ರಾಮನಗರ: ಕಡು ಬಡತನದಲ್ಲಿ ಹುಟ್ಟಿ ಅಸಮಾನತೆ ವಿರುದ್ಧ ಹೋರಾಡಿದ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಎದುರು ದೇಶವೇ ತಲೆ ಬಾಗುವಂತೆ ಮಾಡಿದ ಮಹಾನ್ ದಾರ್ಶನಿಕ ಎಂದು ಶಾಸಕ ಇಕ್ಬಾಲ್ ಹುಸೇನ್ ಬಣ್ಣಿಸಿದರು.
ರಾಮನಗರ: ಕಡು ಬಡತನದಲ್ಲಿ ಹುಟ್ಟಿ ಅಸಮಾನತೆ ವಿರುದ್ಧ ಹೋರಾಡಿದ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದ ಎದುರು ದೇಶವೇ ತಲೆ ಬಾಗುವಂತೆ ಮಾಡಿದ ಮಹಾನ್ ದಾರ್ಶನಿಕ ಎಂದು ಶಾಸಕ ಇಕ್ಬಾಲ್ ಹುಸೇನ್ ಬಣ್ಣಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಸೇನೆಯ ಜಿಲ್ಲಾ ಘಟಕ ಆಯೋಜಿಸಿದ್ದ ಬಾಬಾ ಸಾಹೇಬ ಡಾ. ಅಂಬೇಡ್ಕರ್ ಅವರ 69ನೇ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಅಂಬೇಡ್ಕರ್ ರಚಿಸಿದ ಸಂವಿಧಾನ ಸಾಮಾನ್ಯ ಜನರ ಕೈಗೆ ಆಡಳಿತ ಕೊಟ್ಟಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಎಷ್ಟು ಸ್ಮರಿಸಿದರು ಕಡಿಮೆಯೇ. ಅಂಬೇಡ್ಕರ್ ಯಾವುದೇ ಹಿನ್ನಲೆ ಇಲ್ಲದೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಹೆಚ್ಚು ಒತ್ತುಕೊಟ್ಟವರು. ಶಾಲೆಯ ಕೊನೆಯ ಬೆಂಚಿನಲ್ಲಿ ಕುಳಿತು ಶಿಕ್ಷಣ ಕಲಿತವರು ಅಸಮಾನತೆಯನ್ನು ಹೋಗಲಾಡಿಸಲು ಹೋರಾಡಿದ ಮಹಾನ್ ಚೇತನ. ಬೆರಳಣಿಕೆಯಷ್ಟು ಜನ ಇಡೀ ಭಾರತವನ್ನು ತಮ್ಮ ಮುಷ್ಠಿಯಲ್ಲಿಟ್ಟುಕೊಂಡು ಶೋಷಣೆ ಮಾಡುತ್ತಿದ್ದ ಸಂದರ್ಭದಲ್ಲಿ ಬುದ್ದ, ಬಸವಣ್ಣನವರು ಜನಿಸಿ ಚಿರಕಾಲ ಸ್ಮರಣೀಯರಾದರು. ಅದೇ ರೀತಿ ಅಂಬೇಡ್ಕರ್ ಸಹ ತಮ್ಮ ವಿಚಾರಧಾರೆಗಳ ಮೂಲಕ ಸದಾ ಸ್ಮರಣೀಯರಾಗಿದ್ದಾರೆ ಎಂದರು.
ನಗರಸಭೆ ಅಧ್ಯಕ್ಷ ಶೇಷಾದ್ರಿ ಮಾತನಾಡಿ, ಅಂಬೇಡ್ಕರ್ ಅವರು ಬಾಲ್ಯದಿಂದಲೇ ಅನುಭವಿಸಿದ ನೋವನ್ನು ಸಮುದಾಯದ ಜನರು ಅನುಭವಿಸಬಾರದು ಎಂದು ಧ್ವನಿ ಎತ್ತಿದವರು. ಅಪಾರ ಜ್ಞಾನ ಸಂಪತ್ತು ಪಡೆದುಕೊಂಡು ಬಂದ ಅವರು, ಸಮಾಜದಲ್ಲಿದ್ದ ಜಾತಿ, ಶೋಷಣೆಯ ಪಿಡುಗು ಹೋಗಲಾಡಿಸಲು ಶ್ರಮಿಸಿದವರು. ಸ್ವಾತಂತ್ರ‍್ಯ ಪೂರ್ವದಲ್ಲಿಯೇ ಮೀಸಲಾತಿಗಾಗಿ ಹೋರಾಡಿದರು. ಅವರನ್ನು ಕಳೆದುಕೊಂಡು 69 ವರ್ಷಗಳು ಸಂದಿದ್ದು, ಅವರ ಆಶಯಗಳು ಮತ್ತು ವಿಚಾರದಾರೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವರನ್ನು ಪ್ರತಿನಿತ್ಯ ಸ್ಮರಿಸೋಣ ಎಂದು ಹೇಳಿದರು.ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ.ಮೂರ್ತಿ ಮಾತನಾಡಿ, ಸಾಮಾನ್ಯ ವರ್ಗದವರು ಉನ್ನತ ಸ್ಥಾನ ಅಲಂಕರಿಸಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಜಾತಿ ನಿಂದನೆ ಮಾಡುತ್ತಿದ್ದ ಜನರ ಹಣೆಬರಹವನ್ನು ಅಂಬೇಡ್ಕರ್ ಸಂವಿಧಾನದಲ್ಲಿ ಬರೆದಿದ್ದಾರೆ. ಅವರು ಒಂದು ಜಾತಿಗೆ ಸೀಮಿತವಾಗದೆ ಎಲ್ಲ ವರ್ಗದವರಿಗೂ ಅವಕಾಶ ಕಲ್ಪಿಸಿದರು ಎಂದರು.
ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಆಗಿದ್ದ ಜಯಲಲಿತಾ ನಿಧನರಾದ ಮೇಲೆ ಅವರ ಸಮಾಧಿಗಾಗಿ ಎರಡು ಎಕರೆ ಜಮೀನನ್ನು ಮೀಸಲಿಡಲಾಯಿತು. ಅಲ್ಲದೆ, ನೂರಾರು ಕೋಟಿ ರುಪಾಯಿ ವೆಚ್ಚದಲ್ಲಿ ಮ್ಯೂಸಿಯಂ ಮಾಡಿದ್ದಾರೆ. ಆದರೆ, ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಾಧಿ ಸ್ಥಳವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡದಿರುವುದು ನೋವಿನ ಸಂಗತಿ. ನಮ್ಮನ್ನಾಳುತ್ತಿರುವ ಸರ್ಕಾರಗಳಿಗೆ ನಾಚಿಕೆ ಆಗಬೇಕು ಎಂದು ಆಕ್ರೋಶ ಹೊರ ಹಾಕಿದರು.ಕಾರ್ಯಕ್ರಮದಲ್ಲಿ ಮೇಣದ ದೀಪ ಹಿಡಿದು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಸಮರ್ಪಿಸಲಾಯಿತು. ಕನ್ನಡಪರ ಹೋರಾಟಗಾರ ಕುಮಾರಸ್ವಾಮಿ, ಶಿವಶಂಕರ್, ಕೇಶವಮೂರ್ತಿ ಮಾತ ನಾಡಿದರು. ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಜ್ಯೋತಿಷಿ ಮಿತ, ಕನ್ನಡಪರ ಹೋರಾಟಗಾರರಾದ ಎಂಎನ್ ಆರ್ ರಾಜು, ಜಗದೀಶ್, ರಾಜಣ್ಣ ಅಂಬೇಡ್ಕರ್ ಸೇನೆ ರಾಜ್ಯ ಉಪಾಧ್ಯಕ್ಷ ಕುಂತೂರು ಕುಮಾರ್, ಜಿಲ್ಲಾಧ್ಯಕ್ಷ ಕಿರಣ್ ಸಾಗರ್, ಪತ್ರಕರ್ತ ಚಲುವರಾಜು, ವೀರೇಶ್ , ಮುಖಂಡರಾದ ಶಿವಕುಮಾರಸ್ವಾಮಿ, ನಾಗರಾಜು, ಸರಸ್ವತಿ, ಕುಮಾರ್, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.
ಕೋಟ್.....ನಾನು ಕೂಡ ದಲಿತ ವರ್ಗದವರ ಮನೆಯಲ್ಲಿ ಬೆಳೆದವನು. ಎಲ್ಲ ಹಬ್ಬಗಳನ್ನು ಅವರ ಜೊತೆಯಲ್ಲಿಯೇ ಆಚರಿಸುತ್ತಿದ್ದೆ. ಜಿಪಂ ಅಧ್ಯಕ್ಷನಾಗಿದ್ದಾಗ ಮತ್ತು ಶಾಸಕನಾದ ನಂತರ ದೊಡ್ಡ ಮಟ್ಟದಲ್ಲಿ ಡಾ.ಬಿ.ಅರ್.ಅಂಬೇಡ್ಕರ್ ಹಬ್ಬ ಮಾಡಿ ಅವರಿಗೆ ಗೌರವ ಸಲ್ಲಿಸುತ್ತಿದ್ದೇನೆ. ಕ್ಷೇತ್ರದ ಜನರು ಜಾತಿ, ಮತ, ಧರ್ಮ ನೋಡದೆ ನನಗೆ ಆಶೀರ್ವಾದ ಮಾಡಿದ್ದಾರೆ. ಅವರೆಲ್ಲರ ಋಣ ನನ್ನ ಮೇಲಿದೆ. ಪ್ರತಿ ಗ್ರಾಮಗಳಲ್ಲಿ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಕಲ್ಪಿಸಿ ಅವರೆಲ್ಲರ ಸೇವಕನಾಗಿ ಕೆಲಸ ಮಾಡುತ್ತಿದ್ದೇನೆ.-ಇಕ್ಬಾಲ್ ಹುಸೇನ್, ಶಾಸಕರು
7ಕೆಆರ್ ಎಂಎನ್ 3.ಜೆಪಿಜಿರಾಮನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಸೇನೆ ಜಿಲ್ಲಾ ಘಟಕ ವತಿಯಿಂದ ಆಯೋಜಿಸಿದ್ದ ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಪರಿನಿರ್ವಾಣ ದಿನ ಕಾರ್ಯಕ್ರಮವನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು.