ಸದೃಢ ಭಾರತಕ್ಕೆ ಅಂಬೇಡ್ಕರ್‌ ಕೊಡುಗೆ ಅಪಾರ

| Published : Apr 18 2025, 12:40 AM IST

ಸದೃಢ ಭಾರತಕ್ಕೆ ಅಂಬೇಡ್ಕರ್‌ ಕೊಡುಗೆ ಅಪಾರ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ಸಮಾನತೆಯ ಹಕ್ಕಿನೊಂದಿಗೆ ರಾಷ್ಟ್ರದ ಏಳಿಗೆಗಾಗಿ ಅಂಬೇಡ್ಕರ್‌ ನೀಡಿದ ಕೊಡುಗೆ ಅಪಾರವಾಗಿದೆ. ವಿದ್ಯಾರ್ಥಿಗಳು ಹೆಚ್ಚು ಅಧ್ಯಯನಶೀಲರಾಗಬೇಕು. ಅಂಬೇಡ್ಕರ್‌ ಅವರ ಜೀವನಧಾರಿತ ಪುಸ್ತಕ ಓದಬೇಕು.

ಕುಕನೂರು:

ಸದೃಢ ಭಾರತ ನಿರ್ಮಾಣಕ್ಕಾಗಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಸಂವಿಧಾನ ನೀಡುವ ಮೂಲಕ ಭದ್ರ ಬುನಾದಿ ಹಾಕಿದ್ದಾರೆ ಎಂದು ಮಂಡಲಗಿರಿ ಗ್ರಾಪಂ ಪಿಡಿಒ ಸುರೇಶ ನಾಯಕ ಹೇಳಿದರು.

ತಾಲೂಕಿನ ಚಿಕೇನಕೊಪ್ಪ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗ್ರಾಮ ಘಟಕದಿಂದ ಜರುಗಿದ ಡಾ. ಬಿ.ಆರ್. ಅಂಬೇಡ್ಕರ್‌ ಜಯಂತಿ ಹಾಗೂ ಪೌರ ಕಾರ್ಮಿಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಸಮಾನತೆಯ ಹಕ್ಕಿನೊಂದಿಗೆ ರಾಷ್ಟ್ರದ ಏಳಿಗೆಗಾಗಿ ಅಂಬೇಡ್ಕರ್‌ ನೀಡಿದ ಕೊಡುಗೆ ಅಪಾರವಾಗಿದೆ. ವಿದ್ಯಾರ್ಥಿಗಳು ಹೆಚ್ಚು ಅಧ್ಯಯನಶೀಲರಾಗಬೇಕು. ಅಂಬೇಡ್ಕರ್‌ ಅವರ ಜೀವನಧಾರಿತ ಪುಸ್ತಕ ಓದಬೇಕು ಎಂದರು.

ಗ್ರಾಪಂ ಸದಸ್ಯ ಮಹೇಂದ್ರಕುಮಾರ ಗದಗಿನ, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಕನಕಮೂರ್ತಿ ಚಲವಾದಿ ಮಾತನಾಡಿ, ಅಂಬೇಡ್ಕರ್ ಕೊಟ್ಟ ಸಂದೇಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಸಾಮಾಜಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ಮುಖಂಡ ಬಾಲರಾಜ ಮಂಗಳೂರು ಮಾತನಾಡಿ, ಅಂಬೇಡ್ಕರ್ ಅವಮಾನ ಅನುಭವಿಸಿ, ಎಲ್ಲರ ಸಮಾನತೆಗಾಗಿ ತಮ್ಮ ಜೀವನವನ್ನು ಅರ್ಪಿಸಿದ ಮಹಾನ್ ವ್ಯಕ್ತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಗುತ್ತಿಗೆದಾರ ವೀರಪ್ಪ ಬಿಸನಳ್ಳಿ, ಅಂಬೇಡ್ಕರ್ ಬಾಲ್ಯದಲ್ಲಿಯೇ ಜಾತಿ ವ್ಯವಸ್ಥೆ ನೋವು ಅನುಭವಿಸಿ, ಅದನ್ನು ಮೆಟ್ಟಿ ಉನ್ನತ ಶಿಕ್ಷಣ ಪಡೆದರು. ಸಂವಿಧಾನ ರಚನೆಯಲ್ಲಿ ಅನೇಕ ಸುಧಾರಣೆ ತಂದರು. ಎಲ್ಲರೂ ಸಮಾನತೆಯಿಂದ ಬದುಕಬೇಕೆಂಬ ಧ್ಯೇಯದೊಂದಿಗೆ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ‍್ಯಕ್ಕೆ ಬಲ ನೀಡುವ ಅಂಶಗಳನ್ನು ಸಂವಿಧಾನದಲ್ಲಿ ಸೇರಿಸಿದ್ದಾರೆ ಎಂದರು.

ಪತ್ರಕರ್ತ ಮಲ್ಲು ಮಾಟರಂಗಿ ಉಪನ್ಯಾಸ ನೀಡಿದರು. ಗ್ರಾಪಂನಲ್ಲಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರು, ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

ಪ್ರಮುಖರಾದ ಬಸವಲಿಂಗಪ್ಪ ವಕ್ಕಳದ, ನಗರಸಭೆ ಮಾಜಿ ಸದಸ್ಯೆ ರಾಧಾ ಕನಕಮೂರ್ತಿ ಚಲವಾದಿ, ಗ್ರಾಪಂ ಸದಸ್ಯರಾದ ಚಿದಾನಂದ ಮ್ಯಾಗಳಮನಿ, ವಿಜಯಲಕ್ಷ್ಮೀ ಮಂಗಳೂರು, ಲಲಿತಾ ಅಡಗಿಮನಿ, ಸಂಗಪ್ಪ ಅಡಗಿಮನಿ, ಬಸವರಾಜ ತೆಕ್ಕಲಕೋಟಿ, ಮಲ್ಲಪ್ಪ ತೆಕ್ಕಲಕೋಟಿ, ಕನಕಪ್ಪ ಚಲವಾದಿ, ಕಳಕಪ್ಪ ಚಲವಾದಿ, ಶಿವಪುತ್ರಪ್ಪ ಚಲವಾದಿ, ಶರಣು ಚಲವಾದಿ, ಬಸವರಾಜ ಕಡೇಮನಿ, ಭೀಮೇಶ ಚಲವಾದಿ, ಶರಣಪ್ಪ ಚಲವಾದಿ, ದೇವರಾಜ ಚಲವಾದಿ, ಶರಣಪ್ಪ ಚಲವಾದಿ, ಹುಚ್ಚಪ್ಪ ಚಲವಾದಿ ಇದ್ದರು.

ಕಾರ್ಯಕ್ರಮಕ್ಕು ಮುನ್ನ ಅಂಬೇಡ್ಕರ್‌ ವೃತ್ತಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.