ದಾನಗಳಲ್ಲಿ ಅನ್ನದಾನಕ್ಕೆ ಹೆಚ್ಚಿನ ಪುಣ್ಯ ಪ್ರಾಪ್ತಿ: ನೀಲಕಂಠ

| Published : Feb 10 2024, 01:50 AM IST

ದಾನಗಳಲ್ಲಿ ಅನ್ನದಾನಕ್ಕೆ ಹೆಚ್ಚಿನ ಪುಣ್ಯ ಪ್ರಾಪ್ತಿ: ನೀಲಕಂಠ
Share this Article
  • FB
  • TW
  • Linkdin
  • Email

ಸಾರಾಂಶ

ರಬಕವಿ-ಬನಹಟ್ಟಿ: ರಬಕವಿಯ ಶ್ರೀದಾನಮ್ಮದೇವಿ ದೇವಸ್ಥಾನದಲ್ಲಿ ಡಿ.ಕೆ.ಕೊಟ್ರಶೆಟ್ಟಿ ಫೌಂಡೇಶನ್ ದಾಸೋಹ ಸೇವಾ ಕಾರ್ಯ ಆಯೋಜಿಸಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಂಗ್ರೆಸ್‌ ಧುರೀಣ ನೀಲಕಂಠ ಮುತ್ತೂರ, ಎಲ್ಲ ದಾನಗಳಲ್ಲಿ ಅನ್ನದಾನಕ್ಕೆ ಹೆಚ್ಚಿನ ಪುಣ್ಯಾರ್ಥವಿದೆ. ಅನ್ನದಾಸೋಹ ಶರಣ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಎಲ್ಲ ದಾನಗಳಲ್ಲಿ ಅನ್ನದಾನಕ್ಕೆ ಹೆಚ್ಚಿನ ಪುಣ್ಯಾರ್ಥವಿದೆ ಎಂದು ಕಾಂಗ್ರೆಸ್‌ ಧುರೀಣ ನೀಲಕಂಠ ಮುತ್ತೂರ ಹೇಳಿದರು.

ರಬಕವಿಯ ಶ್ರೀದಾನಮ್ಮದೇವಿ ದೇವಸ್ಥಾನದಲ್ಲಿ ಡಿ.ಕೆ.ಕೊಟ್ರಶೆಟ್ಟಿ ಫೌಂಡೇಶನ್ ಆಯೋಜಿಸಿದ್ದ ದಾಸೋಹ ಸೇವಾ ಕಾರ್ಯ ಉದ್ಘಾಟಿಸಿ ಮಾತನಾಡಿ, ಅನ್ನದಾಸೋಹ ಶರಣ ಸಂಸ್ಕೃತಿಯ ಪ್ರತೀಕವಾಗಿದ್ದು, ಸಕಲ ಜೀವಿಗಳಲ್ಲಿ ಭೇದ ತೋರದೆ ನಿರಂತರ ಅನ್ನದಾಸೋಹ ನಡೆಸುವ ಮೂಲಕ ಅನ್ನಪರಬ್ರಹ್ಮ ರೂಪವನ್ನು ನಿತ್ಯ ಅರುಹಿದ ಬಸವಾದಿ ಶರಣರ ಮಾರ್ಗದಲ್ಲಿ ಡಿ.ಕೆ.ಕೊಟ್ರಶೆಟ್ಟಿ ಫೌಂಡೇಶನ್ ವತಿಯಿಂದ ಭಾರತ ಗ್ಯಾಸ್ ವಿತರಕ ಸೋಮಶೇಖರ ಕೊಟ್ರಶೆಟ್ಟಿ ನಡೆಸುತ್ತಿರುವ ಅನ್ನದಾಸೋಹ ಸೇವೆ ಅನುಕರಣೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭಕ್ತರಿಗೆ, ಸಮಾಜಕ್ಕೆ ಹಾಗೂ ದುರ್ಬಲರಿಗೆ ಪ್ರಸಾದ ಎಂಬ ಪವಿತ್ರ ಭಾವದಿಂದ ದಾಸೋಹ ನಡೆಸುವ ಮೂಲಕ ಕೊಟ್ರಶೆಟ್ಟಿ ಪರಿವಾರ ಇನ್ನೂ ಹೆಚ್ಚಿನ ಸಾಮಾಜಿಕ ಸೇವೆಯಲ್ಲಿ ತೊಡಗಲು ವರದಾನೇಶ್ವರಿ ಅನುಗ್ರಹಿಸಲಿ ಎಂದು ಶುಭ ಹಾರೈಸಿದರು.

ಅತಿಥಿಗಳಾಗಿ ಚಿದಾನಂದ ಸೊಲ್ಲಾಪುರ, ಸೋಮಶೇಖರ ಕುಳ್ಳೋಳ್ಳಿ ಆಗಮಿಸಿದ್ದರು. ಟ್ರಸ್ಟ್ ಅಧ್ಯಕ್ಷ ಶಿವಜಾತ ಉಮದಿ, ಉದಯ ಜಿಗಜಿನ್ನಿ, ಸೋಮಶೇಖರ ಕೊಟ್ರಶೆಟ್ಟಿ, ಗೌತಮ ಕೊಟ್ರಶೆಟ್ಟಿ, ರೇವಣ ಉಮದಿ, ಮಲ್ಲಿಕಾರ್ಜುನ ಗಡೆನ್ನವರ, ಬಸವರಾಜ ತೊರಲಿ, ಸಂಗಮೇಶ ಚಿತ್ತರಗಿ, ಸಂಗಮೇಶ ಗುಣಕಿ ಮುಂತಾದವರಿದ್ದರು. ಶ್ರೀದಾನೇಶ್ವರಿ ದರ್ಶನಕ್ಕೆ ಬಂದ ಸಾವಿರಾರು ಭಕ್ತರು ಪ್ರಸಾದ ಸೇವಿಸಿದರು.