ಲಕ್ಷ ಬರಹದಿಂದ ಮೂಡಿದ ಅಂಬೇಡ್ಕರ್ ಚಿತ್ರ

| Published : Apr 15 2025, 12:57 AM IST

ಸಾರಾಂಶ

ಅಂಬೇಡ್ಕರ್ ಎಂದು ಭಾವಚಿತ್ರ ರೂಪ ತಾಳುವ ಹಾಗೇ ಬರೆಯುತ್ತಾ ಹೋಗಿದ್ದಾರೆ. ಸದ್ಯ ಈ ಶಿಕ್ಷಕನ ಕಲೆಗೆ ವ್ಯಾಪಕ ಪ್ರಶಂಸೆ ಸಹ ಸಿಕ್ಕಿದ್ದು, ಬರಹದ ಭಾವಚಿತ್ರಕ್ಕೆ ಹೂವಿನ ಮಾಲೆಗೆಂದು ರಟ್ಟಿನ ಕೇಸರಿ, ಬಿಳಿ, ಹಸಿರು ಮೂರು ರಟ್ಟುಗಳಿಂದ ರಚಿಸಿದ ಹೂ ಮಾಲೆಯಲ್ಲಿ ಬರೋಬ್ಬರಿ 50 ಸಾವಿರ ಅಂಬೇಡ್ಕರ್ ಹೆಸರು ಬರೆದು ಅಭಿಮಾನ ಮೆರೆದಿದ್ದಾರೆ.

ಕೊಪ್ಪಳ:

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಶಿಕ್ಷಕನೊಬ್ಬ ಅವರ ಹೆಸರನ್ನು ಲಕ್ಷ ಬಾರಿ ಬರೆಯುವ ಮೂಲಕ ಭಾವಚಿತ್ರ ಸಿದ್ಧಪಡಿಸಿದ್ದಾರೆ.

ನಗರದ ನಿವಾಸಿ, ಕಬ್ಬರಗಿ ಸರ್ಕಾರಿ ಶಾಲೆಯ ಚಿತ್ರಕಲಾ ಶಿಕ್ಷಕ ತಿರುಪತಿ ಶಿವನಗುತ್ತಿ ತಮ್ಮ ಕಲಾತ್ಮಕದಲ್ಲಿ ಅಂಬೇಡ್ಕರ್ ಚಿತ್ರವನ್ನು ಅಂಬೇಡ್ಕರ್ ಎಂದು ಬರೆಯುವ ಮೂಲಕ ಅಭಿಮಾನ ಮೆರೆದಿದ್ದಾರೆ.

ಅಂಬೇಡ್ಕರ್ ಎಂದು ಭಾವಚಿತ್ರ ರೂಪ ತಾಳುವ ಹಾಗೇ ಬರೆಯುತ್ತಾ ಹೋಗಿದ್ದಾರೆ. ಸದ್ಯ ಈ ಶಿಕ್ಷಕನ ಕಲೆಗೆ ವ್ಯಾಪಕ ಪ್ರಶಂಸೆ ಸಹ ಸಿಕ್ಕಿದ್ದು, ಬರಹದ ಭಾವಚಿತ್ರಕ್ಕೆ ಹೂವಿನ ಮಾಲೆಗೆಂದು ರಟ್ಟಿನ ಕೇಸರಿ, ಬಿಳಿ, ಹಸಿರು ಮೂರು ರಟ್ಟುಗಳಿಂದ ರಚಿಸಿದ ಹೂ ಮಾಲೆಯಲ್ಲಿ ಬರೋಬ್ಬರಿ 50 ಸಾವಿರ ಅಂಬೇಡ್ಕರ್ ಹೆಸರು ಬರೆದು ಅಭಿಮಾನ ಮೆರೆದಿದ್ದಾರೆ.

ಚಿತ್ರಕಲಾ ಶಿಕ್ಷಕ ತಿರುಪತಿ ಶಿವನಗುತ್ತಿ ಅಂಬೇಡ್ಕರ್ ಬಗ್ಗೆ ಅಪಾರ ಅಭಿಮಾನ ಹೊಂದಿದ್ದು, ಅವರ ಹೆಸರಿನಲ್ಲಿ ಸಮಾಜಕ್ಕೆ ತಮ್ಮಿಂದ ಏನಾದರೂ ಕೊಡುಗೆ ನೀಡಬೇಕು ಎಂದು ಅಭಿಲಾಷೆ ಹೊಂದಿದ್ದರು. ತಮ್ಮ ಕಲೆಯಲ್ಲಿ ಅಂಬೇಡ್ಕರ್ ಹೆಸರು ಬರೆಯುವ ಮೂಲಕ ಅವರ ಭಾವಚಿತ್ರ ರೂಪ ತುಂಬಿ ಅಭಿಮಾನ ಮೆರೆದಿದ್ದಾರೆ.ಅಂಬೇಡ್ಕರ್ ಎಂಬ ಪದವನ್ನು ಲಕ್ಷಕ್ಕೂ ಹೆಚ್ಚು ಬಾರಿ ಬರೆದು ಅಂಬೇಡ್ಕರ್ ಭಾವಚಿತ್ರ ರಚಿಸಲಾಗಿದೆ. ಈ ಚಿತ್ರವನ್ನು ನೋಡಿದ ಪ್ರತಿಯೊಬ್ಬರಿಗೂ ಜೀವನದಲ್ಲಿ ಛಲ, ಬಲ, ಸ್ಫೂರ್ತಿ ಸಿಕ್ಕೆ ಸಿಗುತ್ತದೆ. ಸಂವಿಧಾನ ಎಂದಾಗ ನೆನಪಾಗುವುದೇ ಅಂಬೇಡ್ಕರ. ಅಶೋಕ ಚಕ್ರವರ್ತಿ ಎಂದಾಗ ಬರುವುದೇ ಅಂಬೇಡ್ಕರ್ ನೆನಪು. ಬುದ್ಧ ಎಂದಾಗ ಕಣ್ಮುಂದೆ ಬರುವುದೇ ಅಂಬೇಡ್ಕರ್ ಭಾವಚಿತ್ರ. ಈ ಹಿನ್ನೆಲೆಯಲ್ಲಿ ಈ ಭಾವಚಿತ್ರ ರಚನೆ ಮಾಡಲಾಗಿದೆ ಎಂದು ಚಿತ್ರಕಲಾ ಶಿಕ್ಷಕ ತಿರುಪತಿ ಶಿವನಗುತ್ತಿ ಹೇಳಿದ್ದಾರೆ.