ದಶದಕಲ್ಲಿ ನೆಲೆಯೂರಿರುವ ವೈವಿಧ್ಯಮಯ ಸಂಸ್ಕೃತಿಯನ್ನು ಗೌರವಿಸುವುದರ ಜೊತೆಗೆ ಜಾತಿ, ಧರ್ಮ, ವರ್ಣರಹಿತ ಜಾತ್ಯತೀತ ಮನೋಭಾವನೆಯೊಂದಿಗೆ ಸರ್ವರ ಪ್ರಗತಿಗೆ ದಾರದೀಪದಂತಹ ಸಂವಿಧಾನ ನೀಡಿ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಮಹಾನ್ ಚೇತನ ಅಂಬೇಡ್ಕರ್ ಅವರಾಗಿದ್ದಾರೆ ಎಂದು ಹೈದ್ರಾಬಾದ ಕೇಂದ್ರೀಯ ವಿವಿಯ ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಕೆ.ವಾಯ್. ರತ್ನಮ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ದೆಶದಕಲ್ಲಿ ನೆಲೆಯೂರಿರುವ ವೈವಿಧ್ಯಮಯ ಸಂಸ್ಕೃತಿಯನ್ನು ಗೌರವಿಸುವುದರ ಜೊತೆಗೆ ಜಾತಿ, ಧರ್ಮ, ವರ್ಣರಹಿತ ಜಾತ್ಯತೀತ ಮನೋಭಾವನೆಯೊಂದಿಗೆ ಸರ್ವರ ಪ್ರಗತಿಗೆ ದಾರದೀಪದಂತಹ ಸಂವಿಧಾನ ನೀಡಿ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಮಹಾನ್ ಚೇತನ ಅಂಬೇಡ್ಕರ್ ಅವರಾಗಿದ್ದಾರೆ ಎಂದು ಹೈದ್ರಾಬಾದ ಕೇಂದ್ರೀಯ ವಿವಿಯ ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಕೆ.ವಾಯ್. ರತ್ನಮ್ ತಿಳಿಸಿದರು.

ಗುಲಬರ್ಗಾ ವಿವಿ ಮತ್ತು ಬೆಂಗಳೂರಿನ ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಮತ್ತು ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ ಇವರ ಸಹಯೋಗದಲ್ಲಿ ವಿವಿ.ಯ. ಕಾರ್ಯಸೌಧದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ 76ನೇ ಸಂವಿಧಾನ ದಿನಾಚರಣೆ ನಿಮಿತ್ತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತದಂತಹ ದೇಶವನ್ನು ಜಾತಿ, ಧರ್ಮ ರಹಿತ ರಾಷ್ಟ್ರ ನಿರ್ಮಾಣಕ್ಕೆ ವಿವಿಧ ದೇಶಗಳ ಸಂವಿದಾನ ಅಧ್ಯಯನ ಮಾಡಿ ಅದರಲ್ಲಿ ಪ್ರಮುಖ ಅಂಶಗಳನ್ನು ತೆಗೆದುಕೊಂಡು ದೇಶಕ್ಕೆ ಬೃಹತ್ ಸಂವಿಧಾನ ನೀಡಿದ ಶ್ರೇಯಸ್‌ ಅಂಬೇಡ್ಕರ್‌ ಅವರಿಗೆ ಸಲ್ಲುತ್ತದೆ. ಸಂವಿಧಾನ ಕರಡು ಸಮಿತಿಯಲಿ ಏಳು ಜನ ಸದಸ್ಯರಿದ್ದರೂ ಕಾಲಾಂತರದಲ್ಲಿ ಬಹುತೇಕರು ರಚನಾ ಕಾರ್ಯದಲ್ಲಿ ಅಲಭ್ಯರಾದ ಪರಿಣಾಮ ಅಂಬೇಡ್ಕರ್ ಅವರು ಮುಂಚೂಣಿಯಲಿ ನಿಂತು ಇದನ್ನು ದೇಶಕ್ಕೆ ಸಮರ್ಪಣೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ವಿದ್ಯಾರ್ಥಿ ಸಮುದಾಯ ಅಂಬೇಡ್ಕರ ಅವರ ವಿಚಾರಧಾರೆಗಳನ್ನು ಅರಿತುಕೊಳ್ಳಬೇಕು ಮತ್ತು ಹೆಚ್ಚು ಪಸರಿಸಬೇಕು ಎಂದು ಅವರು ಕರೆ ನೀಡಿದರು.

ಗುಲಬರ್ಗಾ ವಿವಿ ಪ್ರೊ. ಶಶಿಕಾಂತ ಎಸ್. ಉಡಿಕೇರಿ ಮಾತನಾಡಿ, ಸಂವಿಧಾನ ಜಾರಿಯಿಂದಲೇ ಪ್ರತಿಯೊಬ್ಬರು ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು ಅಧ್ಯಯನವನ್ನು ಮಾಡುವುದರ ಮೂಲಕ ಹೆಚ್ಚಿನ ಜ್ಞಾನವನ್ನು ಸಂಪಾದನೆ ಮಾಡಬೇಕು. ಇಂದಿನ ಸಮಾಜದಲ್ಲಿಯು ಕಾಣಬಹುದಾದ ಅಸಮಾನತೆ, ಜೀತ ಪದ್ಧತಿ ನಿರ್ಮೂಲನೆ, ಮರ್ಯಾದೆ ಹತ್ಯೆಗಳು ಹೋಗಲಾಡಿಸಲು ಶ್ರಮಿಸಬೇಕು ಎಂದರು.

ಗುಲಬರ್ಗಾ ವಿವಿ ವಾಣಿಜ್ಯ ಮತ್ತು ನಿರ್ವಹಣಾ ನಿಕಾಯದ ಡೀನ್ ರಾಜನಾಳ್ಕರ್ ಲಕ್ಷ್ಮಣ್ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯಲ್ಲಿ ವಿಶ್ರಾಂತ ಪ್ರಾಂಶುಪಾಲ ಡಾ.ಐ.ಎಸ್. ವಿದ್ಯಾಸಾಗರ ಸಂವಿಧಾನದ ರಚನೆಯಲ್ಲಿ ಅಂಬೇಡ್ಕರ್ ಪಾತ್ರ, “ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿಕಲ್ಪನೆಯಲ್ಲಿ ಸಾಮಾಜಿಕ ಮತ್ತು ರಾಜಕೀಯ ಪ್ರೇರಣೆಯಾಗಿ ಭಾರತದ ಸಂವಿಧಾನ” ಕುರಿತು ಸಹಾಯಕ ಪ್ರಾಧ್ಯಾಪಕ ಡಾ. ಶಿವರಾಜ ಮಾತನಾಡಿದರು.

ಪ್ರೋ. ಚಂದ್ರಕಾಂತ ಯಾತನೂರ ಸ್ವಾಗತಿಸಿದರು, ಸಂಶೋಧನಾ ವಿದ್ಯಾರ್ಥಿ ಮಹೇಶ್ವರಿ ಎಸ್. ಚೆನ್ನಪ್ಪಗೊಳ ಮತ್ತು ಅತಿಥಿ ಉಪನ್ಯಾಸಕ ಡಾ.ಶಿವಾನಂದ ಕಡಗಂಚಿ ನಿರೂಪಿಸಿದರು. ಡಾ.ಅನಿಲಕುಮಾರ ಹಾಲು ವಂದಿಸಿದರು.

ಗುವಿವಿ ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಮ್.ಭೈರಪ್ಪ, ಪ್ರೊ. ಎಸ್.ಎನ್. ಗಾಯಕ್‍ವಾಡ್, ಪ್ರೊ. ರಮೇಶ ಲಂಡನಕರ್, ಡಾ. ನಿಂಗಣ್ಣ ಕಣ್ಣೂರ, ಹಣಕಾಸು ಅಧಿಕಾರಿ ಜಯಾಂಬಿಕಾ ಇದ್ದರು.