ಸಾರಾಂಶ
ಚಳ್ಳಕೆರೆ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರಕ್ಕೆ ನೀಡಿದ ಸಂವಿಧಾನ ಸದಾ ಶಾಶ್ವತ. ಅದೇ ರೀತಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಬದುಕು, ಆದರ್ಶಗಳು ದೇಶಕ್ಕೆ ಬೆಳಕು ನೀಡಿವೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ೬೮ನೇ ಪರಿನಿಬ್ಬಾಣ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕೆ ಅನೇಕ ರೀತಿಯ ಹೋರಾಟಗಳು ನಡೆದಿವೆ. ಸ್ವಾತಂತ್ರ್ಯ ಪಡೆದ ನಂತರ ರಾಷ್ಟ್ರದ ಆಡಳಿತವನ್ನು ಸುಲಲಿತವಾಗಿ ನಡೆಸಲು ಅಂಬೇಡ್ಕರ್ ಸಂವಿಧಾನ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದರು.ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಂವಿಧಾನ ಪ್ರೇರಣೆಯಾಗಿದೆ. ತಮ್ಮ ಇಡೀ ಬದುಕಿನಲ್ಲಿ ಹಲವಾರು ಜಟಿಲ ಸಮಸ್ಯೆಗಳನ್ನು ದೈರ್ಯವಾಗಿ ಎದುರಿಸಿ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಅವಶ್ಯವಿರುವ ಆಡಳಿತಾತ್ಮಕ ವಿಚಾರಗಳನ್ನು ಸಂವಿಧಾನದ ಮೂಲಕ ಅಂಬೇಡ್ಕರ್ ನಮಗೆ ನೀಡಿದ್ದಾರೆ. ಅವರ ಮಹಾನ್ ಕೊಡುಗೆಯ ಬಗ್ಗೆ ವಿಶ್ವದಲ್ಲೇ ಮೆಚ್ಚುಗೆ ವ್ಯಕ್ತವಾಗಿದೆ. ಸಮುದಾಯದ ಎಲ್ಲಾ ಸಂಘಟನೆಗಳು ಅಂಬೇಡ್ಕರ್ ಆದರ್ಶ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಶಶಿಧರ, ಶೋಷಿತ ಸಮುದಾಯವನ್ನು ರಕ್ಷಣೆ ಮಾಡುವಲ್ಲಿ ಸಂವಿಧಾನ ನಮಗೆ ಎಲ್ಲಾ ಸಹಕಾರ ನೀಡಿದೆ. ಮೀಸಲಾತಿಯೂ ಸೇರಿದಂತೆ ಹಲವಾರು ಕ್ಲಿಷ್ಟ ವಿಚಾರಗಳನ್ನು ಎಲ್ಲರೊಂದಿಗೆ ಚರ್ಚಿಸಿ ಬಗೆಹರಿಸುವ ಮೂಲಕ ದೇಶದ ಬಡ ಜನರ ಅಭಿವೃದ್ಧಿಗೆ ಅಂಬೇಡ್ಕರ್ ಸಂವಿಧಾನ ಹೆಚ್ಚು ಸಹಕಾರಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜೈತುಂಬಿ, ಸದಸ್ಯರಾದ ಬಿ.ಟಿ.ರಮೇಶ್‌ಗೌಡ, ಎಂ.ಜೆ.ರಾಘವೇಂದ್ರ, ಟಿ.ಮಲ್ಲಿಕಾರ್ಜುನ್, ಕೆ.ವೀರಭದ್ರಪ್ಪ, ಚಳ್ಳಕೆರೆಯಪ್ಪ, ಕವಿತಾಬೋರಯ್ಯ, ಸುಮ, ಪೌರಾಯುಕ್ತ ಜಗರೆಡ್ಡಿ, ಬಿಇಒ ಕೆ.ಎಸ್.ಸುರೇಶ್, ಸಿಡಿಪಿಒ ಹರಿಪ್ರಸಾದ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಭೂತಲಿಂಗಪ್ಪ, ಮಂಜುನಾಥ, ಟಿ.ವಿಜಯಕುಮಾರ್, ಮೈತ್ರಿದ್ಯಾಮಣ್ಣ, ಚಂದ್ರು, ಎಂ.ಇಂದ್ರೇಶ್, ಆರ್.ವೀರಭದ್ರಪ್ಪ, ರಂಗಸ್ವಾಮಿ, ದೇವರಾಜ, ಡಿ.ಶ್ರೀನಿವಾಸ್, ಉಮೇಶ್ ಚಂದ್ರಬ್ಯಾನರ್ಜಿ, ಸಮರ್ಥರಾಯ್, ಭೀಮನಕೆರೆ ಶಿವಮೂರ್ತಿ, ಓ.ರಂಗಸ್ವಾಮಿ, ನಾಗರಾಜು, ತಿಪ್ಪೇಸ್ವಾಮಿ, ಕಾಂತರಾಜು ಮುಂತಾದವರು ಉಪಸ್ಥಿತರಿದ್ದರು.