ಕರ್ನಾಟಕ ಎಂಜಿನಿಯರ್‌ಗಳ ಸಂಘದ ಸಂಘಟನೆಯ ಬಲವರ್ಧನೆ ಮತ್ತು ಇಂಜಿನಿಯರ್‌ಗಳಸಮಸ್ಯೆಗಳ ಪರಿಹಾರಕ್ಕಾಗಿ 100 ದಿನಗಳ ಮಹತ್ವಾಕಾಂಕ್ಷೆಯ ಕಾರ್ಯಯೋಜನೆ ರೂಪಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಎಂಜಿನಿಯರ್‌ಗಳ ಸಂಘದ ರಾಜ್ಯಾಧ್ಯಕ್ಷರ ಹೇಳಿಕೆ

ಕನ್ನಡಪ್ರಭ ವಾರ್ತೆ ಮುಂಡರಗಿ

ಕರ್ನಾಟಕ ಎಂಜಿನಿಯರ್‌ಗಳ ಸಂಘದ ಸಂಘಟನೆಯ ಬಲವರ್ಧನೆ ಮತ್ತು ಇಂಜಿನಿಯರ್‌ಗಳ

ಸಮಸ್ಯೆಗಳ ಪರಿಹಾರಕ್ಕಾಗಿ 100 ದಿನಗಳ ಮಹತ್ವಾಕಾಂಕ್ಷೆಯ ಕಾರ್ಯಯೋಜನೆ ರೂಪಿಸಲಾಗಿದೆ

ಎಂದು ಕರ್ನಾಟಕ ಎಂಜಿನಿಯರ್‌ಗಳ ಸಂಘದ ರಾಜ್ಯಾಧ್ಯಕ್ಷ ಪ್ರಕಾಶಗೌಡ ಪಾಟೀಲ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮೊದಲ 30 ದಿನಗಳ ಕಾಲ ಸಮಸ್ಯೆಗಳನ್ನು ಆಲಿಸುವುದು ಮತ್ತು ಅವುಗಳ ಬಗ್ಗೆ ಯೋಚಿಸುವುದು, ಕಾರ್ಯಕಾರಿ ಸಮಿತಿ ಹಾಗೂ ಪ್ರಾದೇಶಿಕ ಪ್ರತಿನಿಧಿಗಳ ಮಹತ್ವದ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುವುದು. ಎಂಜಿನಿಯರ್‌ಗಳು ಎದುರಿಸುತ್ತಿರುವ 10 ಪ್ರಮುಖ ಸಮಸ್ಯೆಗಳನ್ನು ಗುರುತಿಸಿ ಪಟ್ಟಿ ಮಾಡಿ ಸೇವಾ ವಿಷಯಗಳು, ನಿಯಮ 42 ಮತ್ತು ಇತರ ಪ್ರಮುಖ ಜ್ವಲಂತ

ಸಮಸ್ಯೆಗಳ ಪರಿಹಾರಕ್ಕೆ ಮೊದಲ ಆದ್ಯತೆ ನೀಡುವುದು. ಕಾರ್ಯಕ್ಷಮತೆ ಹೆಚ್ಚಿಸಲು ಸೇವಾ

ಸಮಿತಿ, ಕಾನೂನು ಸಮಿತಿ, ತಾಂತ್ರಿಕ ಸಮಿತಿ ಹಾಗೂ ಸದಸ್ಯರ ಕಲ್ಯಾಣ ಸಮಿತಿ ರಚನೆ ಮಾಡಲಾಗುವುದು ಎಂದರು.

ಇಂಜಿನಿಯರ್‌ಗಳ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಕ್ತ ಮನವಿಗಳನ್ನು ಸಲ್ಲಿಸಲು ಯೋಚಿಸಲಾಗಿದೆ. ಸಮಸ್ಯೆಗಳ ಶೀಘ್ರ ಇತ್ಯರ್ಥಕ್ಕಾಗಿ ಅಗತ್ಯವಿದ್ದಲ್ಲಿ ಸಚಿವರು, ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರನ್ನು ನೇರವಾಗಿ ಭೇಟಿ ಮಾಡಿ ಚರ್ಚೆ ನಡೆಸಲಾಗುವುದು. ಅಗತ್ಯವಿರುವಲ್ಲಿ ಸಚಿವರು, ಕಾರ್ಯದರ್ಶಿಗಳು ಹಾಗೂ ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

61ರಿಂದ 100 ದಿನಗಳ ಅವಧಿಯಲ್ಲಿ ಫಲಿತಾಂಶ ಮತ್ತು ಪ್ರಗತಿ ಪರಿಶೀಲನೆ ನಡೆಸಿ ಸದಸ್ಯರ ಪ್ರಮುಖ 10 ಸಮಸ್ಯೆ ಗುರುತಿಸಿ, ಅವುಗಳ ಶೀಘ್ರ ಪರಿಹಾರಕ್ಕಾಗಿ ನಿರಂತರವಾಗಿ ಫಾಲೋ-ಅಪ್ ಮಾಡಲಾಗುವುದು. ಕೈಗೊಂಡ ಕೆಲಸಗಳ ಪ್ರಗತಿ ಪರಿಶೀಲನೆಗೆ ಕಾರ್ಯಕಾರಿ ಸಮಿತಿಯೊಂದಿಗೆ ಕಾಲಕಾಲಕ್ಕೆ ಸಭೆ ನಡೆಸಿ ಸಂಘಟನೆಯ ಪ್ರಮುಖ ಬೆಳವಣಿಗೆಗಳು ಮತ್ತು ನಿರ್ಧಾರಗಳನ್ನು ಪಾರದರ್ಶಕವಾಗಿ ಸದಸ್ಯರ ಗಮನಕ್ಕೆ ತರುವುದು. 100 ದಿನಗಳ ಸಾಧನೆ ಮತ್ತು ಪ್ರಗತಿಯನ್ನು ಒಳಗೊಂಡ ಅಧ್ಯಕ್ಷರ ಕಾರ್ಯ ವರದಿಯನ್ನು ಅಧಿಕೃತವಾಗಿ ಪ್ರಕಟಿಸುವ ಮೂಲಕ ಒಗ್ಗಟ್ಟು, ಪಾರದರ್ಶಕತೆ ಹಾಗೂ ಫಲಿತಾಂಶ ಆಧಾರಿತ ಸಂಘಟನೆಯನ್ನು ಕಟ್ಟಿ ಬೆಳೆಸುವುದು ನಮ್ಮ ಸಂಘದ ಪ್ರಮುಖ ಉದ್ದೇಶವಾಗಿದೆ ಎಂದರು.

ನೂತನ ತಂತ್ರಜ್ಞಾನಗಳ ಅಳವಡಿಕೆಗಾಗಿ ತರಬೇತಿ, ಕಾರ್ಯಾಗಾರ ಮತ್ತು ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುವುದು. ಸದಸ್ಯರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಪರಿಣಾಮಕಾರಿ ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ರೂಪಿಸುವುದು. ಎಲ್ಲಾ ವಿಭಾಗ ಹಾಗೂ ಪ್ರದೇಶಗಳ ಎಂಜಿನಿಯರ್‌ಗಳನ್ನು ಒಗ್ಗೂಡಿಸಿ, ಸಂಘದ ಪ್ರತಿಯೊಂದು ಕಾರ್ಯ ಚಟುವಟಿಕೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಸೇರಿ ಎಂಜಿನಿಯರ್‌ಗಳ ಸಮಸ್ಯೆ ಆಲಿಸಿ, ಸೂಕ್ತ ವೇದಿಕೆಯಲ್ಲಿ ಮಂಡಿಸಿ, ನಿರಂತರವಾಗಿ ಪರಿಶೀಲನೆ ಮಾಡುವ ಮೂಲಕ ಸಿಗುವ ಫಲಿತಾಂಶವನ್ನು ಸದಸ್ಯರಿಗೆ ತಲುಪಿಸುವುದು ನನ್ನ ಪ್ರಮುಖ ಉದ್ದೇಶವಾಗಿದೆ ಎಂದರು.