ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ದೇಶದಲ್ಲಿನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಮತ್ತು ವೈಜ್ಞಾನಿಕ ಸಮಾನತೆಗೆ ಡಾ. ಬಿ. ಆರ್. ಅಂಬೇಡ್ಕರ್‌ ರಚಿತ ಸಂವಿಧಾನವು ಅಸ್ತ್ರವಾಗಿದೆ. ಈ ಮೂಲಕ ದೇಶದ ಅಭಿವೃದ್ಧಿಗೆ ಪೂರಕವಾಗಿದೆಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು.ಕರ್ನಾಟಕ ರಾಜ್ಯ ಎಸ್‌ಸಿ ಮತ್ತು ಎಸ್‌ಟಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭೀವೃದ್ಧಿ ಸಂಘ ಜಿಲ್ಲಾ ಘಟಕ, ಮತ್ತು ತಾಲೂಕು ಘಟಕ ಇವರ ವತಿಯಿಂದ ಪಟ್ಟಣದ ಡಾ. ಅಂಬೇಡ್ಕರ್‌ ಭವನದಲ್ಲಿ ನಡೆದ ಡಾ. ಬಿ. ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಎನ್. ಆರ್. ಪುರುಷೋತ್ತಮ್ ಅವರಿಗೆ ಜಿಲ್ಲಾ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ರತ್ನ ಪ್ರಶಸ್ತಿ ಪ್ರಧಾನ ಹಾಗೂ ತಾಲೂಕು ಎಸ್‌ಸಿ, ಎಸ್‌ಟಿ ಪ್ರಾಥಮಿಕ ಮತ್ತು ಮಾಧ್ಯಮಕ್ಕೆ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾದ ಎಚ್.ಎನ್.ಮೂರ್ತಿಯವರ ಪದಗ್ರಹಣ ಸಮಾರಂಭ ಸೇರಿದಂತೆ ಪಿಯುಸಿಯಲ್ಲಿ ಶೇ.೯೦ ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪಟ್ಟಣದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪುತ್ಥಳಿಯ ಅನಾವರಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ. ಎಚ್. ಸಿ. ಮಹದೇವಪ್ಪನವರು ಮೇ ೨೦ರ ನಂತರ ದಿನಾಂಕ ನಿಗದಿಗೊಳಿಸುವಂತೆ ಸೂಚಿಸಿದ್ದು, ಶೀಘ್ರ ದಿನಾಂಕ ನಿಗದಿಗೊಳಿಸಿ ಲೋಕಾರ್ಪಣೆ ಕಾರ್ಯಕ್ರಮವನ್ನು ಐತಿಹಾಸಿಕ ಕಾರ್ಯಕ್ರಮವಾಗಿ ರೂಪಿಸಲಾಗುವುದು ಎಂದರು.ಸಮಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೂಲಭೂತ ಸೌಕರ್ಯ ವಿಭಾಗದಲ್ಲಿನ ಜಂಟಿ ನಿರ್ದೇಶಕ ಡಾ.ಎನ್.ಆರ್.ಪುರುಷೋತ್ತಮ್ ಮತ್ತವರ ಕುಟುಂಬವನ್ನು ಜಿಲ್ಲಾಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯ ಸಾಕಷ್ಟು ತಾಲ್ಲೂಕುಗಳಲ್ಲಿ ಸನ್ಮಾನಕ್ಕೆ ಆಹ್ವಾನಿಸಿದರು ಸಮಯದ ಅಭಾವದಿಂದ ಹೋಗಲಾಗಿರಲಿಲ್ಲ, ಈ ನೆಲದ ಋಣವೇನೋ ಇಂದು ಸನ್ಮಾನವನ್ನು ಸ್ವೀಕರಿಸುವ ಅವಕಾಶ ಬಂದಿದೆ. ಸಮಾಜದ ಅದರಲ್ಲೂ ಶಿಕ್ಷಕರಿಂದ ಸನ್ಮಾನ ಸ್ವೀಕರಿಸುತ್ತಿರುವುದು ಅತೀವ ಸಂತಸವನ್ನು ತಂದಿದೆ ಎಂದರು.ಶಿಕ್ಷಕ ವೃತ್ತಿ, ನೊಬೆಲ್ ವೃತ್ತಿ ಇದ್ದಂತೆ ಅದಕ್ಕೆ ಯಾವುದು ಸರಿ ಸಾಟಿ ಇಲ್ಲ, ಒಬ್ಬ ವ್ಯಕ್ತಿ ಉತ್ತಮವಾಗಿ ರೂಪಗಳಲು ಶಿಕ್ಷಕರಿಂದ ಮಾತ್ರ ಸಾಧ್ಯ. ಸಮಾಜದ ವಿಮೋಚನೆಗೆ ಕಾರಣರಾದವರನ್ನು ನಾವೆಲ್ಲ ಸ್ಮರಿಸುವುದು ಅಗತ್ಯವೆಂದವರು, ಅಧಿಕಾರಿಗಳಾಗಿ ಕೆಲಸ ಮಾಡುವಾಗ ನಮಗೆ ಸಂವೇದನಾಶೀಲತೆ ಅಗತ್ಯ, ಗ್ರಾಮೀಣ ಭಾಗದ ಎಲ್ಲಾ ವರ್ಗದ ಬಡವರಿಗೆ ನೆರವಾದಾಗ ಮಾತ್ರ ಅಂಬೇಡ್ಕರ್ ಆಶಯಕ್ಕೆ ಅರ್ಥ ಬರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಅಧಿಕಾರಿಯು ನಡೆದುಕೊಳ್ಳಬೇಕೆಂದರು.ಎಸ್ಸಿ,ಎಸ್ಟಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ಎಚ್.ಎನ್.ಮೂರ್ತಿಯವರನ್ನು ಮತ್ತು ನಿಕಟಪೂರ್ವ ಅಧ್ಯಕ್ಷ ಟಿ.ಬಂಜಪ್ಪ ರವರನ್ನು ಇದೆ ಸಂದರ್ಭ ವೇದಿಕೆಯಲ್ಲಿನ ಗಣ್ಯರು ಮತ್ತು ಅವರ ಅಭಿಮಾನಿಗಳು. ಅಭಿನಂದಿಸಿದರು. ಜಿಲ್ಲಾಧ್ಯಕ್ಷ ರಾಜೇಂದ್ರ ದೊಡ್ಡಮಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು, ಈ ಸಂದರ್ಭ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ದಲಿತ ಮುಖಂಡರಿಗೆ ಮತ್ತು ಪಿಯುಸಿ ಯಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತ್ತು. ಸಮಾರಂಭದಲ್ಲಿ ಸಮಾಜಸೇವಕರಾದ ಕೆ.ಆರ್. ಲಕ್ಷ್ಮೀ ಕಾಂತ್‌, ಜಿಲ್ಲಾ ಸಂಘ, ತಾಲೂಕು ಸಂಘದ ಪದಾಧಿಕಾರಿಗಳಾದ ಟಿ. ಮಂಜಪ್ಪ, ಸೋಮನಾಯಕ್, ಈರಯ್ಯನವರು, ಧರ್ಮಪ್ಪ ನಾಯಕ್, ಶಾಂತಮ್ಮ, ರಾಜು, ವೀರೇಶ್ ಕೆಪಿ, ಭಾರತಿ, ಲೋಕೇಶ್‌ ಕುಮಾರ್, ನಾಗರಾಜ್, ಸೋಮೇಶ್, ಚಂದ್ರಕುಮಾರ್, ಮಂಜಪ್ಪ ಸೇರಿ ಇತರರು ಇದ್ದರು.

==========ಫೋಟೋ:

ಚನ್ನರಾಯಪಟ್ಟಣದಲ್ಲಿನ ಡಾ. ಅಂಬೇಡ್ಕರ್ ಭವನದಲ್ಲಿ ನಡೆದ ಎಸ್ಸಿ, ಎಸ್ಟಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಡಾ.ಎನ್. ಆರ್. ಪುರುಷೋತ್ತಮ್‌ರವರಿಗೆ ಜಿಲ್ಲಾಮಟ್ಟದ ಡಾ.ಬಿ.ಆರ್. ಅಂಬೇಡ್ಕರ್ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತ್ತು.