ಸಂವಿಧಾನ ರಚಿಸಿದ ಅಂಬೇಡ್ಕರ್‌ ಕಾರ್ಯ ಅಪ್ರತಿಮವಾದುದು-ಮಾಜಿ ಸಚಿವ ಪಾಟೀಲ

| Published : Jan 21 2025, 12:30 AM IST

ಸಂವಿಧಾನ ರಚಿಸಿದ ಅಂಬೇಡ್ಕರ್‌ ಕಾರ್ಯ ಅಪ್ರತಿಮವಾದುದು-ಮಾಜಿ ಸಚಿವ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನ ಶಿಲ್ಪಿ ಡಾ|ಬಿ.ಆರ್. ಅಂಬೇಡ್ಕರ್ ಅವರು ಈ ದೇಶ ಕಂಡ ಅಪ್ರತಿಮ ನಾಯಕರು. ಭಾರತದ ಮುಕುಟವಾಗಿರುವ ನಮ್ಮ ಶ್ರೇಷ್ಠ ಸಂವಿಧಾನ ರಚಿಸಿದ ಅಂಬೇಡ್ಕರ್ ಕಾರ್ಯ ಅಪ್ರತಿಮವಾದದ್ದು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಹಿರೇಕೆರೂರು: ಸಂವಿಧಾನ ಶಿಲ್ಪಿ ಡಾ|ಬಿ.ಆರ್. ಅಂಬೇಡ್ಕರ್ ಅವರು ಈ ದೇಶ ಕಂಡ ಅಪ್ರತಿಮ ನಾಯಕರು. ಭಾರತದ ಮುಕುಟವಾಗಿರುವ ನಮ್ಮ ಶ್ರೇಷ್ಠ ಸಂವಿಧಾನ ರಚಿಸಿದ ಅಂಬೇಡ್ಕರ್ ಕಾರ್ಯ ಅಪ್ರತಿಮವಾದದ್ದು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.ಪಟ್ಟಣದ ತಮ್ಮ ನಿವಾಸದಲ್ಲಿ ಬಿಜೆಪಿ ಮಂಡಲದಿಂದ ಸಂವಿಧಾನ ಗೌರವ ಅಭಿಯಾನಯಡಿ ಆಯೋಜಿಸಿದ್ದ ಭೀಮಸಂಗಮ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಣ, ಸಂಘಟನೆ, ಹೋರಾಟ ಎಂಬ ತತ್ವಗಳನ್ನ ನಾವು ಪಾಲಿಸಿ. ನಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರಬೇಕು. ಮಕ್ಕಳನ್ನೇ ಆಸ್ತಿಯನ್ನಾಗಿಸಬೇಕು ಎಂದರು.ಬಿಜೆಪಿ ಅಂಬೇಡ್ಕರ್ ಅವರ ಆಶಯಗಳನ್ನು ಜಾರಿಗೊಳಿಸುವ ಮೂಲಕ ದಮನಿತರ ಪರವಾಗಿ ಮೀಸಲಾತಿ ಹೆಚ್ಚಿಸಿದೆ. ನಮ್ಮ ಆಡಳಿತಕಾಲದಲ್ಲಿ ನಿಗಮ ಮಂಡಳಿಗಳ ಮೂಲಕ ಹೆಚ್ಚಿನ ಅನುದಾನವನ್ನು ನೀಡಿ ಸ್ವಾವಲಂಬಿ ಜೀವನಕ್ಕೆ ಅನುವು ಮಾಡಿಕೊಡಲಾಗಿದೆ ಎಂದರು.ಡಾ| ಬಿ.ಆರ್.ಅಂಬೇಡ್ಕರ ಕುರಿತು ಉಪನ್ಯಾಸ ನೀಡಿದ ಮಂಜುನಾಥ ಚಲವಾದಿ, ನಮ್ಮ ಸಂವಿಧಾನ ಎಲ್ಲ ಗ್ರಂಥಗಳಿಗಿಂತಲೂ ಮಿಗಿಲಾಗಿದ್ದು ಅಂಬೇಡ್ಕರ್ ಅವರ ಚಿಂತನೆಗಳನ್ನು ನಾವು ಆಳವಾಗಿ ಅಭ್ಯಾಸ ಮಾಡುವ ಮೂಲಕ ದೇಶವನ್ನು ಕಟ್ಟಬೇಕು ನೋವುಗಳನ್ನು ಉಂಡು ಸಮಸ್ಯೆಗಳನ್ನೇ ಸವಾಲಾಗಿ ಸ್ವೀಕರಿಸಿ ಜ್ಞಾನದ ಕಣಜವಾದ ಅಂಬೇಡ್ಕರ್ ಅವರ ಜೀವನ ಇಂದಿನ ಪೀಳಿಗೆಗೆ ಅವಶ್ಯಕವಾಗಿದೆ ಎಂದರು.ಕಾರ್ಯಕ್ರಮದ ನಂತರ ದಲಿತ ಕುಟುಂಬಗಳ ಪರಿವಾರಗಳೊಂದಿಗೆ ಸಹ ಭೋಜನ ಏರ್ಪಡಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ರಾಜ್ಯ ಎಸ್‌ಟಿ ಮೋರ್ಚಾ ಕಾರ್ಯಕಾರಣಿ ಸದಸ್ಯ ಎನ್.ಎಂ.ಈಟೇರ್, ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದುರ್ಗೇಶ ತಿರಕಪ್ಪನವರ, ಜಿಲ್ಲಾ ಕಾರ್ಯದರ್ಶಿ ಬಸಮ್ಮ ಅಬಲೂರ, ನಿಂಗಾಚಾರ ಮಾಯಾಚಾರ, ಜಗದೀಶ ದೊಡ್ಡಗೌಡ್ರ, ಗೀತಾ ದಂಡಗೀಹಳ್ಳಿ, ಮುಖಂಡರಾದ ಬಿ.ಆರ್.ಪುಟ್ಟಣ್ಣನವರ, ರಮೇಶ್ ತೋರಣಗಟ್ಟಿ, ಚೆನ್ನೇಶ್ ದೀವಿಗಿಹಳ್ಳಿ, ಪ್ರಶಾಂತ ತಿರಕಪ್ಪನವರ, ಶಂಕರ್ ನಾಯಕ್ ಲಮಾಣಿ, ಹೊನ್ನಪ್ಪ ಸಾಲಿ, ಮಂಜುಳಾ ಬಾಳಿಕಾಯಿ, ಮಂಜುಳಾ ಮುತ್ತಗಿ, ವಿಶಾಲಾಕ್ಷಿ ಬಿಳಿಕಿ, ಸಿ.ಬಿ. ಮಾಳಗಿ, ಮನೋಹರ ವಡ್ಡಿನಕಟ್ಟಿ, ಸಂತೋಷ ಎಲ್ಲಾಪುರ, ರಾಜು ಬಟ್ಟಲಕಟ್ಟಿ ಸೇರಿದಂತೆ ದಲಿತ ಸಮಾಜದ ಮುಖಂಡರುಗಳು, ಕಾರ್ಯಕರ್ತರಿದ್ದರು.