ಸಾರಾಂಶ
ಇಡೀ ವಿಶ್ವಕ್ಕೆ ಮಾದರಿ ಎನ್ನಿಸುವಂತಹ ಸಂವಿಧಾನವನ್ನು ರಚಿಸಿದ ಹೆಗ್ಗಳಿಕೆ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಶಿಕ್ಷಣ ಮತ್ತು ಸಂಘಟನೆ ಮೂಲಕ ಜನರ ಬದುಕಿಗೆ ಹೊಸ ಮಾರ್ಗವನ್ನು ಸಂವಿಧಾನಾತ್ಮಕವಾಗಿ ನೀಡಿದರು. ಈ ಮೂಲಕ ಸಮಗ್ರ ಬಡವರ ಏಳಿಗೆಗೆ ಕಾರಣವಾದ ಅಂಬೇಡ್ಕರ್ ಅವರ ಚಿಂತನೆ, ಮಾರ್ಗದರ್ಶನ, ಜ್ಞಾನ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಇಡೀ ವಿಶ್ವಕ್ಕೆ ಮಾದರಿ ಎನ್ನಿಸುವಂತಹ ಸಂವಿಧಾನವನ್ನು ರಚಿಸಿದ ಹೆಗ್ಗಳಿಕೆ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮುಖಂಡ ಇಂಡುವಾಳು ಸಚ್ಚಿದಾನಂದ ಬಣ್ಣಿಸಿದರು.ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವದ ಅಂಗವಾಗಿ ನಗರದ ಕಾವೇರಿ ಉದ್ಯಾನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ದೇಶದ ಕೋಟ್ಯಂತರ ಜನರ ಅಭ್ಯುದಯಕ್ಕೆ ಕಾರಣರಾದ ಅಂಬೇಡ್ಕರ್ ಅವರನ್ನು ನೆನೆಯುವುದು ಪುಣ್ಯದ ಕೆಲಸ ಎಂದರು.
ಶಿಕ್ಷಣ ಮತ್ತು ಸಂಘಟನೆ ಮೂಲಕ ಜನರ ಬದುಕಿಗೆ ಹೊಸ ಮಾರ್ಗವನ್ನು ಸಂವಿಧಾನಾತ್ಮಕವಾಗಿ ನೀಡಿದರು. ಈ ಮೂಲಕ ಸಮಗ್ರ ಬಡವರ ಏಳಿಗೆಗೆ ಕಾರಣವಾದ ಅಂಬೇಡ್ಕರ್ ಅವರ ಚಿಂತನೆ, ಮಾರ್ಗದರ್ಶನ, ಜ್ಞಾನ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದರು.ಶ್ರೀರಂಗಪಟ್ಟಣ ಮಂಡಲದ ಅಧ್ಯಕ್ಷ ಪೀಹಳ್ಳಿ ರಮೇಶ್, ಮಾಯಿಗಣ್ಣ, ಸಂಜು, ರಾಮಚಂದ್ರು, ಬೇವಿನಹಳ್ಳಿ ಮಹೇಶ್, ರಮೇಶ್, ಸತೀಶ್, ನಂದೀಶ್, ಪ್ರಮೋದ್, ವೈರಮುಡಿ, ಮಹದೇವಸ್ವಾಮಿ, ಗೌಡಪ್ಪ, ನಟೇಶ್, ವಕೀಲ ನಾಗರಾಜು, ಶ್ರೀಧರ್, ಗೋಪಾಲ್, ನಿರಂಜನ್, ಆನಂದ, ಸಂತೋಷ್, ಜವರೇಗೌಡ, ದರ್ಶನ್, ಉಮೇಶ್ ಇದ್ದರು.
ವಿವಿಧೆಡೆ ಆಚರಣೆ:ಪಾಂಡವಪುರ ತಾಲೂಕು ಡಿಂಕಾ ಡೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕ್‌ರವರ 134ನೇ ಜನ್ಮದಿನಾಚರಣೆ ಅಂಗವಾಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಅಧ್ಯಕ್ಷ ಗಿರೀಶ್, ನಿದೇರ್ಶಕರು ಹಾಗೂ ಕಾರ್ಯದರ್ಶಿ ಇದ್ದರು.
ಪಾಂಡವಪುರ ತಾಲೂಕು ಪಂಚಾಯ್ತಿಯಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ್‌ರಾಂ ಜಯಂತಿ ಪ್ರಯುಕ್ತ ಚರ್ಚಾ ಸ್ಪರ್ಧೆಯಲ್ಲಿ ವಿಜೇರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.