ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರುನಿಜಶರಣ ಅಂಬಿಗರ ಚೌಡಯ್ಯನವರ ವಚನಗಳು ನಮಗೆ ದಾರಿದೀಪವಾಗಿದ್ದು, ಅವರ ಆದರ್ಶಗಳನ್ನು ಪಾಲಿಸಿ ಸನ್ಮಾರ್ಗದಲ್ಲಿ ನಡೆಯೋಣ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ಹೇಳಿದರು.
ಸ್ಥಳೀಯ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಅಂಬಿಗರ ಚೌಡಯ್ಯನವರು ವಚನಗಳ ಮೂಲಕ ನೇರ ನಿಷ್ಠುರವಾಗಿ ಮಾತನಾಡಿ, ಸಮಾಜದಲ್ಲಿನ ಜಾತಿ ವ್ಯವಸ್ಥೆ, ಶೋಷಣೆ, ಮೂಢನಂಬಿಕೆ, ಹೋಗಲಾಡಿಸಲು ಶ್ರಮಿಸಿದರು.ಅವರು ರಚಿಸಿದ ವಚನಗಳು ಉತ್ತಮ ಬದುಕಿಗೆ ಹಿತನುಡಿಗಳಂತಾಗಿವೆ. ನಮ್ಮ ಸಮಾಜದ ಜನರಲ್ಲಿ ಮೂಢನಂಬಿಕೆಗಳು ಬೇರೂರಿದ್ದು, ಇದನ್ನು ತೊಲಗಿ ಸಲು ಜ್ಞಾನ ಮತ್ತು ಶಿಕ್ಷಣವೇ ನಮಗೆ ರಾಮಬಾಣವಾಗಿದ್ದು, ಈ ದಿಶೆಯಲ್ಲಿ ಪ್ರತಿಯೊಬ್ಬರೂ ಶಿಕ್ಷಣವಂತರಾದಾಗ ಮಾತ್ರ ಮೌಢ್ಯತೆ, ನಿರ್ಮೂಲನೆ ಸಾಧ್ಯ ಎಂದು ತಿಳಿಸಿದರು.ಮಕ್ಕಳಿಗೆ ಆರಂಭದಿಂದಲೇ ಉತ್ತಮವಾದ ವಿದ್ಯಾಭ್ಯಾಸ ಕೊಡಿಸಬೇಕು. ಸಮಾಜದಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿಸ ಬೇಕು. ಸಮಾಜದಲ್ಲಿ ಸರ್ವ ಸಮುದಾಯದ ಜನರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು.ನಗರದಲ್ಲಿ ಕೆರೆಗಳು ಉತ್ತಮವಾಗಿ ನಿರ್ಮಾಣವಾಗಿ ಮೀನುಗಾರಿಕೆಗೆ ಅನಕೂಲವಾಗಬೇಕಿದೆ. ಈ ದಿಶೆಯಲ್ಲಿ ಕೆರೆಗಳ ಅಭಿವೃದ್ಧಿ ಕಾರ್ಯ ಆರಂಭವಾಗಿದೆ ಎಂದರಲ್ಲದೆ, ಕೃಷ್ಣ ಮತ್ತು ತುಂಗಭದ್ರಾ ನದಿಯಲ್ಲಿ ಸಹ ಮೀನುಗಾರಿಕೆ ಮಾಡಲು ಉತ್ತೇಜನ ನೀಡಲಾಗುವುದು ಎಂದು ಹೇಳಿದರು.ಜಿಲ್ಲಾ ಗಂಗಾಮತಸ್ಥ ಸಮಾಜದ ಅಧ್ಯಕ್ಷ ಕೆ.ಶಾಂತಪ್ಪ ಅವರು ಉಪನ್ಯಾಸ ನೀಡಿ, ಶರಣರ ತತ್ವಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿ ಕೊಳ್ಳುವ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು. ಅಂಬಿಗರ ಚೌಡಯ್ಯನವರು ಕೇವಲ ಒಂದು ಸಮಾಜಕ್ಕೆ ಮಾತ್ರ ಸೀಮಿತವಲ್ಲ, ಇಡೀ ಮನುಕುಲಕ್ಕೆ ದಾರಿ ದೀಪವಾಗಿದ್ದವರು. ತಮ್ಮ ವಚನಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದರು. ಕಾಯಕದಲ್ಲಿ ಮೇಲು ಕೀಳೆಂಬುದಿಲ್ಲ: ದೋಣಿ ನಡೆಸುವ ಹಾಗೂ ಮೀನು ಹಿಡಿಯುವ ಅಂಬಿಗರ ಕಾಯಕದಲ್ಲಿ ಮೇಲುಕೀಳು ಎಂಬುದಿಲ್ಲ. ಮನುಷ್ಯ ಮನುಷ್ಯರ ನಡುವೆ ತಾರತಮ್ಯ ಇರಬಾರದು. ಕಾಯಕ ಆಧರಿಸಿ ಮೇಲು ಕೀಳು ಎಂದು ತಾರತಮ್ಯ ಮಾಡಿದ್ದರ ವಿರುದ್ಧ ಬಸವಾದಿ ಶರಣರು ಹೋರಾಟ ಮಾಡಿದರು. ಈ ಸಾಲಿನಲ್ಲಿ ಅಂಬಿಗರ ಚೌಡಯ್ಯ ಮೊದಲನೇ ಸಾಲಿನಲ್ಲಿ ನಿಲ್ಲುತ್ತಾರೆ. ಅದಕ್ಕೆ ಬಸವಣ್ಣನವರು ಇವರಿಗೆ ನಿಜಶರಣ ಎಂದು ಕರೆದರು ಎಂದು ವಿವರಿಸಿದರು.ನೇರ, ನಿಷ್ಠುರವಾದಿ:ಹನ್ನೆರಡನೇ ಶತಮಾನದ ಶರಣರಲ್ಲಿ ಪ್ರಮುಖರಾಗಿರುವ ಅಂಬಿಗರ ಚೌಡಯ್ಯನವರು ನೇರ, ನಿಷ್ಠುರಿಯಾಗಿದ್ದರು. ಅವರ ವ್ಯಕ್ತಿತ್ವ ಎಂತಹದ್ದು ಎನ್ನುವುದಕ್ಕೆ ಅವರ ವಚನಗಳೇ ಸಾಕ್ಷಿ. ನಾಡಿನ ಚರಿತ್ರೆಯಲ್ಲಿ ಹನ್ನೆರಡನೇ ಶತಮಾನಕ್ಕೆ ವಿಶೇಷ ಮಹತ್ವ ಇದೆ. ಆ ಕಾಲಘಟ್ಟದಲ್ಲಿ ಬಸವಣ್ಣ ನವರ ಸಾಮಾಜಿಕ ಕ್ರಾಂತಿಯಲ್ಲಿ ಚೌಡಯ್ಯನವರೂ ಭಾಗಿಯಾಗಿದ್ದರು. ತಮ್ಮ ನೇರ, ನಿಷ್ಠುರ ಮಾತುಗಳು, ಖಂಡಿಸುವ ಗುಣದಿಂದಲೇ ‘ನಿಜಶರಣ’ ಎಂಬ ಬಿರುದು ಹೊಂದಿದ್ದರು. ವಚನಗಳ ಮೂಲಕ ತಮ್ಮ ಕಾಯಕವನ್ನು ಎತ್ತಿ ಹಿಡಿದಿದ್ದರು. ಜೊತೆಗೆ ಸ್ತ್ರೀ ಸಮಾನತೆಗೂ ಮಹತ್ವ ಕೊಟ್ಟಿದ್ದರು ಎಂದು ಉಪನ್ಯಾಸದಲ್ಲಿ ವಿವರಿಸಿದರು. ಈ ಸಂದರ್ಭದಲ್ಲಿ ಪಾಲಿಕೆಯ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಗ್ರೇಡ್-2 ತಹಶೀಲ್ದಾರ್ ಭೀಮರಾಯ, ನೇತಾಜಿ ನಗರ ಪೊಲೀಸ ಠಾಣೆಯ ಪಿಎಸ್ಐ ಲಕ್ಷ್ಮೀ, ಸಮಾಜದ ಮುಖಂಡರಾದ ಶರಣಪ್ಪ ಕಡಗೋಳ, ಶಿವರಾಂ, ಕಡಗೋಳ, ಆಂಜೀನೆಯ, ಕೆ.ಶರಣಪ್ಪ, ರಾಜೇಶ್ವರಿ ಸೇರಿ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ, ಗಂಗಾಮತಸ್ಥ ಸೇರಿ ವಿವಿಧ ಸಮಾಜಗಳ ಮುಖಂಡರು,ಯುವಕರು,ಮಹಿಳೆಯರು,ಮಕ್ಕಳು ಭಾಗವಹಿಸಿದ್ದರು.ಅಂಬಿಗರ ಚೌಡಯ್ಯ ಪುತ್ಥಳಿಗೆ ಗಣ್ಯರ ಪೂಜೆರಾಯಚೂರು: ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಹಿನ್ನೆಲೆಯಲ್ಲಿ ನಗರದಲ್ಲಿ ಚೌಡಯ್ಯ ಅವರ ಭಾವಚಿತ್ರದ ಅದ್ದೂರಿ ಮೆರವಣಿಗೆಯನ್ನು ಮಂಗಳವಾರ ನಡೆಸಲಾಯಿತು.ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗಂಗಾಮತಸ್ಥ ಸಮಾಜ ಸೇವಾ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಯಂತೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಸ್ಥಳೀಯ ನಿಜಶರಣ ಅಂಬಿಗರ ಚೌಡಯ್ಯ ವೃತ್ತದಲ್ಲಿರುವ ಚೌಡಯ್ಯ ಅವರ ಪುತ್ಥಳಿಗೆ ಗಣ್ಯರು ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು. ನಂತರ ಅಂಬಿಗರ ಚೌಡಯ್ಯ ಅವರ ಭಾವಚಿತ್ರದ ಮೆರವಣಿಗೆಗೆ ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಚಾಲನೆ ನೀಡಿದರು.ಅಲ್ಲಿಂದ ಹೊರಟ ಮೆರವಣಿಗೆ ತಿಮ್ಮಾಪುರಪೇಟೆ, ನೇತಾಜಿನಗರ, ಸರಫ್ ಬಜಾರ್,ತೀನ್ ಖಂದಿಲ್, ತಹಸೀಲ್ದಾರ್ ಕಚೇರಿ, ಅಂಬೇಡ್ಕರ್ ವೃತ್ತದ ಮುಖಾಂತರ ರಂಗಮಂದಿರಕ್ಕೆ ಬಂದು ತಲುಪಿತು.ಅದ್ದೂರಿಯಾಗಿ ಸಾಗಿದ ಮೆರವಣಿಗೆ ಯುದ್ಧಕ್ಕು ಕಲಾತಂಡಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಮಹಿಳೆಯರು,ಬಾಲಕಿಯರು ಕುಂಭ-ಕಳಸಗನ್ನು ತಲೆಮೇಲೆ ಹಿಟ್ಟುಕೊಂಡು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರೇ, ಮಕ್ಕಳು ಕೋಲಾಟವು ಆಕರ್ಷಣೀಯವಾಗಿತ್ತು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ಮುಖಂಡರಾದ ಕೆ.ಶಾಂತಪ್ಪ, ಕೆ.ಶರಣಪ್ಪ, ಆಂಜನೇಯ್ಯ, ಬಾಬುರಾವ್, ರುದ್ರಪ್ಪ ಅಂಗಡಿ,ರವೀಂದ್ರ ಜಲ್ದಾರ್, ಶಿವಶಂಕರ, ರಂಗನಾಥ, ಲಲಿತಾ, ವಿಜಯ ರಾಜೇಶ್ವರಿ ಸೇರಿದಂತೆ ವಿವಿಧ ಸಮಾಜದ ಪ್ರಮುಖರು,ಸಂಘಟನೆಗಳ ಪದಾಧಿಕಾರಿಗಳು ಇದ್ದರು.ಸಾಧಕರಿಗೆ ಸನ್ಮಾನ:ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಹಿನ್ನೆಲೆಯಲ್ಲಿ ನಗರದ ರಂಗಮಂದಿರದಲ್ಲಿ ನಡೆದ ವೇದಿಕೆ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಂಗಾಮತಸ್ಥ ಸಮಾಜದವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕವಿತಾಳ: ವಿವಿಧೆಡೆ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಕವಿತಾಳ: ಪಟ್ಟಣ ಸೇರಿದಂತೆ ವಿವಿಧಡೆ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತಿಯನ್ನು ಆಚರಣೆ ಮಾಡಲಾಯಿತು. ಇಲ್ಲಿನ ಪಟ್ಟಣ ಪಂಚಾಯ್ತಿಯಲ್ಲಿ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಸಮಾಜದ ಮುಖಂಡರು ಮಾಲಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ದಲಿತ ಸಂಘಟನೆ ಮುಖಂಡ ಯಾಕೂಬ ಕಡತಲ ಅವರು ಮಾತನಾಡಿ 12ನೇ ಶತಮಾನದ ಬಸವಣ್ಣ ನವರ ಅನುಭವ ಮಂಟಪದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ಒಬ್ಬರು ಹಲವು ವಚನಗಳ ಮೂಲಕ ಅಪಾರ ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಯಲ್ಲಪ್ಪ ಮಾಡಗಿರಿ, ಮುಖಂಡರಾದ ಕರಿಯಪ್ಪ ಅಡ್ಡೆ, ಚಾಂದ ಪಾಷಾ, ಹುಚ್ಚಪ್ಪ ವಡವಟ್ಟಿ, ಪ ಪಂ ಮಾಜಿ ಸದಸ್ಯ ಮೌನೇಶ ಹಿರೇಕುರಬರು, ಹನುಮಂತ, ಮೌನೇಶ ಕೊಡ್ಲಿ, ಈರಣ್ಣ, ಹನುಮಂತ, ಶಿವುಕುಮಾರ ಹೋಟೆಲ್, ಮೌನೇಶ ಸೈಕಲ್ ಅಂಗಡಿ, ಸಿಲರ್ ಸಾಬ್, ಸುಗಪ್ಪ, ಸಗರಪ್ಪ, ಶಿವು, ಅಮರೇಶ, ದುರುಗಪ್ಪ ಮತ್ತು ಸಿಬ್ಬಂದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಸಿರವಾರ ತಾಲೂಕಿನ ಬಾಗಲವಾಡ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಜಯಂತಿ ಆಚರಿಸಲಾಯಿತು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಪಿ. ತಿಪ್ಪಣ್ಣ ವಕೀಲ, ಅಭಿವೃದ್ಧಿ ಅಧಿಕಾರಿ ದೇವೇಂದ್ರಪ್ಪ, ಸಿಬ್ಬಂದಿ ಈಕಪ್ಪ ಪವಾರ್, ಸದಸ್ಯರು ಮಾರೇಶ್ ಕಾವಲಿ, ಬಸವರಾಜ ಮೇಟಿ ಗಂಗಾಧರ ಹಿಂದಿನಮನೆ, ಮೌನೇಶ ಕೋರಿ ನಾಗರಾಜ್ ಬೋವಿ ಸದ್ದಾಮ್. ಅಂಬರೀಶ್ ಇದ್ದರು.ಮಾನ್ವಿಯಲ್ಲಿ ವೇಮನ ಜಯಂತಿ ಆಚರಣೆ
ಮಾನ್ವಿ:ಮಹಾಯೋಗಿ ವೇಮನ ಜಯಂತಿಯನ್ನು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸರಳವಾಗಿ ಆಚರಿಸಲಾಯಿತು.
ಜಯಂತಿ ಹಿನ್ನೆಲೆಯಲ್ಲಿ ತಾಲೂಕಾಡಳಿತದಿಂದ ವೇಮನ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು. ಇದೇ ವೇಳೆ ವೇಮನರ ಜೀವನ-ಸಾಧನೆ, ಸಮಾಜಕ್ಕೆ ಅವರು ಕೊಟ್ಟಂತಹ ಕೊಡುಗೆಗಳನ್ನು ಸ್ಮರಿಸಲಾಯಿತು. ಪ್ರಸ್ತುತ ಸಮಾಜಕ್ಕೆ ವೇಮನರ ಸಂದೇಶಗಳ ಅಗತ್ಯವಿದ್ದು, ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದು ಅಧಿಕಾರಿಗಳು ತಿಳಿಸಿದರು.ಈ ವೇಳೆ ತಹಸೀಲ್ದಾರ್ ಕಚೇರಿ ಅಧಿಕಾರಿ,ಸಿಬ್ಬಂದಿ,ನಿವಾಸಿಗಳು ಇದ್ದರು.‘ಕಾಯಕ ಶ್ರೇಷ್ಠತೆ ಸಾರಿದ ಶರಣ ಅಂಬಿಗರ ಚೌಡಯ್ಯ’ಸಿರವಾರ /ದೇವದುರ್ಗ: ಜಗತ್ತಿನ ಎಲ್ಲ ಸಮುದಾಯದ ಕಾಯಕ ಪವಿತ್ರವಾದುದು, ನಮ್ಮ ಕಾಯಕ ನಮಗೆ ಶ್ರೇಷ್ಠ ಎಂದು ಸಾರಿ, ವಚನಗಳಿಂದ ಜಾಗೃತಿ ಮೂಡಿಸಿ ಸಮಾಜದ ಅಂಕು ಡೊಂಕುಗಳನ್ನು ತಿದ್ದಿದ ಮಹಾನ್ ನಾಯಕ ಅಂಬಿಗರ ಚೌಡಯ್ಯ ಎಂದು ಎನ್.ಉದಯಕುಮಾರ ಹೇಳಿದರು.ತಾಲ್ಲೂಕು ಆಡಳಿತದಿಂದ ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಮಂಗಳವಾರ ಪಟ್ಟಣ ಕಾಲುವೆ ಪಕ್ಕದಲ್ಲಿರುವ ಅಂಬಿಗರ ಚೌಡಯ್ಯ ನಾಮಫಲಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಪಟ್ಟಣದ ದೇವದುರ್ಗ ಕ್ರಾಸ್ ಬಸವ ವೃತ್ತದಿಂದ ಮರಾಠ ರಸ್ತೆಯಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯ ವೃತ್ತದವರೆಗೂ ಮಹಿಳೆಯರಿಂದ ಕಳಸ, ಡೊಳ್ಳು, ಡಿಜೆ ಮೆರವಣಿಗೆಯೊಂದಿಗೆ ಮೆರವಣಿಗೆ ನಡೆಯಿತು.ತಹಸೀಲ್ದಾರ್ ರವಿ ಎಸ್.ಅಂಗಡಿ ಮಾತನಾಡಿದರು. ಗಂಗಾಮತ ಸಮಾಜದ ತಾಲ್ಲೂಕು ಅಧ್ಯಕ್ಷ ತಿಮಣ್ಣ ಕಟ್ಟಿಮನಿ , ನೌಕರರ ಸಂಘದ ಅಧ್ಯಕ್ಷ ಆರೀಫ್ ಮಿಯಾ, ಜೆ.ದೇವರಾಜಗೌಡ, ಜಿ.ಲೋಕರೆಡ್ಡಿ, ಪಪಂ ಸದಸ್ಯರು,ಮುಖಂಡರು, ಗಂಗಾಮತಸ್ಥ ಸೇರಿ ವಿವಿಧ ಸಮಾಜದರು, ಮಹಿಳೆಯರು ಭಾಗವಹಿಸಿದ್ದರು.ನೇರ, ನಿಷ್ಠುರ ಮಾತುಗಳ ನಿಜಶರಣ ಚೌಡಯ್ಯ: ವೆಂಕಟರಾವ್ ನಾಡಗೌಡ ಬಣ್ಣನೆ
ಸಿಂಧನೂರು/ ಮಸ್ಕಿ: ಸಿಂಧನೂರು ನಗರ ಮತ್ತು ಮಸ್ಕಿ ಪಟ್ಟಣ ಸೇರಿದಂತೆ ವಿವಿಧೆಡೆ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಸೋಮವಾರ ಅದ್ದೂರಿಯಾಗಿ ಆಚರಿಸಲಾಯಿತು.ಮಸ್ಕಿ ತಾಲೂಕಾಡಳಿತದಿಂದ ಕಚೇರಿಯಲ್ಲಿ ವಚನಕಾರ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಚೇರಿ ಅಧಿಕಾರಿ,ಸಿಬ್ಬಂದಿ ವರ್ಗದವರು ಇದ್ದರು.ಸಿಂಧನೂರು ನಗರದ ಮಿನಿವಿಧಾನಸೌಧ ಕಚೇರಿಯಲ್ಲಿ ತಾಲ್ಲೂಕಾಡಳಿತ ವತಿಯಿಂದ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಲಾಯಿತು. ಈ ವೇಳೆ
ಕೆಓಎಫ್ ರಾಜ್ಯ ಅಧ್ಯಕ್ಷ ವೆಂಕಟರಾವ್ ನಾಡಗೌಡ ಮಾತನಾಡಿ, ಚೌಡಯ್ಯನವರ ನೇರ, ನಿಷ್ಠುರ ಮಾತುಗಳು, ಖಂಡಿಸುವ ಗುಣದಿಂದಲೇ ನಿಜಶರಣ ಎಂದು ಬಿರುದು ಹೊಂದಿದ್ದರು. ವಚನಗಳ ಮೂಲಕ ತಮ್ಮ ಕಾಯಕವನ್ನು ಎತ್ತಿ ಹಿಡಿದಿದ್ದರು ಎಂದರು.ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿದರು. ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಂಪನಗೌಡ ಬಾದರ್ಲಿ, ಸೋಮನಗೌಡ ಬಾದರ್ಲಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ, ಬಸವಕೇಂದ್ರದ ತಾಲ್ಲೂಕು ಘಟಕದ ಅಧ್ಯಕ್ಷ ಕರೇಗೌಡ ಕುರುಕುಂದಾ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ರವಿಗೌಡ, ಮುಖಂಡರಾದ ಆರ್.ಮಲ್ಲಯ್ಯ ವಕೀಲ, ಕೊಮಾರೆಪ್ಪ ಜವಳಗೇರಾ, ಮಂಜುನಾಥ ಸೋಮಲಾಪುರ, ಕೆ.ಮರಿಯಪ್ಪ, ಅಲ್ಲಮಪ್ರಭು ಪೂಜಾರ್, ಲಕ್ಷ್ಮಿ ಪತ್ತಾರ ಇದ್ದರು.