ಮಾನವ ಕುಲಕ್ಕೆ ಅಪಮಾನ ಮಾಡಿದ ಅಮಿತ್ ಶಾ

| Published : Dec 26 2024, 01:04 AM IST

ಸಾರಾಂಶ

ಹುಲಸೂರ ಭಾರತೀಯ ದಲಿತ ಪ್ಯಾಂಥ್ಯರ್ಸ್ ತಾಲೂಕು ಶಾಖೆಯಿಂದ ಡಾ.ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಶಾಂತಿಯುತ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹುಲಸೂರ

ಕೇಂದ್ರ ಗೃಹ ಸಚಿವ ಅಮೀತ್ ಶಾ ಡಾ.ಅಂಬೇಡ್ಕರ್‌ಗೆ ಅವಮಾನ ಮಾಡುವ ಮೂಲಕ, ಇಡೀ ಮಾನವ ಕುಲಕ್ಕೆ ಅಪಮಾನ ಮಾಡಿದ್ದಾರೆ ಎಂದು ಭಾರತೀಯ ದಲಿತ ಪ್ಯಾಂಥ್ಯರ್ಸ್ ಜಿಲ್ಲಾಧ್ಯಕ್ಷ ವೈಜನಾಥ ಸಿಂಧೆ ತಿಳಿಸಿದರು.

ಪಟ್ಟಣದಲ್ಲಿ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಭಾರತೀಯ ದಲಿತ ಪ್ಯಾಂಥ್ಯರ್ಸ ತಾಲೂಕು ಶಾಖೆಯಿಂದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ವೃತ್ತದಿಂದ ತಹಸೀಲ್ದಾರ್ ಕಚೇರಿಯವರೆಗೆ ನಡೆದ ಪ್ರತಿಭಟನೆ ರ್‍ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದರು. ಸಮಾನತೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟು, ಇಡೀ ದೇಶದ ಎಲ್ಲಾ ಜಾತಿಯ ಜನಾಂಗದವರಿಗೆ ಶೋಷಿತ ಸಮುದಾಯಗಳಿಗೆ ಬದುಕುವ ಹಕ್ಕನ್ನು ಕೊಟ್ಟಿರುವ ಸಂವಿಧಾನ ಶಿಲ್ಪಿಗೆ ಅವಹೇಳನಕಾರಿಯಾಗಿ ಮಾತನಾಡಿದ ಅಮೀತ್ ಶಾ ಅವರನ್ನು ಸಚಿವ ಸಂಪುಟದಿಂದ ಕೂಡಲೇ ವಜಾಗೊಳಿಸಿ, ಅವರ ಮೇಲೆ ದೇಶದ್ರೋಹಿ ಪ್ರಕರಣ ದಾಖಲಿಸಿ ಭಾರತ ದೇಶದಿಂದ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ಹಿನ್ನೆಲೆ ಪಟ್ಟಣದ ಕೆಲವು ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತ ಬಂದ್ ಮಾಡಿದರು. ಭಾರತೀಯ ದಲಿತ ಪ್ಯಾಂಥ್ಯರ್ಸ್‌ ರಾಜ್ಯ ಕಾರ್ಯದರ್ಶಿ ಮನೋಹರ ಮೋರೆ, ತಾಲೂಕು ಅಧ್ಯಕ್ಷ ಅಶೋಕ ಸಿಂಧೆ, ಜಿಲ್ಲಾ ಉಪಾಧ್ಯಕ್ಷ ಸಿದ್ದಾರ್ಥ ಡಾಂಗೆ, ಪ್ರಲ್ಹಾದ ಮೊರೆ, ತಾಲೂಕು ಉಪಾಧ್ಯಕ್ಷ ಸತೀಶ ಗಾಯಕವಾಡ, ಲೋಕೇಶ ಕಾಂಬಳೆ, ನಾಗನಾಥ ಬನಸೂಡೆ, ಅಶೋಕ ಕಾಂಬಳೆ, ದೇವಾನಂದ ಟೋಳೆ, ರಾಜು ಲಾಟೆ, ರಾವಸಾಬ ಸಿಂಧೆ,ಅನೀಲ ಒಡಿಯಾರ, ಗ್ರಾಮ ಕ್ರಾಂತಿ ಸೇನೆ ಕರ್ನಾಟಕ ರಾಜ್ಯ ಅಧ್ಯಕ್ಷ ಸಂದೀಪ ಮುಕುಂದೆ, ಡಾ ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಎಲ್ ಎಸ್ ಕಾಂಬಳೆ, ಸೇರಿದಂತೆ ದಲಿತ ಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.