ಅಂಬಿಗರ ಚೌಡಯ್ಯ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಕೂಡ್ಲಿಗಿ ತಹಸೀಲ್ದಾರ್ ವಿ.ಕೆ. ನೇತ್ರಾವತಿ ಹೇಳಿದರು

ಕೂಡ್ಲಿಗಿ: ಅಂಬಿಗರ ಚೌಡಯ್ಯ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಕೂಡ್ಲಿಗಿ ತಹಸೀಲ್ದಾರ್ ವಿ.ಕೆ. ನೇತ್ರಾವತಿ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಅವರ 906ನೇ ಜಯಂತಿಯಲ್ಲಿ ಅವರು ಮಾತನಾಡಿದರು. ಅಂಬಿಗರ ಚೌಡಯ್ಯ ಅವರು 12ನೇ ಶತಮಾನದಲ್ಲಿ ಸಮಾಜದ ಅಂಕು-ಕೊಂಡು ತಿದ್ದುವ ಪ್ರಯತ್ನ ಮಾಡಿದರು. ನೇರ-ನಿಷ್ಠುರ ಮಾತುಗಳಿಂದ ಮೌಢ್ಯ, ಡಾಂಬಿಕತನದ ವಿರುದ್ಧ ಹೋರಾಟ ಮಾಡಿದರು ಎಂದು ಹೇಳಿದರು.

ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಮಾಜದಲ್ಲಿ ವ್ಯವಸ್ಥೆ ಬಗ್ಗೆ ಕಟುವಾದ ಟೀಕೆಗಳನ್ನು ಕಾಣಬಹುದು. ಸಮಾಜಕ್ಕೆ ಅಂಟಿದ ಮೌಢ್ಯ, ಜಾತಿ ವ್ಯವಸ್ಥೆ, ಉಳ್ಳವರು ಮತ್ತು ಇಲ್ಲದವರ ಮಧ್ಯೆ ನಡೆಯುತ್ತಿರುವ ಕಾಳಗಕ್ಕೆ ಇಂದಿಗೂ ಚೌಡಯ್ಯನ ವಚನಗಳು ಪರಿಹಾರ ನೀಡುತ್ತಿವೆ ಎಂದರು.

ಕೂಡ್ಲಿಗಿ ತಾಲೂಕು ಗಂಗಾಮತಸ್ಥರ ಸಂಘದ ಅಧ್ಯಕ್ಷ ಗುಡೇಕೋಟೆ ಹುಲಿರಾಜಪ್ಪ ಮಾತನಾಡಿ, ಗಂಗಾಮತ ಸಮಾಜ ದೇಶದ ಹಿಂದುಳಿದ ವರ್ಗಗಗಳಲ್ಲಿ 2ನೇ ಅತಿ ದೊಡ್ಡ ಜನಸಂಖ್ಯೆ ಹೊಂದಿದ್ದು, ರಾಜಕೀಯ ಹಾಗೂ ಸಂಘಟನೆಯ ಕೊರತೆಯಿಂದ ಗಂಗಾಮತ ಜನಾಂಗ ಮುಖ್ಯವಾಹಿನಿಯಿಂದ ದೂರಉಳಿಯಬೇಕಾದ ದುಸ್ಥಿತಿ ಬಂದಿದೆ ಎಂದು ಹೇಳಿದರು.

ಕೂಡ್ಲಿಗಿ ತಾಲೂಕು ಗಂಗಾಮತಸ್ಥ ಸಮುದಾಯದ ಮುಖಂಡರಾದ ಗುಡೇಕೋಟೆ ಕುಬೇರ, ಶ್ರೀನಿವಾಸ್, ಬೇಕರಿ ಸುರೇಶ್, ಶಿವಶಂಕ್ರಪ್ಪ, ಹೊನ್ನೂರಪ್ಪ, ಹಿರೇಹೆಗ್ಡಾಳ್ ನಾಗರಾಜ, ಲಾಲೆಪ್ಪರ ಸುರೇಶ್ ಉಪಸ್ಥಿತರಿದ್ದರು. ಕೂಡ್ಲಿಗಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ವಚನಗಳಿಂದ ಸಮಾನತೆ ಸಾರಿದ ಶರಣ ಅಂಬಿಗರ ಚೌಡಯ್ಯ: ಶಾಸಕ ಕೃಷ್ಣನಾಯ್ಕ

ಹೂವಿನಹಡಗಲಿ: 12ನೇ ಶತಮಾನದ ಅನುಭವ ಮಂಟಪದಲ್ಲಿ ನಿಜ ಶರಣ ಎಂಬ ಹೆಸರು ಪಡೆದ, ಅಂಬಿಗರ ಚೌಡಯ್ಯ ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿನ ಮೇಲು-ಕೀಳನ್ನು ಕಿತ್ತುಹಾಕಿ ಸಮಾನತೆ ಸಾರಿದ ಶರಣರಾಗಿದ್ದಾರೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಇಲ್ಲಿನ ತಾಲೂಕg ಕಚೇರಿಯಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ, ನಿಜ ಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿ, ಈ ಶರಣ ಸಂತರ ಆದರ್ಶಮಯ ಬದುಕಿನ ಮೌಲ್ಯಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಚನ ಸಾಹಿತ್ಯದ ಬಸವಣ್ಣನವರ ಅನುಯಾಯಿಗಳಲ್ಲಿ ಅಂಬಿಗರ ಚೌಡಯ್ಯ ಪ್ರಮುಖರಾಗಿದ್ದಾರೆ. ಹಿಂದುಳಿದ ವರ್ಗದ ಜನರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಶಿಕ್ಷಣ ಪಡೆದ ಮಗು ಉತ್ತಮ ನಾಗರಿಕನಾಗುತ್ತಾನೆ. ಹಿಂದುಳಿದವರು ಎಂಬ ಹಣೆಪಟ್ಟಿ ಕಿತ್ತುಹಾಕುವ ಕೆಲಸವಾಗಬೇಕು ಎಂದರು.ತಾಪಂ ಇಒ ಪರಮೇಶ್ವರ, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆನಂದ ಡೊಳ್ಳಿನ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಈಟಿ ಲಿಂಗರಾಜ, ಗಂಗಾಮತ ಸಮಾಜದ ತಾಲೂಕಾಧ್ಯಕ್ಷ ಎಸ್. ತಿಮ್ಮಣ್ಣ, ಸಮಾಜದ ಪ್ರಮುಖಕರಾದ ಜಗದೀಶ, ಲೋಲಪ್ಪ, ಶರಣಗೌಡ, ಆರ್.ಟಿ. ನಾಗರಾಜ, ವಿನೋದ ಜಾಡರ್, ಕಾಳೇಶ ಬಾರ್ಕಿ, ಮಂಜುನಾಥ ಕೆ., ವಿಶ್ವನಾಥ ಎಂ, ಚೌಡಪ್ಪ ಸೇರಿದಂತೆ ಇತರರಿದ್ದರು.

ತಾಲೂಕಿನ ಬ್ಯಾಲಹುಣ್ಸಿ ಗ್ರಾಮದಲ್ಲಿಯೂ ಗಂಗಾಮತ ಸಮಾಜದವರು, ನಿಜ ಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರ ಮತ್ತು ನಾಮಫಲಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಲಕ್ಷ್ಮಣ ಬಾರ್ಕಿ, ಗ್ರಾಪಂ ಸದಸ್ಯ ಕೊಟ್ರಗೌಡ ಪಾಟೀಲ್‌ ಸೇರಿದಂತೆ ಇತರರಿದ್ದರು.