ಡಾ.ಬಿ.ಆರ್.ಅಂಬೇಡ್ಕರ್‌ರವರು ರಚಿಸಿರುವ ಭಾರತದ ಸಂವಿಧಾನ ಸರ್ವಕಾಲಿಕವಾದುದು, ಸರ್ವ ಜನಾಂಗದ ಹಿತದೃಷ್ಠಿಯಿಂದ ಸಂವಿಧಾನ ರಚಿಸಲಾಗಿದೆ ಎಂದು ಉಪನ್ಯಾಸಕ ರಘು ಆರ್.ಮಲ್ಲಣ್ಣರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ತರೀಕೆರೆ
ಡಾ.ಬಿ.ಆರ್.ಅಂಬೇಡ್ಕರ್‌ರವರು ರಚಿಸಿರುವ ಭಾರತದ ಸಂವಿಧಾನ ಸರ್ವಕಾಲಿಕವಾದುದು, ಸರ್ವ ಜನಾಂಗದ ಹಿತದೃಷ್ಠಿಯಿಂದ ಸಂವಿಧಾನ ರಚಿಸಲಾಗಿದೆ ಎಂದು ಉಪನ್ಯಾಸಕ ರಘು ಆರ್.ಮಲ್ಲಣ್ಣರ್ ತಿಳಿಸಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬುಧವಾರ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಸಂವಿಧಾನ ಜಾಥಾ ಹಾಗೂ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದ ಸಂವಿಧಾನ ಕರಡು ಸಮಿತಿಯಲ್ಲಿ ಕೊನೆಕೊನೆಗೆ ಅಂಬೇಡ್ಕರ್ ರವರು ಒಬ್ಬಂಟಿಗರಾಗಿ ಸಂವಿಧಾನ ರಚನೆಗೆ ಇಡೀ ಬದುಕನ್ನೇ ಮೀಸಲಿಟ್ಟಿದ್ದು, ಅತ್ಯಂತ ಶ್ರದ್ದೆ, ಪರಿಶ್ರಮದಿಂದ ಸಂವಿಧಾನ ರಚನಾ ಕೆಲಸವನ್ನು ನಿರ್ವಹಿಸಿದ್ದಾರೆ ಎಂದು ಹೇಳಿದರು.ಪುರಸಭೆ ಅಧ್ಯಕ್ಷ ವಸಂತಕುಮಾರ್ ಮಾತನಾಡಿ, ಸಂವಿಧಾನದ ಸೌಲಭ್ಯದಡಿ ಎಲ್ಲರೂ ಬದುಕುತ್ತಿದ್ದೇವೆ. ಭಾರತದ ಸಂವಿಧಾನ ವಿಶ್ವದ ಅತೀ ದೊಡ್ಡ ಲಿಖಿತ ಸಂವಿಧಾನವಾಗಿದೆ ಎಂದು ಹೇಳಿದರು..
ಉಪವಿಭಾಗಾಧಿಕಾರಿ ಎನ್.ವಿ.ನಟೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.ತಹಸೀಲ್ದಾರ್ ವಿಶ್ವಜಿತ್ ಮೇಹತ, ಪುರಸಭೆ ಸದಸ್ಯರಾದ ಗಿರಿಜಾಪ್ರಕಾಶ್‌ವರ್ಮ, ದಿವ್ಯಾರವಿ, ಟಿ.ದಾದಾಪೀರ್, ಚೇತನ್, ಮಾಜಿ ಅಧ್ಯಕ್ಷ ಎಂ.ನರೇಂದ್ರ, ಬಿಇಒ ಪರಶುರಾಮಪ್ಪ, ಸಿಡಿಪಿಒ ಚರಣ್‌ರಾಜ್, ಪುರಸಭೆ ಮುಖ್ಯಾಧಿಕಾರಿ ಕೆ.ಎಂ.ರಂಜನ್, ದಲಿತ ಮುಖಂಡ ಎನ್.ವೆಂಕಟೇಶ್, ಎಚ್.ಕೆ.ಶೇಖರಪ್ಪ, ವಿರೂಪಾಕ್ಷ, ಹರೀಶ್‌ಕುಮಾರ್ ಇತರರು ಹಾಜರಿದ್ದರು.