ಅಂಬೇಡ್ಕರ್ ಸ್ಮಾರಕ ಸಂಘದ ಚುನಾವಣೆ ನಿಯಮ ಬಾಹಿರ

| Published : May 16 2025, 02:07 AM IST

ಸಾರಾಂಶ

ಕೊಳ್ಳೇಗಾಲದ ಪ್ರವಾಸಿ ಮಂದಿರದಲ್ಲಿ ಅಂಬೇಡ್ಕರ್ ಸಂಘದ ಮಾಜಿ ನಿರ್ಧೇಶಕ ನಾಗಣ್ಣ ಮಾತನಾಡಿದರು. ಪುಟ್ಟಬುದ್ದಿ, ಮೂರ್ತಿ. ತಿರುಮಲ್ಲೇಶ್ ಇನ್ನಿತರರಿದ್ದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪಟ್ಟಣದ ಭೀಮನಗರ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘಕ್ಕೆ ನಿಯಮ ಬಾಹಿರವಾಗಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಈ ಬಗೆಗಿನ ಎಲ್ಲ ನ್ಯೂನ್ಯತೆಗಳನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೆವೆ ಎಂದು ಸಂಘದ ಮಾಜಿ ನಿರ್ದೇಶಕ ನಾಗಣ್ಣ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಚುನಾವಣೆ ಈಗಷ್ಟೇ ನಡೆದಿದೆ. ಇದಕ್ಕೂ ನಮ್ಮ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘಕ್ಕೂ ಸಂಬಂಧವೇ ಇಲ್ಲ, ನಮ್ಮ ಸಂಘ ಇನ್ನು ಬಲಿಷ್ಠ ಹಾಗೂ ದೃಢವಾಗಿದೆ. ಅದು ನವೀಕರಣ ಆಗಬೇಕಿದೆ. ಹಿಂದೆ ಮಾಜಿ ಶಾಸಕ ಎನ್.ಮಹೇಶ್ ಭವನ ನಿರ್ಮಾಣಕ್ಕೆ3 ಕೋಟಿ ಅನುದಾನ ನೀಡಿದ್ದರು. ಕೆಆರ್ ಐಡಿಎಲ್ ಅವರು 1 ಕೋಟಿ ಕಾಮಗಾರಿ ನಡೆಸಿದ್ದಾರೆ. ಈಕಾಮಗಾರಿಯಲ್ಲಿನ ಲೋಪ ಪ್ರಶ್ನಿಸಿ ಲೋಕಾಯುಕ್ತರಿಗೆ ದೂರು ನೀಡಿದ್ದು ಪ್ರಕರಣ ತನಿಖೆಯಲ್ಲಿದೆ ಎಂದರು.ಈ ಹಿಂದೆ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಹೇಗಿರಬೇಕು ಎಂದು ನೀಡಿದ್ದ ಕ್ರೀಯಾಯೋಜನೆ ಹಾಗೂ ನಕಾಶೆಯಂತೆ ಬೇರೆ ಏಜೆನ್ಸಿಗೆ ಕಾಮಗಾರಿ ನಡೆಸಲು ಅವಕಾಶ ಮಾಡಿಕೊಡಿಕೊಟ್ಟರೆ ಕೆಲಸ ನಾವು ಮಾಡಿಸುತ್ತೇವೆ. ಇನ್ನು ಹೊಸ ಸಂಘವನ್ನು ಆಡಳಿತಾಧಿಕಾರಿಗಳು ನೀತಿ ನಿಯಮಗಳನ್ನು ಉಲ್ಲಂಘಿಸಿ ಚುನಾವಣೆ ನಡೆಸಿದ್ದಾರೆ. ಹಾಗಾಗಿ ಈ ಸಂಘವನ್ನು ನಾವು ಅಧಿಕೃತ ಎಂದು ಒಪ್ಪಲ್ಲ, ಈ ಚುನಾವಣೆಯೇ ಅಸಿಂಧು ಆಗಿದೆ. ಇದನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ. ಈಗ ನಡೆದ ಚುನಾವಣೆ ನ್ಯಾಯ ಸಮ್ಮತವಲ್ಲ ಎಂದರು.

ನಗರಸಭೆ ಮಾಜಿ ಸದಸ್ಯ ಕೆ.ಕೆ.ಮೂರ್ತಿ ಮಾತನಾಡಿ, ಭೀಮನಗರ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾ ರಕ ಸಂಘಕ್ಕೆ ನಿಯಮಬಾಹಿರವಾಗಿ ಪದಾಧಿಕಾರಿಗಳು ಆಯ್ಕೆ ಆಗಿದ್ದು, ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಕಾನೂನಿನಡಿಯಲ್ಲಿಯೇ ನಾವು ಪ್ರಶ್ನಿಸುತ್ತೇವೆ, ಈ ನಿಯಮಬಾಹಿರ ಚುನಾವಣೆಗೆ ಸಂಘದ ಆಡಳಿತಾಧಿಕಾರಿಗಳಾದ ಕೇಶವಮೂರ್ತಿ ಅವರ ಪೈಪಲ್ಯವೇ ಕಾರಣವಾಗಿದೆ.

ನೂತನ ಅಧ್ಯಕ್ಷರು ಹಿಂಬಾಗಿಲ ಮೂಲಕ ಹಣ ವ್ಯಯಿಸಿ ಅಧಿಕಾರ ಹಿಡಿದಿದ್ದು ಅವರು ಅಕ್ರಮವಾಗಿ ಸಂಪಾದಿಸಿರುವ ಹಣ ಉಳಿಸಿಕೊಳ್ಳಲು ಈ ಸಂಘಕ್ಕೆ ಅಧ್ಯಕ್ಷರಾಗಿದ್ದಾರೆ, ಅವರು ಜಿಪಂನ ಎಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಮಾಡುವ ವೇಳೆ ಸಾಕಷ್ಟು ಅವ್ಯವಹಾರ ಮಾಡಿದ ಆರೋಪಗಳಿಸಿದ್ದು ಅದರಿಂದಲೇ ಅವರು ಅಕ್ರಮ ಹಣ ಸಂಪಾದಿಸಿದ್ದಾರೆ, ಅವರು ಅಕ್ರಮ ಹಣ ಉಳಿಸಿಕೊಳ್ಳಲೆಂದು ಅಂಬೇಡ್ಕರ್ ಸಂಘದಲ್ಲಿನ ಚುನಾವಣೆಯಲ್ಲಿ ನಿಯಮ ಮೀರಿ ಅಧ್ಯಕ್ಷರಾಗಿದ್ದಾರೆ. ಈ ಚುನಾವಣೆ ನಿಯಮ ಬಾಹಿರವಾದ್ದರಿಂದ ಇವರ ಆಯ್ಕೆಯನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೆವೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ಚಂದ್ರ ಶೇಖರ್, ಪುಟ್ಟಬುದ್ದಿ, ಯುವ ಮುಖಂಡ ತಿರುಮಲ್ಲೇಶ್ ಇದ್ದರು.