ಅಮೋಘಸಿದ್ದ ಖೊಬ್ರಿ ತೆಲಸಂಗ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ

| Published : Mar 27 2024, 01:04 AM IST

ಅಮೋಘಸಿದ್ದ ಖೊಬ್ರಿ ತೆಲಸಂಗ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಅಥಣಿ: ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ ಅಥಣಿ ವಿಧಾನಸಭೆ ಕ್ಷೇತ್ರದ ತೆಲಸಂಗ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ನ್ಯಾಯವಾದಿ ಅಮೋಘಸಿದ್ದ ಎಂ.ಖೊಬ್ರಿ ಅವರನ್ನು ನೇಮಕ ಮಾಡಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚಿವ ಡಿ.ಕೆ.ಶಿವಕುಮಾರ ಆದೇಶ ಹೊರಡಿಸಿದ್ದಾರೆ.

ಅಥಣಿ: ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ ಅಥಣಿ ವಿಧಾನಸಭೆ ಕ್ಷೇತ್ರದ ತೆಲಸಂಗ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನಾಗಿ ನ್ಯಾಯವಾದಿ ಅಮೋಘಸಿದ್ದ ಎಂ.ಖೊಬ್ರಿ ಅವರನ್ನು ನೇಮಕ ಮಾಡಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸಚಿವ ಡಿ.ಕೆ.ಶಿವಕುಮಾರ ಆದೇಶ ಹೊರಡಿಸಿದ್ದಾರೆ. ಶಾಸಕ ಲಕ್ಷ್ಮಣ ಸವದಿ ಪಟ್ಟಣದಲ್ಲಿ ಅಮೋಘಸಿದ್ದ ಖೊಬ್ರಿ ಅವರಿಗೆ ಆದೇಶಪ್ರತಿ ನೀಡಿ ಅಭಿನಂದಿಸಿದರು. ಅಲ್ಲದೇ, ತೆಲಸಂಗ ಬ್ಲಾಕ್ ಕಾಂಗ್ರೆಸ್‌ನ ಅಧಿಕಾರ ವಹಿಸಿಕೊಂಡು ಜಿಲ್ಲಾ ಸಮಿತಿ ಮಾರ್ಗದರ್ಶನದಲ್ಲಿ ಮತ್ತು ಸ್ಥಳೀಯ ನಾಯಕರ ಸಹಯೋಗದಲ್ಲಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಕೆಲಸ ಮಾಡುವಂತೆ ಸೂಚಿಸಿದರು. ನಿಮ್ಮ ಕಾರ್ಯಕ್ಷಮತೆಯಿಂದ ಪಕ್ಷದ ಮತ್ತು ಸಮಾಜದ ಬಲವರ್ಧನೆ ಆಗಲಿದ್ದು, ಹೆಚ್ಚಿನ ಯಶಸ್ಸು ಸಿಗಲೆಂದು ಹಾರೈಸಿದರು.ಆದೇಶ ಪ್ರತಿ ಸ್ವೀಕರಿಸಿದ ಅಮೋಘಸಿದ್ದ ಖೊಬ್ರಿ ಮಾತನಾಡಿ, ಬುದ್ದ,ಬಸವ, ಅಂಬೇಡ್ಕರರ ಹಾದಿಯಲ್ಲಿ ನಡೆಯುವ ನನಗೆ, ಅಥಣಿ ಶಾಸಕ ಲಕ್ಷ್ಮಣ ಸವದಿ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಈ ಜವಾಬ್ದಾರಿಗೆ ಕೃತಜ್ಞನಾಗಿದ್ದೇನೆ. ಸಮಾಜ ಕಟ್ಟುವ ಜೊತೆಗೆ ಪಕ್ಷದ ಮೂಲ ಸಿದ್ಧಾಂತಕ್ಕೆ ಧಕ್ಕೆಕೆಲಸ ಮಾಡಿ ಪಕ್ಷ ಹಾಗೂ ಮುಖಂಡರ ಗೌರವ ಕಾಪಾಡುವೆ ಎಂದು ಹೇಳಿದ್ದಾರೆ.