ಇನ್‌ಸ್ಟಾಗ್ರಾಮಲ್ಲಿ ಅಂಬೇಡ್ಕರ್, ಮೀಸಲಾತಿ ಬಗ್ಗೆ ಕೆಟ್ಟ ವೀಡಿಯೋ: ದೂರು

| Published : Feb 26 2025, 01:01 AM IST

ಇನ್‌ಸ್ಟಾಗ್ರಾಮಲ್ಲಿ ಅಂಬೇಡ್ಕರ್, ಮೀಸಲಾತಿ ಬಗ್ಗೆ ಕೆಟ್ಟ ವೀಡಿಯೋ: ದೂರು
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನ ** thekingofkarnataka ** ಹಾಗೂ **dj_troll ** ಹೆಸರಿನ ಖಾತೆಗಳಲ್ಲಿ ಯಾರೋ ಸದರಿ ಐಡಿ ಬಳಕೆದಾರರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಸಂಬಂಧಿಸಿದಂತೆ ಅಂಬೇಡ್ಕರ್ ಜೀವನಶೈಲಿ, ಉನ್ನತ ದರ್ಜೆ ಡಿಗ್ರಿಗಳು, ಮೀಸಲಾತಿ ಬಗ್ಗೆ ಮತ್ತು ಜೈಭೀಮ್ ಪದದ ಬಗ್ಗೆ ಅತಿ ಕೆಟ್ಟದಾಗಿ ವೀಡಿಯೋ ಮಾಡಿ, ಹರಿಬಿಟ್ಟಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದಾವಣಗೆರೆ: ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನ ** thekingofkarnataka ** ಹಾಗೂ **dj_troll ** ಹೆಸರಿನ ಖಾತೆಗಳಲ್ಲಿ ಯಾರೋ ಸದರಿ ಐಡಿ ಬಳಕೆದಾರರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಸಂಬಂಧಿಸಿದಂತೆ ಅಂಬೇಡ್ಕರ್ ಜೀವನಶೈಲಿ, ಉನ್ನತ ದರ್ಜೆ ಡಿಗ್ರಿಗಳು, ಮೀಸಲಾತಿ ಬಗ್ಗೆ ಮತ್ತು ಜೈಭೀಮ್ ಪದದ ಬಗ್ಗೆ ಅತಿ ಕೆಟ್ಟದಾಗಿ ವೀಡಿಯೋ ಮಾಡಿ, ಹರಿಬಿಟ್ಟಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚನ್ನಗಿರಿ ಪಟ್ಟಣ ವಾಸಿ ಕುಬೇಂದ್ರ ಸ್ವಾಮಿ ಎಂಬವರು ಇನ್‌ಸ್ಟಾಗ್ರಾಂನ ** thekingofkarnataka ** ಹಾಗೂ ** dj_troll ** ಎಂಬ ಖಾತೆಗಳ ಐಡಿ ಬಳಕೆದಾರರ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.

ಅಂಬೇಡ್ಕರ್‌ ಅಭಿಮಾನಿಗಳು, ಅನುಯಾಯಿಗಳು ಹಾಗೂ ಭಾರತೀಯರಿಗೆ ಮಾನಸಿಕವಾಗಿ ಧಕ್ಕೆ ಆಗುವಂತಹ ಪೋಸ್ಟ್‌ಗಳಾಗಿವೆ. ಈ ವಿಡಿಯೋಗಳಿಂದ ಸಮಾಜ ವ್ಯವಸ್ಥೆ ಹಾಳಾಗುತ್ತಿದೆ. ಹಾಗಾಗಿ ಸಂಬಂಧಿಸಿದ ಇನ್‌ಸ್ಟಾಗ್ರಾಂ ಐಡಿ ಬಳಕೆದಾರರನ್ನು ಪತ್ತೆ ಮಾಡಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರ ಕುಬೇಂದ್ರ ಸ್ವಾಮಿ ಮನವಿ ಮಾಡಿದ್ದಾರೆ.

- - - (ಸಾಂದರ್ಭಿಕ ಚಿತ್ರ)