ಪ್ರಸಕ್ತ ವರ್ಷ ಮಲಪ್ರಭಾ ಜಲಾಶಯ ಭಾಗದಲ್ಲಿ ವಾಡಿಕೆ ಮಳೆ ಆಗದ್ದರಿಂದ ಜಲಾಶಯಕ್ಕೆ ನೀರಿನ ಸಂಗ್ರಹ ಸದ್ಯ 20 ಟಿಎಂಸಿ ನೀರು ಸಂಗ್ರಹ

ನರಗುಂದ: ಮಲಪ್ರಭಾ ಬಲದಂಡೆ, ಎಡದಂಡೆ, ಬಾಳೆಕುಂದ್ರಿ ಕಾಲುವೆಗಳಗೆ 5ಟಿಎಂಸಿ ನೀರು ಪೂರೈಕೆ ಮಾಡಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕೆಂದು ಕರ್ನಾಟಕ ರೈತ ಸೇನೆ ಅಧ್ಯಕ್ಷ ಶಂಕ್ರಣ್ಣ ಅಂಬಲಿ ಆಗ್ರಹಿಸಿದರು.

ಅವರು ಶುಕ್ರವಾರ ಪಟ್ಟಣದ ಮಹಾದಾಯಿಗಾಗಿ ಮಹಾವೇದಿಕೆಯಲ್ಲಿ ಮಾತನಾಡಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಇಲ್ಲದೇ ಕೆರೆಗಳು ಖಾಲಿಯಾಗಿವೆ. ಸದ್ಯ ಈ ಭಾಗದಲ್ಲಿ ಜಾನುವಾರು ಮತ್ತು ಮನುಷ್ಯರಿಗೆ ಕುಡಿಯಲು ನೀರಿನ ಅವಶ್ಯಕತೆ ಇದೆ. ಆದ್ದರಿಂದ ಮಲಪ್ರಭಾ ಜಲಾಶಯದಿಂದ ಎಂ.ಆರ್.ಬಿ.ಸಿ, ಎನ್.ಬಿ.ಸಿ, ಎಂ.ಐ.ಎಲ್.ಸಿ ಕಾಲುವೆಗಳಗೆ ನೀರು ಪೂರೈಕೆ ಮಾಡಲು ಮುಂದಾಗಬೇಕೆಂದು ಹೇಳಿದರು.

ಪ್ರಸಕ್ತ ವರ್ಷ ಮಲಪ್ರಭಾ ಜಲಾಶಯ ಭಾಗದಲ್ಲಿ ವಾಡಿಕೆ ಮಳೆ ಆಗದ್ದರಿಂದ ಜಲಾಶಯಕ್ಕೆ ನೀರಿನ ಸಂಗ್ರಹ ಸದ್ಯ 20 ಟಿಎಂಸಿ ನೀರು ಸಂಗ್ರಹವಿದೆ, ಹಾಗಾಗಿ ಈ ನೀರಿನಲ್ಲಿ 3ಟಿಎಂಸಿ ಜಲಚರಗಳಗೆ, 10 ಟಿಎಂಸಿ ನೀರು ಕುಡಿಯಲಿಕ್ಕೆ, 7 ಟಿಎಂಸಿ ನೀರನ್ನು ಒಂದು ತಿಂಗಳು ಕಾಲುವೆಗೆ ಪೂರೈಸಬೇಕು. ಒಂದ ವೇಳೆ ನ.12ರೊಳಗೆ ಈ ಕಾಲುವೆಗಳಗೆ ನೀರು ಪೂರೈಕೆ ಮಾಡದಿದ್ದರೆ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಜಲಾಶಯದ ಜಾಕವೆಲ್‌ಗೆ ಮುತ್ತಿಗೆ ಹಾಕಿ ಕಾಲುವೆಗೆ ನೀರು ಪೂರೈಕೆ ಮಾಡವವರಿಗೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನೀರು ಕಳ್ಳತನ ತಡೆಯಬೇಕು. ಮಲಪ್ರಭಾ ಜಲಾಶಯವನ್ನು ನರಗುಂದ, ನವಲಗುಂದ, ರೋಣ, ಬದಾಮಿ ಭಾಗದ ರೈತರ ಜಮೀನುಗಳಿಗೆ ನೀರು ನೀಡುವ ಉದ್ದೇಶದಿಂದ ನಿರ್ಮಿಸಲಾಗಿದೆ. ಆದರೆ ಈ ಜಲಾಶಯದ ಸುತ್ತ ಕೆಲವು ಪ್ರಭಾವಿ ರಾಜಕಾರಣಿಗಳು ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಿ ಜಲಾಶಯದ ನೀರನ್ನು ಕಳ್ಳತನ ಮಾಡುತ್ತಿದ್ದಾರೆ. ಸರ್ಕಾರ ನೀರು ಕಳ್ಳತನವಾಗುವುದನ್ನು ತಡೆಯಲು ಮುಂದಾಗಬೇಕೆಂದು ಆಗ್ರಹಿಸಿದರು.

ತಹಸೀಲ್ದಾರ ಶ್ರೀಶೈಲ ತಳವಾರ ರೈತರ ಮನವಿ ಸ್ವೀಕರಿಸಿ, ಬೆಳಗಾವಿ ವಲಯ ಆಯುಕ್ತರಗೆ ರವಾನೆ ಮಾಡಲಾಗುವದೆಂದು ಹೇಳಿದರು.

ಈ ಸಂದರ್ಭದಲ್ಲಿ ಬಸವರಾಜ ಸಾಬಲೆ, ಚನ್ನು ನಂದಿ, ವೀರಣ್ಣ ಸೋಪ್ಪಿನ, ವಿಠಲ ಜಾಧವ, ನಾಗೇಶ ಅಪೋಜಿ, ಆರ್.ಎನ್.ಪಾಟೀಲ, ಕಾಡಪ್ಪ ಕಾಕನೂರ, ಚಂದ್ರಶೇಖರ ಕೋಟಿ, ಪ್ರಕಾಶ ಪಟ್ಟಣಶಟ್ಟಿ, ಸದು ನಂದಿ, ಫಕೀರಪ್ಪ ಸವದತ್ತಿ, ಶರಣಪ್ಪ ಶೀಲವಂತರ, ಫಕೀರಪ್ಪ ಅಣ್ಣಗೇರಿ, ಸಾಬಣ್ಣ ಸವದತ್ತಿ, ನಿಂಗಪ್ಪ ಬಡಿಗೆರ, ಬುಡ್ನೆಸಾಬ ಮೀಯಾಖಾನ, ಇದ್ದರು.