ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆ

| Published : Dec 09 2024, 12:45 AM IST

ಸಾರಾಂಶ

ನಗರದ ಟೌನ್ ಹಾಲ್ ಬಳಿಯಿರುವ ಮಹಾನಗರ ಪಾಲಿಕೆ ಆವರಣದಲ್ಲಿ ಬಾಬಾ ಸಾಹೇಬ್‌ ಡಾ. ಬಿ.ಆರ್.ಅಂಬೇಡ್ಕರ್‌ 68 ನೇ ಮಹಾಪರಿನಿರ್ವಾಣ ದಿನವನ್ನು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ವತಿಯಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರುನಗರದ ಟೌನ್ ಹಾಲ್ ಬಳಿಯಿರುವ ಮಹಾನಗರ ಪಾಲಿಕೆ ಆವರಣದಲ್ಲಿ ಬಾಬಾ ಸಾಹೇಬ್‌ ಡಾ. ಬಿ.ಆರ್.ಅಂಬೇಡ್ಕರ್‌ 68 ನೇ ಮಹಾಪರಿನಿರ್ವಾಣ ದಿನವನ್ನು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿಯ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ವತಿಯಿಂದ ಆಚರಿಸಲಾಯಿತು. ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಮಾತನಾಡಿ, ಬಾಬಾ ಸಾಹೇಬರು ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾದ ವ್ಯಕ್ತಿಯಲ್ಲ, ಅವರು ಭಾರತದ ಪ್ರತಿಯೊಬ್ಬ ಪ್ರಜೆಗಳಿಗೂ ಸಮಾನತೆಯ ಪಾಠವನ್ನು ಹೇಳಿದಂತ ಮಹಾನ್‌ ಚೇತನ. ಭಾರತ ದೇಶದಲ್ಲಿ ನಿಶ್ಚಿಂತೆಯಿಂದ ಉಸಿರಾಡುತ್ತಿದ್ದೇವೆಂದರೆ ಅದಕ್ಕೆ ಬಾಬಾ ಸಾಹೇಬರ ಕೊಡುಗೆ ಅಪಾರವಾದದ್ದು ಎಂದರು.

ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ, ಪ್ರಪಂಚದ ಪ್ರತಿಭಾನ್ವಿತ ವ್ಯಕ್ತಿಯಾಗಿ ಅಪಾರವಾದ ಜ್ಞಾನ ಮತ್ತುಚಾರಿತ್ರ್ಯ, ಶಿಸ್ತು, ಸಮಯ ಪಾಲನೆ, ಸಂಯಮ, ಸನ್ನಡತೆ, ತ್ಯಾಗ, ಪರಿಶ್ರಮದ ಮುಖಾಂತರಜಗತ್ತೇ ಮೆಚ್ಚಿ, ಗೌರವಿಸುವಂತಹ ಶಕ್ತಿಯಾದವರು ಅಂಬೇಡ್ಕರ್ ಎಂದರು.ಪ್ರಚಾರ ಸಮಿತಿ ಜಿಲ್ಲಾ ಉಪಾಧ್ಯಕ್ಷ ಇಂದ್ರಕುಮಾರ್, ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮೀನಾರಾಯಣ್‌ಎಸ್, ದರ್ಶನ್, ಹನುಮಂತರಾಯಪ್ಪ, ಶ್ರೀನಿವಾಸ್ (ದಿಬ್ಬೂರು), ಗೋವಿಂದರಾಜು ಕೆ, ಗುರುಪ್ರಸಾದ್, ರಂಗಸ್ವಾಮಯ್ಯ, ಟೈಲರ್‌ಜಗದೀಶ್, ರಂಜನ್, ಶಿವಣ್ಣ, ಸುರೇಶ್, ರಾಕೇಶ್, ಶಬ್ಬೀರ್‌ಅಹಮ್ಮದ್, ರಾಮಚಂದ್ರರಾವ್‌ಎಸ್, ಇಮ್ರಾನ್, ಆಟೋಕುಮಾರ್, ಗೋವಿಂದರಾಜ್, ನರಸಿಂಹಮೂರ್ತಿ, ರಫೀಕ್‌ಅಹಮ್ಮದ್, ಶ್ರೀನಿವಾಸ್‌ಎನ್.ವಿ, ಹನುಮನರಸಯ್ಯ ಉಪಸ್ಥಿತರಿದ್ದರು.