ಸಾಮಾಜಿಕ ಬದಲಾವಣೆಗೆ ಶ್ರಮಿಸಿದ ಅಂಬಿಗರ ಚೌಡಯ್ಯ-ದುಂಡಿಗೌಡ್ರ

| Published : Jan 24 2025, 12:47 AM IST

ಸಾಮಾಜಿಕ ಬದಲಾವಣೆಗೆ ಶ್ರಮಿಸಿದ ಅಂಬಿಗರ ಚೌಡಯ್ಯ-ದುಂಡಿಗೌಡ್ರ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದ ಅಂಕು-ಡೊಂಕುಗಳನ್ನು ನಿಜಶರಣರು ನೇರ-ನಿಷ್ಠುರವಾಗಿ ಟೀಕಿಸುವ ಮೂಲಕ ತಿದ್ದುವ ಪ್ರಯತ್ನ ಮಾಡಿದ್ದಾರೆ ಎಂದು ಭರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.

ಶಿಗ್ಗಾಂವಿ: ಸಮಾಜದ ಅಂಕು-ಡೊಂಕುಗಳನ್ನು ನಿಜಶರಣರು ನೇರ-ನಿಷ್ಠುರವಾಗಿ ಟೀಕಿಸುವ ಮೂಲಕ ತಿದ್ದುವ ಪ್ರಯತ್ನ ಮಾಡಿದ್ದಾರೆ ಎಂದು ಭರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.

ತಾಲೂಕಿನ ಕುನ್ನೂರ ಗ್ರಾಮದಲ್ಲಿ ಜರುಗಿದ ನಿಜಶರಣ ಅಂಬಿಗರ ಚೌಡಯ್ಯನವರ ೯೦೫ನೇ ಜಯಂತಿ, ಜಾತ್ರಾ ಮಹೋತ್ಸವದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಿಜಶರಣ ಅಂಬಿಗರ ಚೌಡಯ್ಯನವರಿಗೆ ಅಂದಿನ ಶೋಷಿತ ವರ್ಗದವರ ನೋವಿನ ಪರಿಚಯ ಇತ್ತು. ಹೀಗಾಗಿ ಸಾಮಾಜಿಕ ಬದಲಾವಣೆಗೆ ಶ್ರಮಿಸಿದರು. ಮೂಢನಂಭಿಕೆ, ಕಂದಾಚಾರಗಳನ್ನು ಖಂಡಿಸಿದರು ಎಂದು ಹೇಳಿದರು.

ಸೋಮಯ್ಯನವರು ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಶಿಗ್ಗಾಂವಿ ಪುರಸಭೆ ಸದಸ್ಯ ಪರಶುರಾಮ ಸೋನ್ನದ ಮಾತನಾಡಿ, ಶರಣರ ಇತಿಹಾಸ, ಅವರ ಸಾತ್ವಿಕ ಬದುಕಿನ ಆದರ್ಶಗಳನ್ನು ತಿಳಿಸುವ ಪ್ರಯತ್ನ ಮಾಡಿದಾಗ ಮಾತ್ರ ಸರ್ವಸಮ್ಮತ ಸಮಾಜದ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.

ನಿಜಗುಣ ಅಂಬಿಗರ ಚೌಡಯ್ಯವರ ಕುರಿತು ಯುವ ವಾಙ್ಮಿ ಕಿರಣ ವಿವೇಕಾಂಶಿ ಉಪನ್ಯಾಸ ನೀಡಿದರು. ಅಗಡಿ ತೋಟದ ಮಾಲೀಕ ಜಯದೇವ ಅಗಡಿ, ಎಪಿಎಂಸಿ ಮಾಜಿ ಅಧ್ಯಕ್ಷ ತಿಪ್ಪಣ್ಣ ಸಾತಣ್ಣವರ, ಅಂಬಿಗರ ಚೌಡಯ್ಯನವರ ಸಮಿತಿಯ ಸೋಮಣ್ಣ ಮುದುಕಣ್ಣನವರ, ಬಸವರಾಜ ಕಣಕಣ್ಣನವರ, ಎಲ್.ಆರ್. ಪಾಟೀಲ, ಪತ್ರಕರ್ತ ಬಿ.ಎಸ್. ಹಿರೇಮಠ, ದೇವರಾಜ ಸುಣಗಾರ, ಪರಶುರಾಮ ಕಾಳಿ, ಮರಿತೆಮ್ಮಪ್ಪ ಮತ್ತಿಗಟ್ಟಿ, ವೀರಭದ್ರಪ್ಪಾ ಶ್ಯಾಡಂಬಿ, ಹನುಮಂತಪ್ಪ ಮತ್ತಿಗಟ್ಟಿ, ಗ್ರಾಪಂ ಸದಸ್ಯ ಮೈಲಾರಪ್ಪ ಇಂದೂರ, ರಾಮಪ್ಪ ಬಾರ್ಕಿ, ಕಲ್ಲಪ್ಪ ಬೀರವಳ್ಳಿ, ರಾಮಪ್ಪ ಬ. ಮತ್ತಿಗಟ್ಟಿ, ಈರಪ್ಪ ಗೋಣಿ, ಮಲ್ಲಿಕಾರ್ಜುನ ಮಣಕಟ್ಟಿ, ಗಣೇಶ ಬಾರ್ಕಿ, ಹನುಮಂತಪ್ಪ ಶ್ಯಾಡಂಬಿ, ಬಸಪ್ಪ ಉಳ್ಳಾಗಡ್ಡಿ, ತಿಪ್ಪಣ್ಣ ಸುಣಗಾರ, ಕಲ್ಲಪ್ಪ ಅಗಸಿಮನಿ, ಯಲ್ಲಪ್ಪ ನವಲೂರ, ಅಲ್ಲಿಸಾಬ್‌ ಅಲ್ಲಿಹಾಳ, ಮೈಲಾರಪ್ಪ ಮಮದಾಪುರ ಇದ್ದರು.

ಇದಕ್ಕೂ ಪೂರ್ವದಲ್ಲಿ ಅಂಬಿಗರ ಚೌಡಯ್ಯನವರ ೯೦೫ನೇ ಜಯಂತಿ ಮತ್ತು ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ನಿಮಿತ್ತ ಅಂಬಿಗರ ಚೌಡಯ್ಯನವರ ಭಾವಚಿತ್ರ ಮೆರವಣಿಗೆ ಹಾಗೂ ಜೋಡೆತ್ತಿನ ಮೆರವಣಿಗೆ ನಡೆಯಿತು. ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಗ್ರಾಮದ ಪ್ರತಿ ಬೀದಿಯಲ್ಲಿ ಹಾದು ದೇವಸ್ಥಾನದಲ್ಲಿ ಮೆರವಣಿಗೆ ಮುಕ್ತಾಯವಾಯಿತು.