ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಈ ನಾಡು ಕಂಡ ಸಾಮಾಜಿಕ ಸಮಾನತೆಯ ಹರಿಕಾರ ಮತ್ತು ನಾಡಿಗೆ ಸಂವಿಧಾನದ ಮೂಲಕ ಕೊಡುಗೆ ನೀಡಿದ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್ ಎಂದು ಎಸ್.ಕೆ.ಪದವಿ ಮಹಾವಿದ್ಯಾಲಯದ ಉಪನ್ಯಾಸಕಿ ಸುಜಾತಾ ಚಲವಾದಿ ಹೇಳಿದರು.ಪಟ್ಟಣಕ್ಕೆ ಆಗಮಿಸಿದ್ದ ಸಂವಿಧಾನ ಜಾಗೃತಿ ರಥಯಾತ್ರೆಗೆ ಸ್ವಾಗತ ಕೋರಿ ಅವರು ಮಾತನಾಡಿದರು. ದೇಶಕ್ಕೆ ಸಂವಿದಾನ ಇಲ್ಲದಿದ್ದರೆ ನಾವು ಇಷ್ಟೊಂದು ಸ್ವತಂತ್ರವಾಗಿ ಜೀವಿಸಲು ಸಾಧ್ಯವಾಗುತ್ತಿರಲಿಲ್ಲ. 1949ರಲ್ಲಿ ಸಂವಿಧಾನದ ಹೊತ್ತಿಗೆ ತಯಾರಾಗಿ ಎಲ್ಲವನ್ನು ಸಿದ್ದಪಡಿಸಿ ಜ. 26 1950 ರಂದು ಸಂವಿಧಾನವನ್ನು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ದೇಶಕ್ಕೆ ಸಮರ್ಪಣೆ ಮಾಡಿದ್ದಾಗಿ ತಿಳಿಸಿದರು.
ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಮಾತನಾಡಿ, ದೇಶದಲ್ಲಿ ಸಮಾನತೆ ಏಕತೆ ಇದ್ದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಭಾರತ ದೇಶದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಮೂಡಿಸುವದರೊಂದಿಗೆ ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ದೇಶದ ಅಭಿವೃದ್ದಿಗೆ ಶಿಕ್ಷಣವೆಂಬುದು ಮುಖ್ಯವಾಗಿದ್ದು, ಅಂತಹ ಶಿಕ್ಷಣವನ್ನು ಸದ್ಭಳಿಕೆ ಮಾಡಿಕೊಂಡು ಸಂವಿದಾನದ ಅಡಿಯಲ್ಲಿ ಎಲ್ಲರು ಬಲಿಷ್ಠ ಭಾರತ ಕಟ್ಟಲು ಮುಂದಾಗಬೇಕೆಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಬಾಲ್ಯದ ಜೀವನದ ಬಗ್ಗೆ ವಿವರಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ ಪ್ರಾಸ್ಥಾವಕ ಮಾತನಾಡಿದರು. ಈ ವೇಳೆ ತಹಸೀಲ್ದಾರ್ಕೀ ರ್ತಿ ಚಾಲಕ ಸಂವಿದಾನ ಪೀಠಿಕೆ ಬೋಧಿಸಿದರು.ವೇದಿಕೆಯ ಮೇಲೆ ಪುರಸಭೆ ಮುಖ್ಯಾಧಿಕಾರಿ ಮೋಹನ್ ಜಾಧವ, ತಾಪಂ ಇಒ ಬಿ.ಆರ್.ಬಿರಾದಾರ ಇತರರು ಉಪಸ್ಥಿತರಿದ್ದರು.ಜಾಗೃತಿ ರಥವನ್ನು ಪಟ್ಟಣದ ಪ್ರವಾಸಿ ಮಂದಿರದ ಮುಂದೆ ಭವ್ಯವಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮದದಲ್ಲಿ ಅಂಗವಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಪ್ರಸಾದ ವ್ಯವಸ್ಥೆ ಕಲ್ಪಿಸಿದ ಮಲ್ಲಪ್ಪ ದೊಡ್ಡಬಸಪ್ಪ ಕಟ್ಟಿಮನಿ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ ಆರ್.ಎಲ್.ಕೊಪ್ಪದ ಮತ್ತು ಮೈಹಿಬೂಬ ಚೋರಗಸ್ತಿ, ಪೇಟಾದ ವ್ಯವಸ್ಥೆ ಕಲ್ಪಿಸಿದ ಪ್ರಭುಗೌಡ ಮದರಕಲ್ಲ ಅವರನ್ನ ಅಭಿನಂದಿಸಲಾಯಿತು.ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಕಟ್ಟಿಮನಿ, ಮುತ್ತಪ್ಪ ಚಮಲಾಪೂರ, ಬಸವರಾಜ ಕಟ್ಟಿಮನಿ, ಆರ್.ಎಲ್.ಕೊಪ್ಪದ, ಪ್ರಭುಗೌಡ ಮದರಕಲ್ಲ, ಅಕ್ಕಮಹಾದೇವಿ ಕಟ್ಟಿಮನಿ, ಅಣ್ಣಾಜಿ ಜಗತಾಪ, ಚನ್ನು ಕಟ್ಟಿಮನಿ, ಶಾಂತಪ್ಪ ಚಲವಾದಿ, ಪರಶುರಾಮ ಕಟ್ಟಿಮನಿ, ಮಾಳಪ್ಪ ಬಿಳೇಭಾವಿ, ಶಾಂತಪ್ಪ ಕೊಡಗಾನೂರ, ನಾಗೇಶ ಕಟ್ಟಿಮನಿ, ಜೈಭೀಮ ಮುತ್ತಗಿ, ದೇವೇಂದ್ರ ಹಾದಿಮನಿ, ಮಹಾಂತೇಶ ಕಟ್ಟಿಮನಿ, ಬಸವರಾಜ ಗುಂಡಕನಾಳ, ಮಲ್ಲಪ್ಪ ಚಲಾಕರ, ಶಂಕರ ಕಟ್ಟಿಮನಿ, ಸಂಜೀವ ಕುಮಾರ ಕಟ್ಟಿಮನಿ, ಕಾರ್ತಿಕ ಕಟ್ಟಿಮನಿ, ಶೇಖಪ್ಪ ಕಟ್ಟಿಮನಿ, ಸುಭಾಸ ಚಮಲಾಪೂರ, ಶಂಕರ ಪಡಸಾಲಿ, ಸಿದ್ದಪ್ಪ ಬಸರಿಕಟ್ಟಿ, ಸಿದ್ದು ಕಟ್ಟಿಮನಿ, ಗೋಪಾಲ ಕಟ್ಟಿಮನಿ, ಸಾಗರ ಕಟ್ಟಿಮನಿ, ಮರಲಿಂಗಪ್ಪ ಕೊಣ್ಣೂರ, ಸುದಾಕರ ಕಟ್ಟಿಮನಿ, ರಾಜು ಚಿತಾಪೂರ ಇದ್ದರು. ಶಿಕ್ಷಕ ಎಸ್.ವಿ.ಜಾಮಗೊಂಡಿ ನಿರೂಪಿಸಿದರು. ಸಿಆರ್‌ಸಿ ರಾಜು ವಿಜಾಪೂರ ವಂದಿಸಿದರು.