ಅಂಬೇಡ್ಕರ್, ಮಹಾತ್ಮ ಗಾಂಧೀಜಿ ನಮಗೆ ಮಾದರಿ: ತಾಪಂ ಇಒ ಅಂಬರೀಶ ಪಾಟೀಲ

| Published : Jan 27 2024, 01:21 AM IST

ಅಂಬೇಡ್ಕರ್, ಮಹಾತ್ಮ ಗಾಂಧೀಜಿ ನಮಗೆ ಮಾದರಿ: ತಾಪಂ ಇಒ ಅಂಬರೀಶ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಕಮಲಾಪುರ ತಾಲೂಕು ಆಡಳಿತ ವತಿಯಿಂದ ಶುಕ್ರವಾರ ಆಯೋಜಿಸಿದ 75ನೇ ಗಣರಾಜ್ಯೋತ್ಸವದಲ್ಲಿ ತಾಪಂ ಇಒ ಅಂಬರೀಶ ಪಾಟೀಲ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಮಲಾಪುರಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ಬಹಳಷ್ಟು ಮಹಾನ್‌ ನಾಯಕರ ಪರಿಶ್ರಮ ಹಾಗೂ ಅಂಬೇಡ್ಕರ್‌ ರಚಿಸಿದಂತ ಸಂವಿಧಾನದಿಂದ ನಾವೆಲ್ಲರೂ ಸರಿಸಮನವಾಗಿರಲು ಸಾಧ್ಯವಾಗಿದೆ ಎಂದು ತಾಪಂ ಇಒ ಅಂಬರೀಶ ಪಾಟೀಲ ತಿಳಿಸಿದರು.

ಕಮಲಾಪುರ ತಾಲೂಕು ಆಡಳಿತ ವತಿಯಿಂದ ಶುಕ್ರವಾರ ಆಯೋಜಿಸಿದ 75ನೇ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಇಂದು ಸಂವಿಧಾನ ಜಾರಿಯಾದ ದಿನವಾಗಿದ್ದು, ಬಹಳಷ್ಟು ನಾಯಕರ ಪರಿಶ್ರಮದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ನಂತರ ದೇಶದ ನಿಯಮಗಳ ಕಾನೂನು ಚೌಕಟ್ಟುಗಳ ಸಂವಿಧಾನ ಬೇಕಾಗಿತ್ತು. ಸ್ವತಂತ್ರದ ಪೂರ್ವದಲ್ಲೇ ಅಂಬೇಡ್ಕರ್‌ ಸಂವಿಧಾನ ಕಾರ್ಯವನ್ನು ಕೈಗೊಂಡಿದ್ದರು ಎಂದರು.

ಈ ಮಹತ್ವದ ಕಾರ್ಯದಲ್ಲಿ ಅಂಬೇಡ್ಕರ್ ಅವರು ಕರಡು ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡು ಇಡೀ ಜಗತ್ತಿನಲ್ಲೇ ಅತ್ಯುತ್ತಮವಾದ ಲಿಖಿತ ರೂಪದ ಸಂವಿಧಾನ ಇವತ್ತು ನಮ್ಮ ದೇಶಕ್ಕೆ ದೊರಕಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಮೊಸಿನ್ ಮೊಮ್ಮದ್, ಪಪಂ ಮುಖ್ಯ ಅಧಿಕಾರಿ ಶಾಂತಪ್ಪ ಹಾದಿಮನಿ, ಗ್ರೇಡ್ 2 ತಹಸೀಲ್ದಾರ್ ಗಂಗಾಧರ ಪಾಟೀಲ್, ಪ್ರೊ.ರಮೇಶ ಪೋತೆ, ರವಿ ಬಿರಾದಾರ್, ಸಂತೋಷ್ ರಾಂಪುರೆ, ಅಮರ ಚಿಕ್ಕೆಗೌಡ, ಮಹೇಶ ಹಾಲು, ಪರಮೇಶ್ವರ ಓಕಳಿ, ನಿಂಗಪ್ಪ ಪ್ರಭುದಕರ, ಪ್ರದೀಪ ಭಾಲ್ಕಿ, ಅಶೋಕ ಕುಮಾರ ಗೌರೆ, ಶಾಲಾ ಶಿಕ್ಷಕರಾದ ಅಂಬರಾಯ ಮಡ್ಡೆ, ದೇವೇಂದ್ರಪ್ಪ ಕಟ್ಟಿಮನಿ ಮತ್ತಿತರು ಇದ್ದರು.ಓಟು ಮಾರಿಕೊಳ್ಳದಿದ್ದರೆ ಪ್ರಜಾಪ್ರಭುತ್ವ ಯಶಸ್ವಿ: ಅಭಿನವ ಶ್ರೀಕನ್ನಡಪ್ರಭ ವಾರ್ತೆ ಚವಡಾಪುರಜಗತ್ತಿನ ದೊಡ್ಡ ಪ್ರಜಾಪ್ರಭುತ್ವ, ದೊಡ್ಡ ಸಂವಿಧಾನ ಅಳವಡಿಸಿಕೊಂಡಿರುವ ನಾವು ಯಾಕೆ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತಿಲ್ಲವೆಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕು, ಚುನಾವಣೆಗಳು ಬಂದಾಗ ನೋಟಿಗಾಗಿ ಓಟು ಮಾರಿಕೊಳ್ಳುವುದನ್ನು ಬಿಟ್ಟಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದು ಡಾ. ಅಭಿನವ ಚನ್ನಮಲ್ಲ ಶಿವಾಚಾರ್ಯರು ಹೇಳಿದರು.ಅಫಜಲ್ಪುರ ತಾಲೂಕಿನ ಬಡದಾಳ ಗ್ರಾಮದ ಶ್ರೀಗುರು ಚನ್ನಮಲ್ಲೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು, 75 ವರ್ಷಗಳ ಹಿಂದೆ ನಮಗೆ ನಾವೇ ಸಂವಿಧಾನ ಸಮರ್ಪಿಸಿಕೊಂಡಿದ್ದೇವೆ. ಅಂಬೇಡ್ಕರ್ ಅವರು ಸಮಸ್ತ ಭಾರತೀಯರಿಗೆ ಸಮಾನತೆ, ಸೌಹಾರ್ದತೆ, ಸಾಮರಸ್ಯ ಸಾರುವಂತ ಸಂವಿಧಾನವನ್ನು ನಮಗೆ ಸಮರ್ಪಿಸಿದ್ದಾರೆ. ಬೇರೆ ಬೇರೆ ಧರ್ಮ, ವೇಷ ಭೂಷಣ, ಭಾಷೆಗಳನ್ನಾಡುವ ನಾವೆಲ್ಲರೂ ಭಾರತೀಯರೆನ್ನುವ ಅಭಿಮಾನ ಮೂಡುವುದು ಸಂವಿಧಾನದಿಂದಲೆ. ವಿದ್ಯಾರ್ಥಿಗಳೆಲ್ಲ ಸಂವಿಧಾನದ ಸಾರವನ್ನು ಸರಿಯಾಗಿ ಅರ್ಥೈಸಿಕೊಂಡು ಅದರಂತೆ ಬದುಕು ಕಟ್ಟಿಕೊಳ್ಳಿ ಎಂದು ಸಲಹೆ ನೀಡಿದರು.ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀಕಾಂತ ನಿಂಬಾಳ, ಮಲ್ಲಿನಾಥ ಅತನೂರೆ, ಗೋರಖನಾಥ ಮಳಗಿ, ಪ್ರಕಾಶ ಖೈರಾಟ, ಶಿವಶರಣ ಡಬ್ಬಿ, ಕಲ್ಲಪ್ಪ ಚಾಂಬಾರ, ಸಚಿನ ಸಾಲೆಗಾಂವ್, ಮುಖ್ಯಗುರುಗಳಾದ ಉಮಾಕಾಂತ ರಾಠೋಡ, ಮಲಕಪ್ಪ ಕಲಶೆಟ್ಟಿ, ಚಾಂದ ನದಾಫ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಇದ್ದರು.