ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಮಹಾ ಪರಿನಿರ್ವಾಣ ದಿನಾಚರಣೆ ಹಿನ್ನೆಲೆಯಲ್ಲಿ ವಿವಿಧ ದಲಿತಪರ ಸಂಘಟನೆಗಳು, ಸಂಘ-ಸಂಸ್ಥೆಗಳಿಂದ ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತ, ಕೆಎಂಸಿಆರ್‌ಐ ಆವರಣ, ಗೋಕುಲ ರಸ್ತೆಯ ಕೈಗಾರಿಕಾ ವಸಹಾತು ಪ್ರದೇಶದಲ್ಲಿರುವ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಹುಬ್ಬಳ್ಳಿ:

ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಮಹಾ ಪರಿನಿರ್ವಾಣ ದಿನಾಚರಣೆ ಹಿನ್ನೆಲೆಯಲ್ಲಿ ವಿವಿಧ ದಲಿತಪರ ಸಂಘಟನೆಗಳು, ಸಂಘ-ಸಂಸ್ಥೆಗಳಿಂದ ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತ, ಕೆಎಂಸಿಆರ್‌ಐ ಆವರಣ, ಗೋಕುಲ ರಸ್ತೆಯ ಕೈಗಾರಿಕಾ ವಸಹಾತು ಪ್ರದೇಶದಲ್ಲಿರುವ ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಸಮತಾ ಸೇನೆ:

ಸಮತಾ ಸೇನೆ, ವಿವಿಧ ದಲಿತ ಸಂಘ-ಸಂಸ್ಥೆಗಳ ಮಹಾಮಂಡಳ ವತಿಯಿಂದ ರೈಲು ನಿಲ್ದಾಣದ ಬಳಿಯ ಅಂಬೇಡ್ಕರ್‌ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು. ಈ ವೇಳೆ ಶಾಸಕ ಪ್ರಸಾದ ಅಬ್ಬಯ್ಯ, ಅಧ್ಯಕ್ಷ ಗುರುನಾಥ ಉಳ್ಳಿಕಾಶಿ, ಲೋಹಿತ ಗಾಮನಗಟ್ಟಿ, ಮಂಜುಳಾ ಬೆಣಗಿ, ಮಂಜಣ್ಣ ಉಳ್ಳಿಕಾಶಿ, ಉಮೇಶ ಹಲಗಿ, ಹನಮಂತ ಮೂಲಿಮನಿ, ಹನಮಂತ ಕೋಳೂರ, ರವಿ ಕದಂ, ತಮ್ಮಣ್ಣ ಮಾದರ, ಅಶೋಕ ಹಾದಿಮನಿ, ರವಿ ಕದಂ, ಮಂಜಣ್ಣ ಸಣ್ಣಕ್ಕಿ, ಗುರುಶಿದ್ದಪ್ಪ ಅಂಗಡಿ, ಹನಮಂತ ತಳವಾರ ಸೇರಿ ಹಲವರಿದ್ದರು.

ಮಹಾನಗರ ಪಾಲಿಕೆ:

ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿರುವ ಡಾ. ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆಗೆ ಪಾಲಿಕೆಯಿಂದ ಮೇಯರ್‌ ಜ್ಯೋತಿ ಪಾಟೀಲ ಮಾಲಾರ್ಪಣೆ ಮಾಡುವ ಮೂಲಕ ನಮನ ಸಲ್ಲಿಸಿದರು. ಈ ವೇಳೆ ಪ್ರತಿಪಕ್ಷದ ನಾಯಕ ಇಮ್ರಾನ್ ಯಲಿಗಾರ, ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಸಾರ್ವಜನಿಕ ಸಂಪರ್ಕಾಧಿಕಾರಿ ಉಮೇಶ ಸವಣೂರ, ಸಹಾಯಕ ಆಯುಕ್ತ ಗಿರೀಶ ತಳವಾರ ಸೇರಿದಂತೆ ಹಲವರಿದ್ದರು.

ಸಾರಿಗೆ ಸಂಸ್ಥೆ:

ಇಲ್ಲಿನ ಗೋಕುಲ ರಸ್ತೆಯಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಲಾಯಿತು. ಈ ವೇಳೆ ಇಲಾಖೆಯ ಅಧಿಕಾರಿಗಳಾದ ವಿವೇಕಾನಂದ ವಿಶ್ವಜ್ಞ, ಗಣೇಶ ರಾಠೋಡ, ಸಿದ್ದೇಶ್ವರ ಹೆಬ್ಬಾಳ, ಶ್ರೀನಿವಾಸಮೂರ್ತಿ ಸಿ.ಇ, ಇಮಾಮಕಾಸೀಮ್ ಕಂದಗಲ್, ಶಶಿಧರ ಕುಂಬಾರ, ನಿತಿನ ಹೆಗಡೆ, ಜಗದಂಬಾ ಕೋಪರ್ಡೆ ಸೇರಿ ಹಲವರಿದ್ದರು.

ಮಹೇಶ ಪಿಯು ಕಾಲೇಜು:

ಮೌಢ್ಯತೆ, ಅಂಧಕಾರ ದೂರಗೊಳಿಸಲು, ಅಸಮಾನತೆ ಹೋಗಲಾಡಿಸಲು ಹಗಲಿರುಳು ದುಡಿದವರು ಅಂಬೇಡ್ಕರ್‌. ಅವರ ಚಿಂತನೆಗಳು ಸಾರ್ವಕಾಲಿಕ ಸತ್ಯ ಎಂದು ಉಪಪ್ರಾಚಾರ್ಯ ರಮೇಶ ಹೊಂಬಾಳೆ ಹೇಳಿದರು. ಇಲ್ಲಿನ ಎನ್.ಎಲ್.ಇ. ಸೊಸೈಟಿಯ ಡಾ. ಆರ್.ಬಿ. ಪಾಟೀಲ್ ಮಹೇಶ ಪದವಿ ಪೂರ್ವ ಕಾಲೇಜಿನಲ್ಲಿ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪೂರ್ಣಾನಂದ ಮಳಲಿ, ಸಿಬ್ಬಂದಿಗಳಾದ ಮಾಧುರಿ ಘಾಟಗೆ, ಶೇತಾ ಜತ್ತಿ, ರಘುವೀರ ದಂತಿ, ಸುರೇಶ ಬೊಮ್ಮಿಗಟ್ಟಿ ಉಪಸ್ಥಿತರಿದ್ದರು.

ಅಂಬೇಡ್ಕರ್‌ ಶಕ್ತಿ ಬಹಳ ಪ್ರಾಬಲ್ಯ:

ಅಂಬೇಡ್ಕರ್ ಸಂವಿಧಾನದಲ್ಲಿ ಜೀವಂತವಾಗಿರುವುದನ್ನು ಮನಗಂಡು ಸಂವಿಧಾನ ಧ್ವಂಸಗೊಳಿಸುವ ದಬ್ಬಾಳಿಕೆಗಳು ನಡೆಯುತ್ತಿವೆ. ಜೀವಂತ ಅಂಬೇಡ್ಕರ್‌ಕ್ಕಿಂತ ಕಾಲನಂತರದ ಅಂಬೇಡ್ಕರ್‌ರ ಶಕ್ತಿ ಬಹಳ ಪ್ರಾಬಲ್ಯವಾಗಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು. 69ನೇ ಮಹಾಪರಿನಿರ್ವಾಣ ದಿನಾಚರಣೆ ನಿಮಿತ್ತ ನಗರದ ಅಂಬೇಡ್ಕರ್ ಸರ್ಕಲ್ ಬಳಿಯ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಮುಖಂಡರು, ಮಹಾನಗರ ಪಾಲಿಕೆ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು, ಅಂಬೇಡ್ಕರ್‌ ಅನುಯಾಯಿಗಳು ಪಾಲ್ಗೊಂಡಿದ್ದರು.

ದಾದರ್‌ಗೆ ಪ್ರಯಾಣ:

ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನದ ಅಂಗವಾಗಿ ಶನಿವಾರ ಹುಬ್ಬಳ್ಳಿ ಸಮತಾ ಸೈನಿಕ ದಳ, ಸಮತಾ ಚೇತನ ಹಾಗೂ ಸ್ವಾತಂತ್ರ ಹೋರಾಟಗಾರ ದಿ. ಎ.ಜೆ. ಮುಧೋಳ ಅಭಿಮಾನಿಗಳ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಆಶ್ರಯದಲ್ಲಿ ಹುಬ್ಬಳ್ಳಿಯಿಂದ 500ಕ್ಕೂ ಹೆಚ್ಚು ಜನ ರೈಲು ನಿಲ್ದಾಣದಿಂದ ದಾದರ್‌ಗೆ ಪ್ರಯಾಣ ಬೆಳೆಸಿದರು. ಈ ವೇಳೆ ರಾಷ್ಟ್ರೀಯ ಅಹಿಂದ್‌ ಸಂಘಟನೆಯ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಬಾಬಾಜಾನ ಮುಧೋಳ, ಮುಖಂಡರಾದ ಪೀರಸಾಬ್ ನದಾಫ್, ಬಿ.ಎ, ಮುಧೋಳ, ವಿಜಯಕುಮಾರ, ಮೌಲಾಸಾಬ್ ನದಾಫ್, ರಬ್ಬಾನಿ ಮೇಸ್ತ್ರಿ, ಯೂಸುಫ್ ಬಳ್ಳಾರಿ, ಜಾವೀಧ ಲಕ್ಷ್ಮೇಶ್ವರ, ಮೌಸಿನ ಮುಧೋಳ, ಶಂಕರ್ ಕೊಟ್ಟಿ ಸೇರಿ ಹಲವರಿದ್ದರು.