಂದ ದೇವರು, ಟೀಕಿನಮಠದ ದೇವರು, ಅಯ್ಯಪ್ಪಯ್ಯ ಶ್ರೀಗಳು ಸಮ್ಮುಖ ವಹಿಸಿದ್ದರು.

ಈ ಸಂದರ್ಭದಲ್ಲಿ ನಾಗೇಶ ಮೊರಬದ, ಪ್ರಭು ಮೊರಬದ, ಮಾಗುಂಡಪ್ಪ ಸುಂಕದ, ಮಾಗುಂಡಪ್ಪ ಕಮತರ, ಶಿವು ವಾಲಿಕಾರ, ಕಾಶಿನಾಥ ಪುರಾಣಿಕಮಠ, ಬಸವರಾಜ ಚಿಲ್ಲಾಪುರ, ಶಿವಯೋಗಿ ಹೊದ್ಲೂರಮಠ, ಹುಚ್ಚೇಶ ಕಮತರ, ಮುತ್ತು ಮೊರಬದ, ಮೂಲಿಮನಿ, ವಿರೇಶ ಪುರಾಣಿಕಮಠ, ಡಿ.ವಿಹಿರೇಮಠ, ವಿ.ಎಸ್.ಹಿರೇಮಠ, ಗುಂಡಪ್ಪ ಕೋಟಿ ಸೇರಿದಂತೆ ಇತರರು ಇದ್ದರು.