ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ರಂಭಾಪುರ ಬಡಾವಣೆಯಲ್ಲಿರುವ ಪ್ರತಿಷ್ಠಿತ ಸೇಂಟ್ ಜೋಸೆಫ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.ವಿಜ್ಞಾನ ವಿಭಾಗದಲ್ಲಿ ಪ್ರೀತಿ ಬಸರಗಿ (583) ಅಂಕ ಪಡೆದು ಕಾಲೇಜಿಗೆ ಪ್ರಥಮ ಹಾಗೂ ಜಿಲ್ಲೆಗೆ 6ನೇ ರ್‍ಯಾಂಕ್ ಗಳಿಸಿದ್ದಾಳೆ. ಇಂಚರಾ ಹುಯಿಲ್ಗೋಳ (582) ಅಂಕ ಪಡೆದು ಕಾಲೇಜಿಗೆ ದ್ವಿತೀಯ ಹಾಗೂ ಜಿಲ್ಲೆಗೆ 7ನೇ ರ್ಯಾಂಕ್ ಪಡೆದಿದ್ದಾಳೆ. ಲಕ್ಷ್ಮೀ ವಾಲೀಕಾರ (581) ಅಂಕ ಪಡೆದು ಕಾಲೇಜಿಗೆ ತೃತೀಯ ಹಾಗೂ ಜಿಲ್ಲೆಗೆ 8ನೇ ರ್‍ಯಾಂಕ್ ಪಡೆದಿದ್ದಾರೆ. ಖುಷಿ ತೆನಿಹಳ್ಳಿ (580) ಅಂಕ ಪಡೆದು ಕಾಲೇಜಿಗೆ 4ನೇ ಸ್ಥಾನ ಹಾಗೂ ಜಿಲ್ಲೆಗೆ 9ನೇ ರ್‍ಯಾಂಕ್ ಮತ್ತು ಸುಜಲ ಬಿರಾದಾರ (579) ಅಂಕ ಪಡೆದು ಕಾಲೇಜಿಗೆ 5ನೇ ಸ್ಥಾನ ಹಾಗೂ ಜಿಲ್ಲೆಗೆ 10ನೇ ರ್‍ಯಾಂಕ್ ಗಳಿಸಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಅಭಿಜ್ಞಾ ಕುಲಕರ್ಣಿ (593) ಅಂಕ ಪಡೆದು ಕಾಲೇಜಿಗೆ ಪ್ರಥಮ, ರಾಜ್ಯಕ್ಕೆ 6ನೇ ಹಾಗೂ ಜಿಲ್ಲೆಗೆ 2ನೇ ರ್ಯಾಂಕ್ ಪಡೆದಿದ್ದಾಳೆ. ಮದೀನಾ ಕಿಲ್ಲೇದಾರ (590) ಅಂಕ ಪಡೆದು ಕಾಲೇಜಿಗೆ ದ್ವಿತೀಯ ಹಾಗೂ ಜಿಲ್ಲೆಗೆ ತೃತೀಯ ರ‍್ಯಾಂಕ್ ಪಡೆದಿದ್ದಾಳೆ. ವಾರುಣಿ ಡಬೇರ (588) ಅಂಕ ಪಡೆದು ಕಾಲೇಜಿಗೆ ತೃತೀಯ ಹಾಗೂ ಜಿಲ್ಲೆಗೆ 5ನೇ ರ್ಯಾಂಕ್ ಪಡೆದಿದ್ದಾಳೆ. ಪ್ರತುಶಾ ಹಳ್ಳಿ (587) ಅಂಕ ಪಡೆದು ಕಾಲೇಜಿಗೆ 4ನೇ ಹಾಗೂ ಜಿಲ್ಲೆಗೆ 6ನೇ ರ್ಯಾಂಕ್ ಪಡೆದಿದ್ದಾಳೆ. ಅದಿತಿ ಮೋಕಾಶಿ (585) ಅಂಕ ಪಡೆದು ಕಾಲೇಜಿಗೆ 5ನೇ ಹಾಗೂ ಜಿಲ್ಲೆಗೆ 8ನೇ ರ್ಯಾಂಕ್ ಪಡೆದಿದ್ದಾಳೆ.ಕನ್ನಡದಲ್ಲಿ ಓರ್ವ, ಹಿಂದಿಯಲ್ಲಿ ಓರ್ವ, ಉರ್ದುವಿನಲ್ಲಿ ಓರ್ವ, ಸಂಸ್ಕೃತದಲ್ಲಿ ಓರ್ವ, ವ್ಯವಹಾರ ಅಧ್ಯಯನ ಶಾಸ್ತ್ರದಲ್ಲಿ ಮೂವರು, ಲೆಕ್ಕಶಾಸ್ತ್ರದಲ್ಲಿ ಇಬ್ಬರು, ಸಂಖ್ಯಾಶಾಸ್ತ್ರದಲ್ಲಿ ನಾಲ್ವರು, ಜೀವಶಾಸ್ತ್ರದಲ್ಲಿ ಮೂವರು, ಗಣಿತಶಾಸ್ತ್ರದಲ್ಲಿ ಇಬ್ಬರು ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾರೆ.ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಅದ್ಭುತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸೇಂಟ್ ಜೋಸೆಫ್ ಸಮೂಹ ಶಿಕ್ಷಣ ಸಂಸ್ಥೆ ಮುಖ್ಯಸ್ಥೆ ಅನಲೀಸಾ ಬಾಸ್ಕೊ, ಕಾಲೇಜಿನ ಪ್ರಾಚಾರ್ಯ ಶಾಜು ಜೋಸೆಫ್, ಉಪಪ್ರಾಚಾರ್ಯ ಜಯತೀರ್ಥ ಪಂಢರಿ, ಕಾಲೇಜು ಆಡಳಿತ ಮಂಡಳಿ, ಬೋಧಕ, ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.