ಅಂಬೇಡ್ಕರ್ ಕಂಚಿನ ಪುತ್ಥಳಿಗೆ ಸ್ವಂತ ಹಣ

| Published : May 15 2024, 01:33 AM IST

ಸಾರಾಂಶ

ಪ್ರತಿಷ್ಠಾಪಿಸಲು ಉದ್ದೇಶಿಸಿರುವ ಡಾ.ಅಂಬೇಡ್ಕರ್ ಕಂಚಿನ ಪುತ್ಥಳಿಗೆ ಸ್ವಂತ ಹಣ ಒದಗಿಸಲಾಗುವುದು ಎಂದು ಮಾಜಿ ಸಂಸದ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಪ್ರತಿಷ್ಠಾಪಿಸಲು ಉದ್ದೇಶಿಸಿರುವ ಡಾ.ಅಂಬೇಡ್ಕರ್ ಕಂಚಿನ ಪುತ್ಥಳಿಗೆ ಸ್ವಂತ ಹಣ ಒದಗಿಸಲಾಗುವುದು ಎಂದು ಮಾಜಿ ಸಂಸದ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಭರವಸೆ ನೀಡಿದರು.

ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪನೆ ಹಾಗೂ ಉದ್ಯಾನವನ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯತಿಯಿಂದ ಪ್ರತಿಮೆ ಸುತ್ತ-ಮುತ್ತ ಹೈಟೆಕ್ ಮಾದರಿಯಲ್ಲಿ ಗಾರ್ಡನ್ ನಿರ್ಮಿಸಲಾಗುವುದು. ದಲಿತ ಸಮಾಜಕ್ಕೆ ಸ್ಮಶಾನ ಭೂಮಿಯನ್ನು ಸಹ ಒದಗಿಸಲಾಗುವುದು ಎಂದು ತಿಳಿಸಿದರು.

ಮುಖಂಡರಾದ ಮಹಾಜನ ಶೆಟ್ಟಿ, ಸುರೇಶ ಕಳಸಪ್ಪಗೋಳ, ಸಂಜಯ ಮಾಡಲಗಿ, ಅಶೋಕ ಗಸ್ತಿ, ಶಿವಾಜಿ ಸಂಜೀವಗೋಳ, ಅಶೋಕ ತಳವಾರ, ಕೌತುಕ ಕಬ್ಬಗೋಳ, ಸಿದ್ದಪ್ಪ ಹಡಾಡಿ, ಅಜೀತ ಹೂಲಿ, ಶಶಿಕಾಂತ ಮಾಡಲಗಿ, ಲಕ್ಷ್ಮಣ ಹೂಲಿ, ಕುಮಾರ ಕಳಸಪ್ಪಗೋಳ, ಸಂತೋಷ ಗಸ್ತಿ ಮತ್ತಿತರರು ಉಪಸ್ಥಿತರಿದ್ದರು. ಎ.ಡಿ.ಗಸ್ತಿ ನಿರೂಪಿಸಿದರು. ಇದೇ ವೇಳೆ ರಮೇಶ ಕತ್ತಿ ಅವರನ್ನು ಸಮಾಜದ ಪರವಾಗಿ ಸತ್ಕರಿಸಲಾಯಿತು.