ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ಕನ್ನಡ ಚಲನಚಿತ್ರ ರಂಗದ ಮೇರು ನಟ ಪದ್ಮಭೂಷಣ ಡಾ.ರಾಜಕುಮಾರ್ ಅವರ ೧೯ನೇ ಪುಣ್ಯ ಸ್ಮರಣೆ ಅಂಗವಾಗಿ ಪಟ್ಟಣದ ಪುರಸಭೆಯ ಆವರಣದಲ್ಲಿರುವ ಡಾ.ರಾಜಕುಮಾರ್ ಅವರ ಪ್ರತಿಮೆಗೆ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಮಾಲಾರ್ಪಣೆ ಸಲ್ಲಿಸಿ ಪುಷ್ಪ ನಮನ ಅರ್ಪಿಸಲಾಯಿತು.ಈ ಸಂದರ್ಭದಲ್ಲಿ ಕರವೇ ದಯಾನಂದ್ ಮಾತನಾಡಿ, ಡಾ ರಾಜಕುಮಾರ್ ಅವರು ಕನ್ನಡ ಚಲನಚಿತ್ರ ರಂಗದಲ್ಲಿ ಹಲವಾರು ಮೌಲ್ಯಧಾರಿತ ಚಿತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಸಂಸ್ಕೃತಿಯ ರಾಯಬಾರಿಯಾಗಿ ಭಾಷೆಯನ್ನು ಹಾಗೂ ಚಲನಚಿತ್ರ ರಂಗವನ್ನು ಶ್ರೀಮಂತ ಗೊಳಿಸಿದ್ದಾರೆ, ಅವರು ನಮ್ಮನ್ನು ಅಗಲಿ ೧೯ ವರ್ಷಗಳು ಕಳೆದರೂ ಸಹ ನಾವು ಅವರನ್ನು ಪುಣ್ಯ ಸ್ಮರಣೆ ಪ್ರತಿ ಕನ್ನಡಿಗರ ಮನದಲ್ಲಿದೆ ಎಂದರು.
ನಾಡು,ನುಡಿ ರಕ್ಷಣೆಗೆ ಹೋರಾಟಕನ್ನಡ ಸಿನಿಮಾಗಳ ಮೂಲಕ ಮನರಂಜನೆ ಒದಗಿಸಿದ್ದು ಮಾತ್ರವಲ್ಲದೇ, ಕನ್ನಡ ನಾಡಿನ ನೆಲ ಜಲ ಭಾಷೆ ವಿಷಯ ಬಂದಾಗ ಹೋರಾಟದ ಹಾದಿಯನ್ನೂ ಹಿಡಿಯುತ್ತಿದ್ದರು. ನಾಡಿನ ಸಂರಕ್ಷಣೆ ವಿಷಯದಲ್ಲಿ ಸದಾ ಮುಂದಿರುತ್ತಿದ್ದರು. ಕೋಟ್ಯಂತರ ಅಭಿಮಾನಿಗಳಿಂದ ದೇವತಾ ಮನುಷ್ಯ ಎಂದು ಕರೆಸಿಕೊಂಡ ರಾಜ್‌ಕುಮಾರ್ ಅಭಿಮಾನಿಗಳೆದೆಯಲ್ಲಿ ಸದಾ ಅಜರಾಮರರಾಗಿದ್ದಾರೆ ಎಂದರು.ಈ ಸಂದರ್ಭದಲ್ಲಿ ಜ್ವಾಲಾಮುಖಿ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸತೀಶ್, ಕನ್ನಡಪರ ಸಂಘಟನೆಗಳ ರಮೇಶ್, ರಾಮಣ್ಣ, ಸಂಪಂಗಿ, ಎಸ್ ನಾರಾಯಣಸ್ವಾಮಿ, ಪ್ರಕಾಶ್, ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸ್, ಕಿರಿಯ ನಿರೀಕ್ಷಕ ರಾಜಣ್ಣ ,ವೆಂಕಟೇಶ್, ಕನ್ನಡ ಅಭಿಮಾನಿಗಳಾದ ಮೂರ್ತಿ, ಆಂಜಿ, ಮಂಜು, ಸುಬ್ಬು ಹಾಜರಿದ್ದರು.