ಅಂಬಲಿ ಆಸ್ತಿ, ಮಿಕ್ಕಿದ್ದೆಲ್ಲ ಜಾಸ್ತಿ- ಶಶಿಧರ ಶಾಸ್ತ್ರಿ

| Published : Apr 21 2025, 12:51 AM IST

ಅಂಬಲಿ ಆಸ್ತಿ, ಮಿಕ್ಕಿದ್ದೆಲ್ಲ ಜಾಸ್ತಿ- ಶಶಿಧರ ಶಾಸ್ತ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ಶರಣರು ಹೇಳುವ ಹಾಗೆ ಅಂಬಲಿಕ್ಕಿಂತ ಶ್ರೇಷ್ಠವಾದ ಪ್ರಸಾದ ಯಾವುದು ಇಲ್ಲ, ನಾವು ಯಾವುದೇ ಪ್ರಸಾದ ಸೇವನೆ ಮಾಡಿದರೂ ಸಹ ಅಂಬಲಿ ಪ್ರಸಾದವೇ ಶ್ರೇಷ್ಠವೆಂದು ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶಶಿಧರ ಶಾಸ್ತ್ರಿಗಳು ಹಿರೇಮಠ ಹೇಳಿದರು.

ನರಗುಂದ: ಶರಣರು ಹೇಳುವ ಹಾಗೆ ಅಂಬಲಿಕ್ಕಿಂತ ಶ್ರೇಷ್ಠವಾದ ಪ್ರಸಾದ ಯಾವುದು ಇಲ್ಲ, ನಾವು ಯಾವುದೇ ಪ್ರಸಾದ ಸೇವನೆ ಮಾಡಿದರೂ ಸಹ ಅಂಬಲಿ ಪ್ರಸಾದವೇ ಶ್ರೇಷ್ಠವೆಂದು ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶಶಿಧರ ಶಾಸ್ತ್ರಿಗಳು ಹಿರೇಮಠ ಹೇಳಿದರು.

ಅವರು ತಾಲೂಕಿನ ಶಿರೋಳ ಗ್ರಾಮ ತೋಂಟದಾರ್ಯ ಶಾಖಾ ಮಠದ ಗದ್ದುಗೆ ಶಿಲಾ ಮಂಟಪ-ಗೋಪುರದ ಲೋಕಾರ್ಪಣೆ ನಿಮಿತ್ತ 17ನೇ ದಿನದ ಬಸವ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿ, ಮಾದರ ಚನ್ನಯ್ಯನವರು ಮೂಲ ತಮಿಳನಾಡಿನ ಕಂತಿ ಎಂಬುವ ಗ್ರಾಮದವರು. ಅಲ್ಲಿ ಅವರು ಅಂಬಲಿ ಪ್ರಸಾದ ಮಾಡಿಕೊಂಡು ಕಾಯಕ ಮಾಡುತ್ತಿದ್ದರು. ಒಂದ ದಿನ ಇವರ ಕಾಯಕ ಸೇವೆ ಮೆಚ್ಚಿ ಪರಮಾತ್ಮ ಮಾದರ ಚನ್ನಯ್ಯನವರ ಮನೆಗೆ ಬಂದು ಅಂಬಲಿ ಪ್ರಸಾದ ಮಾಡಿರು, ಇದನ್ನು ಆ ಆಸ್ಥಾನ ಆಳುವ ಕೆರಕಾಲ ಜೋಳ ಮಹಾರಾಜ ಈ ರಾಜ್ಯದಲ್ಲಿ ದಾನ, ಧರ್ಮ ಮಾಡುತ್ತಿದ್ದಾನೆ, ಆದರೆ ನನ್ನ ಮನೆಗೆ ಪರಮಾತ್ಮ ಪ್ರತ್ಯಕ್ಷವಾಗಿಲ್ಲವೆಂದು ಮಾದರ ಚನ್ನಯ್ಯ ಶರಣರನ್ನು ಕೇಳುತ್ತಾನೆ, ಆಗ ಶರಣ ಚನ್ನಯ್ಯನವರು ರಾಜರಿಗೆ ಅಂಬಲಿ ಆಸ್ತಿ ಮಿಕ್ಕಿದ್ದೆಲ್ಲ ಜಾಸ್ತಿ ಎಂದು ಹೇಳಿದಾಗ ಇದನ್ನು ಕೇಳಿದ ಕೆರಕಾಲ ಜೋಳ ಮಹಾರಾಜ ನಮ್ಮ ರಾಜ್ಯದಲ್ಲಿ ಇಂಥಾ ಮಹಾ ಶರಣರು ಇದ್ದಾರೆಂದು ಆನೆ, ಅಂಬಾರಿ ತಂದು ಚನ್ನಯ್ಯನವರನ್ನು ಮೆರವಣಿಗೆ ಮಾಡುವರು. ಆನಂತರ ತಮಿಳನಾಡಿನಿಂದ ಶರಣ ಮಾದರ ಚನ್ನಯ್ಯವರು ಕನ್ನಡ ನಾಡಿಗೆ ಬಂದು ಕನ್ನಡ ಭಾಷೆ ಕಲಿತು ಕನ್ನಡದಲ್ಲಿ ಹಲವಾರು ವಚನಗಳನ್ನು ಬರೆದು ಈ ನಾಡಿನ ಸುಧಾರಣೆಗೆ ಶ್ರಮಿಸಿದ್ದಾರೆ. ಬಸವಣ್ಣವರಿಗೆ ಮಾದರ ಚನ್ನಯ್ಯ ಶರಣರೆಂದರೆ ಪಂಚ ಪ್ರಾಣರಾಗಿದ್ದರೆಂದು ಹೇಳಿದರು.

ಈ ಸಂದರ್ಭದಲ್ಲಿ ರಾಮರ್ಗ ತಾಲೂಕಿನ ಅವರಾಧಿಯ ಫಲಹಾರೇಶ್ವರ ಶ್ರೀಗಳು, ಶಾಂತಲಿಂಗ ಶ್ರೀಗಳು, ಪ್ರಕಾಶಗೌಡ ತಿರಕನಗೌಡರ, ವೀರಯ್ಯ ದೊಡ್ಡಮನಿ, ಶೆಲ್ಲಿಕೇರಿ, ನಾಗನಗೌಡ ತಿಮ್ಮನಗೌಡ್ರ, ನಾಗಲೋಟಿಮಠ, ದ್ಯಾಮಣ್ಣ ಕಾಡಪ್ಪನವರ, ಲಾಲಸಾಬ ಅರಗಂಜಿ, ಹನಮಂತ ಕಾಡಪ್ಪನವರ, ಆರ್.ಐ. ನದಾಫ, ಪ್ರಾಚಾರ್ಯ ಬಿ.ಆರ್. ಸಾಲಿಮಠ ಇದ್ದರು.