ಸಾರಾಂಶ
ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ನಗರಕ್ಕೆ ಭೇಟಿ ನೀಡಿ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಏ.15ರಂದು ನಗರದಲ್ಲಿ ಶತಮಾನೋತ್ಸವ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಬಾಬಾಸಾಹೇಬರ ಪಾದಸ್ಪರ್ಶದಿಂದ ಪಾವನಗೊಂಡಿರುವ ಈ ಪವಿತ್ರ ಭೂಮಿಯಲ್ಲಿ ರಾಷ್ಟ್ರಮಟ್ಟದ ಭವ್ಯ ಮತ್ತು ಐತಿಹಾಸಿಕ ಕಾರ್ಯಕ್ರಮವು ನಗರದ ವೈಭವವನ್ನು ಇಮ್ಮಡಿಗೊಳಿಸಲಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಕನ್ನಡಪ್ರಭ ವಾರ್ತೆ ನಿಪ್ಪಾಣಿ
ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ನಗರಕ್ಕೆ ಭೇಟಿ ನೀಡಿ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಏ.15ರಂದು ನಗರದಲ್ಲಿ ಶತಮಾನೋತ್ಸವ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ಬಾಬಾಸಾಹೇಬರ ಪಾದಸ್ಪರ್ಶದಿಂದ ಪಾವನಗೊಂಡಿರುವ ಈ ಪವಿತ್ರ ಭೂಮಿಯಲ್ಲಿ ರಾಷ್ಟ್ರಮಟ್ಟದ ಭವ್ಯ ಮತ್ತು ಐತಿಹಾಸಿಕ ಕಾರ್ಯಕ್ರಮವು ನಗರದ ವೈಭವವನ್ನು ಇಮ್ಮಡಿಗೊಳಿಸಲಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.ಇಲ್ಲಿನ ಮುನ್ಸಿಪಲ್ ಪ್ರೌಢಶಾಲೆಯ ಮೈದಾನದಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ವಿವಿಧ ಗಣ್ಯರೊಂದಿಗೆ ಕಾರ್ಯಕ್ರಮ ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು ಮತ್ತು ರಾಜ್ಯದ ಬಿಜೆಪಿ ನಾಯಕರು ಭಾಗವಹಿಸಲಿದ್ದು, ಕಾರ್ಯಕ್ರಮಕ್ಕೆ ಸರ್ವ ಧರ್ಮಗಳ 30 ರಿಂದ 35 ಸಾವಿರ ಜನರು ಹಾಜರಾಗುವ ನಿರೀಕ್ಷೆಯಿದೆ ಎಂದರು.ಏ.11 ರಂದು ಬೆಂಗಳೂರಿನಲ್ಲಿ ಭೀಮರಥ ಯಾತ್ರೆ ಆರಂಭವಾಗಿದೆ. ಅದು ಏ.15 ರಂದು ತಾಲೂಕಿನ ಸ್ತವನಿಧಿ ಘಟ್ಟದಲ್ಲಿ ಬೈಕ್ ರ್‍ಯಾಲಿಯೊಂದಿಗೆ ರಥವನ್ನು ಸ್ವಾಗತಿಸಲಾಗುವುದು ಮತ್ತು ಮಹಾನ ಪುರುಷರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಗುವುದು. ಕಾರ್ಯಕ್ರಮವು ಸಂಜೆ 4 ಗಂಟೆಗೆ ಆರಂಭವಾಗಲಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸೋನಲ್ ಕೊಠಡಿಯಾ, ಉಪಾಧ್ಯಕ್ಷ ಸಂತೋಷ ಸಾಂಗಾವರಕ, ಸದಸ್ಯ ವಿಲಾಸ ಗಾಡಿವಡ್ಡರ್, ಜಯವಂತ ಭಾಟಲೆ, ರಾಜು ಗುಂದೇಶಾ, ಸುಜಾತಾ ಕದಂ, ಸುನೀಲ ಪಾಟೀಲ, ಹಾಲಶುಗರ ನಿರ್ದೇಶಕ ಸಮಿತ ಸಾಸನೆ, ಕಾರ್ಪೊರೇಟರ್ ಸುಜಾತಾ ಕದಂ, ರಾಜೇಶ ಕೊಠಡಿಯಾ, ವಿಜಯ ಟವಳೆ, ಸೂರಜ್ ಖವರೆ, ದತ್ತಾ ಜೋತ್ರೆ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದ ಜೊಲ್ಲೆ ದಂಪತಿ:ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಭೇಟಿ ನೀಡಿ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಏ.15ರಂದು ನಿಪ್ಪಾಣಿಯಲ್ಲಿ ಆಚರಿಸಲಿರುವ ಶತಮಾನೋತ್ಸವ ಕಾರ್ಯಕ್ರಮದ ಸಿದ್ಧತೆಗಳನ್ನು ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ನಗರಾಭೆ ಅಧ್ಯಕ್ಷೆ ಸೋನಲ್ ಕೊಠಡಿಯಾ ಪರಿಶೀಲಿಸಿದರು.
ಡಾ.ಬಾಬಾಸಾಹೇಬ್ ಅವರು ಯಾವುದೇ ಒಂದು ಸಮುದಾಯದಕ್ಕೆ ಸಮುದಾಯಕ್ಕೆ ಸೀಮಿತವಾಗದೇ ಎಲ್ಲ ಧರ್ಮೀಯರಿಗಾಗಿ ಮಹಾನ್ ವ್ಯಕ್ತಿಯಾಗಿದ್ದಾರೆ. ಆದ್ದರಿಂದ ಅವರಿಗೆ ಸಮರ್ಪಿಸಲಾಗುವ ಸ್ಮಾರಕವು ಐತಿಹಾಸಿಕ ಸ್ಮಾರಕವೂ ಆಗಲಿದೆ. ಕುದುರೆಯ ಮೇಲೆ ಕುಳಿತುಕೊಂಡ ಪ್ರತಿಮೆ, ಹೈಟೆಕ್ ಗ್ರಂಥಾಲಯ, ವಸತಿ ನಿಲಯ, ಧ್ಯಾನ ಮಂದಿರ, ಸಾಂಸ್ಕೃತಿಕ ಮಂಟಪ, ಉದ್ಯಾನ ಮತ್ತು ವಸ್ತು ಸಂಗ್ರಹಾಲಯ ಮೊದಲಾದವುಗಳನ್ನು ನಿರ್ಮಿಸಲಾಗುವುದು. ಈ ಹಿನ್ನೆಲೆಯಲ್ಲಿ ಏ.15 ರಂದು ನಡೆಯಲಿರುವ ಈ ಭವ್ಯ ಕಾರ್ಯಕ್ರಮವು ನಿಪ್ಪಾಣಿ ಐತಿಹಾಸಿಕ ಹಿರಿಮೆಯನ್ನು ಹೆಚ್ಚಿಸಲಿದೆ. ಎಲ್ಲ ಹಂತಗಳಲ್ಲಿಯೂ ಸರಿಯಾದ ಯೋಜನೆಯನ್ನು ಮಾಡಲಾಗಿದೆ. ಎಲ್ಲ ಧರ್ಮದ ಬಾಂಧವರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.-ಶಶಿಕಲಾ ಜೊಲ್ಲೆ,
ಶಾಸಕಿ.