ಸಾಧಕರಿಗೆ ಆಯೋಜಿಸಿರುವ ಸನ್ಮಾನದಲ್ಲಿ ತಮ್ಮ ನೇರ ನುಡಿಗಳ ಬರವಣಿಗೆ ಮೂಲಕ ಸಮಾಜವನ್ನು ಎಚ್ಚರಿಸುತ್ತಿರುವ ಹಿರಿಯ ಪತ್ರಕರ್ತರಾದ ಎನ್.ಕೃಷ್ಣೇಗೌಡ ಅವರನ್ನು ಸನ್ಮಾನಿಸಿ ಗೌರವಿಸುತ್ತಿರುವುದು ಅರ್ಥಪೂರ್ಣವಾಗಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಹಾಗನಹಳ್ಳಿಯ ವೃದ್ಧಾಶ್ರಮ ಅಮ್ಮನ ಆಸರೆ ಚಾರಿಟಬಲ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆದ ನಾಮಕರಣ ಮಹೋತ್ಸವದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾ ಮಾಜಿ ನಿರ್ದೇಶಕ ಎನ್.ಕೃಷ್ಣೇಗೌಡ, ರೈತ ಸಂಘದ ಮುಖಂಡ ಹೊಸಕೋಟೆ ವಿಜಯಕುಮಾರ್, ಸಮಾಜ ಸೇವಕ ಹುಲ್ಕೆರೆ ಕೊಪ್ಪಲು ನಾರಾಯಣಗೌಡ, ಪೈಲ್ವಾನ್ ಅರಳುಕುಪ್ಪೆ ಗುರುಮೂರ್ತಿ ಅವರನ್ನು ಸನ್ಮಾನಿಸಲಾಯಿತು.ಈ ವೇಳೆ ಕಿಸಾನ್ ಕಾಂಗ್ರೆಸ್ ಮೇಲುಕೋಟೆ ಘಟಕದ ಅಧ್ಯಕ್ಷ ಸಿ.ಆರ್. ರಮೇಶ್ ಮಾತನಾಡಿ, ಜನ್ಮ ನೀಡಿದ ತಂದೆ-ತಾಯಂದಿರ ಸೇವೆ ಮಾಡುವ ಮೂಲಕ ದೇವರನ್ನು ಕಾಣಬೇಕಿದೆ. ಆದರೆ, ಮನಶಾಂತಿಗಾಗಿ ದೇವಾಲಯಗಳಿಗೆ ಹೋಗುವ ಮೂಲಕ ದುಂದುವೆಚ್ಚ ಮಾಡುವುದು ಸರಿಯಲ್ಲ. ಮನೆಯಲ್ಲೇ ಇರುವ ಕಣ್ಣಿಗೆ ಕಾಣುವ ದೇವರಾದ ತಂದೆ-ತಾಯಿಗಳನ್ನು ಗೌರವಿಸಬೇಕು ಎಂದರು.
ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ಮಾತನಾಡಿ, ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಬೇಕು. ಮನೆಯಲ್ಲಿ ತಂದೆ- ತಾಯಿಗಳನ್ನು ಸರಿಯಾಗಿ ನೋಡಿಕೊಳ್ಳದ ಕಾರಣ ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ. ಸಾಮಾನ್ಯವಾಗಿ ಮನೆಗಳಲ್ಲಿಯೇ ವೃದ್ಧರನ್ನು ಚೆನ್ನಾಗಿ ನೋಡಿಕೊಳ್ಳುವ ವಾತಾವರಣ ಇಲ್ಲ. ಅಂತಹುದರಲ್ಲಿ ಪ್ರಭುಸ್ವಾಮಿ ಅವರು ಆಶ್ರಮ ಸ್ಥಾಪಿಸಿ ವಯಸ್ಸಾದವರನ್ನು ನೋಡಿಕೊಳ್ಳುತ್ತಿರುವುದು ನಿಜಕ್ಕೂ ಮೆಚ್ಚುಗೆ ವಿಚಾರ ಎಂದು ತಿಳಿಸಿದರು.ಸಾಧಕರಿಗೆ ಆಯೋಜಿಸಿರುವ ಸನ್ಮಾನದಲ್ಲಿ ತಮ್ಮ ನೇರ ನುಡಿಗಳ ಬರವಣಿಗೆ ಮೂಲಕ ಸಮಾಜವನ್ನು ಎಚ್ಚರಿಸುತ್ತಿರುವ ಹಿರಿಯ ಪತ್ರಕರ್ತರಾದ ಎನ್.ಕೃಷ್ಣೇಗೌಡ ಅವರನ್ನು ಸನ್ಮಾನಿಸಿ ಗೌರವಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.
ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ವೇದಮೂರ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಂಶುಪಾಲ ಪ್ರೊ.ಬಿ.ನಾರಾಯಣಗೌಡ, ತಾಲೂಕು ಮಾಜಿ ಅಧ್ಯಕ್ಷ ಎಸ್.ಮಲ್ಲಿಕಾರ್ಜುನೇಗೌಡ, ನಿವೃತ್ತ ಮುಖ್ಯ ಶಿಕ್ಷಕರಾದ ಸಿದ್ದಪ್ಪ, ರಮೇಶ್, ಶಿಕ್ಷಕ ರವಿಕುಮಾರ್, ಪ್ರಗತಿ ಸೇವಾ ಟ್ರಸ್ಟ್ ಅಧ್ಯಕ್ಷ ರಾಗಿಮುದ್ದನಹಳ್ಳಿ ನಾಗೇಶ್, ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ಜಿಲ್ಲಾ ಮಹಿಳಾ ಅಧ್ಯಕ್ಷೆ ಉಮಾದೇವಿ, ರೈತ ಸಂಘ ಮುಖಂಡ ಅತ್ತಿಗಾನಹಳ್ಳಿ ಜಗದೀಶ್, ಕಟ್ಟೇರಿ ಗ್ರಾಪಂ ಮಾಜಿ ಅಧ್ಯಕ್ಷ ರಾಜೇಂದ್ರ, ಹಿರೇಮರಳಿ ಗ್ರಾಪಂ ಮಾಜಿ ಉಪಾಧ್ಯಕ್ಷ ಜೆಡಿಎಸ್ ಮುಖಂಡ, ಟಿಎಪಿಸಿಎಂಎಸ್ ನಿರ್ದೇಶಕ ಪಿ.ಎಲ್.ಆದರ್ಶ, ವೀರಶೈವ ಜಿಲ್ಲಾ ನಿರ್ದೇಶಕ ಹಾಗನಹಳ್ಳಿ ಸುರೇಶ್, ಅಮ್ಮನ ಆಸರೆ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಪ್ರಭುಸ್ವಾಮಿ, ಪ್ರಧಾನ ಕಾರ್ಯದರ್ಶಿ ಪುಷ್ಪಾವತಿ ಉಮೇಶ್ ಸೇರಿದಂತೆ ಇತರರಿದ್ದರು.