ಅಂಬೇಡ್ಕರ್ ಜೀವನಗಾಥೆ ನಮ್ಮೆಲ್ಲರಿಗೆ ಸ್ಫೂರ್ತಿ: ಅರುಣ ಕಾರಜೋಳ

| Published : Apr 16 2025, 12:30 AM IST

ಅಂಬೇಡ್ಕರ್ ಜೀವನಗಾಥೆ ನಮ್ಮೆಲ್ಲರಿಗೆ ಸ್ಫೂರ್ತಿ: ಅರುಣ ಕಾರಜೋಳ
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ಅಂಬೇಡ್ಕರ್ ಅವರ ಜೀವನವೇ ನಮಗೆಲ್ಲರಿಗೂ ಇಂದಿಗೂ ಆದರ್ಶಪ್ರಾಯ ಎಂದು ಬಿಜೆಪಿ ಯುವ ಧುರೀಣ ಅರುಣ ಗೋವಿಂದ ಕಾರಜೋಳ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಡಾ.ಅಂಬೇಡ್ಕರ್ ಅವರ ಜೀವನವೇ ನಮಗೆಲ್ಲರಿಗೂ ಇಂದಿಗೂ ಆದರ್ಶಪ್ರಾಯ ಎಂದು ಬಿಜೆಪಿ ಯುವ ಧುರೀಣ ಅರುಣ ಗೋವಿಂದ ಕಾರಜೋಳ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಡಾ.ಅಂಬೇಡ್ಕರ್ ಜಯಂತಿ ಪ್ರಯುಕ್ತ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾವ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವಿಸಿ ಮಾತನಾಡಿದ ಅವರು, ದೇಶದ ಸುರಕ್ಷತೆ‌ ಮತ್ತು ದೇಶವಾಸಿಗಳ ಹಿತಚಿಂತನೆಗಾಗಿ ಡಾ.ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿರುವುದನ್ನು ರಾಷ್ಟ್ರ ಎಂದಿಗೂ ಮರೆಯದು. ಇಂದು ನಾವೆಲ್ಲರೂ ಸಮಾಜದಲ್ಲಿ ಸಮಾನರಾಗಿ ಇರುವುದಕ್ಕೆ ಸಂವಿಧಾನವೇ ಮೂಲಕಾರಣ. ಡಾ.ಅಂಬೇಡ್ಕರ್ ಅವರು ನಮ್ಮೆಲ್ಲರ ಮನಸ್ಸಿನಲ್ಲಿ ಎಂದಿಗೂ ಅಜರಾಮರಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷ ಸಂಗಣಗೌಡ ಕಾತರಕಿ, ನಗರ ಅಧ್ಯಕ್ಷ ಕರಿಬಸಯ್ಯ ಹಿರೇಮಠ, ಕಲ್ಲಪ್ಪಣ್ಣ ಸಬರದ, ಕೆ.ಆರ್.ಮಾಚಪ್ಪನವರ, ರವಿ ಲಕ್ಷಾಣಿ, ಕೃಷ್ಣಾ ಮಾದರ, ಡಾ.ರವಿ ನಂದಗಾಂವ, ಮಾರುತಿ ಆನಿ, ರಾಜು ಯಡಹಳ್ಳಿ, ಲೋಕಣ್ಣಾ ಕತ್ತಿ, ಶ್ರೀಶೈಲಗೌಡ ಪಾಟೀಲ, ಪಿ.ಕೆ.ಚಿಕ್ಕೂರ, ಗುರುಪಾದ ಕುಳಲಿ, ಶ್ರೀಶೈಲ ಚಿನ್ನನವರ, ಅನಂತದಾದಾ ಘೋರ್ಪಡೆ, ಬಸವರಾಜ ಮಳಲಿ, ಪ್ರಜ್ವಲ್ ಚಿಮ್ಮುಡ, ಸಂತೋಷ ಗೌಡ ಪಾಟೀಲ, ನಾಗಪ್ಪ ಅಂಬಿ, ಕೃಷ್ಣಾ ಸಣ್ಣಪ್ಪಗೋಳ, ಸರಸ್ವತಿ ಕಾಂಬಳೆ, ಸುಮೇದಾ ಮಾನೆ, ವನಜಾಕ್ಷಿ ಮಂಟೂರ, ಕಮಲಾ ಜೇಡರ, ಅರುಣ ಮುಧೋಳ, ಕುಮಾರ ಪಮ್ಮಾರ, ರಾಘವೇಂದ್ರ ಶಿಂಧೆ, ಪ್ರದೀಪ್ ನಿಂಬಾಳ್ಕರ್, ಸುನಿಲ್ ಹೊಸಮನಿ, ತುಷಾರ ಭೋಪಳೆ ಹಾಗೂ ಪಕ್ಷದ ಮುಖಂಡರು ಸಮಾಜದ ಮುಖಂಡರು ಉಪಸ್ಥಿತರಿದ್ದರು.