ಸಾರಾಂಶ
ಹಾಸನ: ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾಗಿ ಡಾ. ಎಚ್.ಜೆ. ಅಮರೇಂದ್ರ ಅವರನ್ನು ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಅಧ್ಯಕ್ಷ ಆರ್.ಟಿ. ದ್ಯಾವೇಗೌಡ, ಪ್ರಧಾನ ಕಾರ್ಯದರ್ಶಿ ಚೌಡವಳ್ಳಿ ಜಗದೀಶ್ ಹಾಗೂ ಖಜಾಂಚಿ ಎಚ್.ಪಿ. ಪಾರ್ಶ್ವನಾಥ್ ರವರು ನೇಮಕಾತಿ ಮಾಡಿ ಆದೇಶ ಪತ್ರ ನೀಡಿ ಅಧಿಕಾರಕ್ಕೆ ನಿಯುಕ್ತಿಗೊಳಿಸಿದರು. ಡಾ. ಅಮರೇಂದ್ರ ಅವರು ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಮೆಕಾನಿಕಲ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇದೇ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿ, ಅನಂತರ ಅಕಾಡೆಮಿಕ್ ಕ್ಷೇತ್ರದಲ್ಲಿ ಯಶಸ್ವಿ ಸಾಧನೆ ಮಾಡಿದ್ದಾರೆ. ಕಾಲೇಜಿನ ಹಾಲಿ ಪ್ರಾಂಶುಪಾಲರಾಗಿದ್ದ ಡಾ. ಕೃಷ್ಣಯ್ಯ ಅವರು ಹೊಸ ಪ್ರಾಂಶುಪಾಲರಿಗೆ ಅಧಿಕೃತ ಅಧಿಕಾರ ಹಸ್ತಾಂತರಿಸಿದರು. ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಬೂವನಹಳ್ಳಿ ಶ್ರೀನಿವಾಸ್, ಬಿ.ಆರ್. ರಾಜಶೇಖರ್, ನಾಗರಾಜ್ ಜೈನ್, ಶಾಂತಿಗ್ರಾಮ ಶಂಕರ್, ಬಿ.ಎಸ್. ಸುರೇಶ್, ಕಾಲೇಜು ರಿಜಿಸ್ಟ್ರಾರ್ ಕುಮುದಾ, ಅಧೀಕ್ಷಕ ಆರ್. ರಘು ಪ್ರಸಾದ್, ಬಿ.ಆರ್. ರವಿ, ಸಂಸ್ಥೆಯ ಮಾಧ್ಯಮ ಸಂಯೋಜಕ ಶಿವಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.