ಸಾರಾಂಶ
ದೇವದುರ್ಗ ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಿಸಲಾಯಿತು.
ದೇವದುರ್ಗ: ಇಲ್ಲಿನ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಿಸಲಾಯಿತು.
ತಹಸೀಲ್ದಾಸೀಲ್ದಾರ್ ಚೆನ್ನಮಲ್ಲಪ್ಪ ಘಂಟಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ನೇರ ದಿಟ್ಟ ಶರಣರಾದ ನಿಜಶರಣ ಅಂಬಿಗರ ಚೌಡಯ್ಯ ಅವರ ವಚನ ಸಾಹಿತ್ಯವು ನಮ್ಮ ಸಮಾಜಕ್ಕೆ ದಾರಿ ದೀಪವಾಗಿವೆ ಎಂದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಿರಿಯ ನ್ಯಾಯವಾದಿ ರಾಘವೇಂದ್ರ ಕೋಲ್ಕರ್ ಮಾತನಾಡಿದರು.
ಈ ಸಂದರ್ಭದಲ್ಲಿ ಶಿರಸ್ತೇದಾರ್ ಭೀಮರಾಯ ಮೇಟಿ, ಗೋವಿಂದ ನಾಯಕ, ಭೀಮನ್ ಗೌಡ ಕಂದಾಯ ನಿರೀಕ್ಷಕರು, ಶರಣಯ್ಯ ಸ್ವಾಮಿ, ಪ್ರವೀಣ್ ಕುಮಾರ್ ದೇವರೆಡ್ಡಿ, ರವಿಕುಮಾರ್, ಗ್ರೇಡ್ 2 ತಹಸೀಲ್ದಾರ್ ವೆಂಕಟೇಶ್ ಕುಲಕರ್ಣಿ, ಕಾರ್ಯಾಲಯದ ನೌಕರರು ಉಪಸ್ಥಿತರಿದ್ದರು.ಗಂಗಾ ಮತ ತಾಲೂಕು ಸಮಾಜದ ಅಧ್ಯಕ್ಷರಾದ ಸಾಬಣ್ಣ ಗೂಗಲ್, ಗೌರವಾಧ್ಯಕ್ಷ ಪ್ರಭಾಕರ್ ಅಂಬಿಗೇರ್, ಅಮರೇಶ್ ಮಾನ್ವಿಕರ್. ಏ.ವಿ ಬಸವರಾಜ್, ಶಿಕ್ಷಕರು ಪರಮಾನಂದ ದೇಸಾಯಿ, ಭಾಗ್ಯ ಲಕ್ಷ್ಮಣ್ ಹಾಗೂ ಲಕ್ಷ್ಮಿ ಅಂಬಿಗೇರ್ ಇದರ ಜೊತೆಗೆ ಸಂಘ-ಸಂಸ್ಥೆಗಳ ಮುಖಂಡರಾದ ಎಲ್ಲಪ್ಪ ಹಾಲ್ದಾರ್ತಿ, ರಾಜ್ಯ ಕಾರ್ಮಿಕ ಒಕ್ಕೂಟ ಅಧ್ಯಕ್ಷ ಟಿ. ಜಯರಾಜ, ಎಚ್. ಶಿವರಾಜ್, ಕೃಷ್ಣ ದಾಸರ ಸೇರಿದಂತೆ ಇತರರು ಉಪಸ್ಥಿತರಿದ್ದರು.