ಮಾಲೂರು: ನಗರದ ತಾಲೂಕು ಬಿಜೆಪಿ ಪಕ್ಷದ ವತಿಯಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೩೫ನೇ ಜನ್ಮ ಜಯಂತಿ ಅಂಗವಾಗಿ ನಗರಸಭಾ ಉದ್ಯಾನವನದಲ್ಲಿರುವ ಪ್ರತಿಮೆಗೆ ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಡಾ.ಬಾಭಾಸಾಹೇಬ್ ಅಂಬೆಡ್ಕರ್ ಅವರು ಸತತವಾಗಿ ಅಧ್ಯಯನ ಮಾಡಿ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಟವಾದ ಹಾಗೂ ಬೃಹತ್ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ. ಅವರು ಬೌದ್ಧಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರು ಸಹ ಅವರು ರಚಿಸಿದ ಸಂವಿಧಾನವು ಜೀವಂತವಾಗಿದೆ. ಸಂವಿಧಾನದ ಆಶಯದಡಿ ಹಕ್ಕುಗಳು ಮತ್ತು ಕರ್ತವ್ಯಗಳು ಸಮಾನತೆ ಮೀಸಲಾತಿ, ಅವಕಾಶಗಳನ್ನು ಪಡೆದಿದ್ದೇವೆ. ಎಲ್ಲಾ ವರ್ಗದ ಜನರು ಶಾಂತಿ ಮತ್ತು ನೆಮ್ಮದಿಂದ ಜೀವನ ನಡೆಸಲು ಸಂವಿಧಾನವೇ ಕಾರಣವಾಗಿದೆ.
ಪ್ರತಿಯೊಬ್ಬ ಭಾರತಿಯರು ಸಂವಿಧಾನ ಹಾಗೂ ಸಂವಿಧಾನವನ್ನು ರಚಿಸಿಕೊಟ್ಟ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನುಸ್ಮರಿಸಿ ಗೌರವಿಸಬೇಕು. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನು ರಾಜಕಾರಣಿಗಳು ಹಾಗೂ ಅಧಿಕಾರಿಗಳು ದುರುಪಯೋಗಪಡಿಸಿಕೊಂಡಿದ್ದಾರೆ. ಅಲ್ಲದೆ ಆ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವು ಬೇರೆ ಯೋಜನೆಗಳಿಗೆ ಬಳಸಿಕೊಂಡು ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಅನ್ಯಾಯಾವೆಸಗಿದ್ದಾರೆ. ರಾಜ್ಯ ಬಿಜೆಪಿಯು ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳುತ್ತದೆ ಎಂದರು.ತಾಲೂಕು ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ, ಅಗ್ರೀನಾರಾಯಣಪ್ಪ, ಚಂದ್ರಶೇಖರ್, ಅನಿತಾ ನಾಗರಾಜ್, ಚಿನ್ನಸ್ವಾಮಿಗೌಡ, ಸೋಮಣ್ಣ, ಮೂರ್ತಿ, ವೆಂಕಟೇಶ್, ಆನಂದ್ ಯಾದವ್, ವಾಟರ್ ನಾರಾಯಣಸ್ವಾಮಿ, ಅಂಚೆ ಮುಸ್ಕೂರು ಬಾಬು, ಅಧಿಕಾರಹಟ್ಟಿ ಬಾಬು, ಇನ್ನಿತರರು ಭಾಗವಹಿಸಿದ್ದರು.ಶ್ರೇಷ್ಠ ಸಂವಿಧಾನ ನೀಡಿದ ಅಂಬೇಡ್ಕರ್: ಮಂಜುನಾಥ್ ಗೌಡ
ಡಾ.ಬಾಭಾಸಾಹೇಬ್ ಅಂಬೆಡ್ಕರ್ ಅವರು ಸತತವಾಗಿ ಅಧ್ಯಯನ ಮಾಡಿ ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಟವಾದ ಹಾಗೂ ಬೃಹತ್ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.