ಮತ್ತಿನಲ್ಲಿ ಚರಂಡಿಗೆ ಬಿದ್ದು ವ್ಯಸನಿ ಸಾವು

| Published : Nov 30 2024, 12:48 AM IST

ಸಾರಾಂಶ

ಮದ್ಯವ್ಯಸನಿಯೊಬ್ಬ ಕಂಠಪೂರ್ತಿ ಕುಡಿದು ಕೊಳಚೆ ನೀರು ತುಂಬಿದ್ದ ಚರಂಡಿಗೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಿಕ್ಕೋಡಿನಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ. ಗುರುವಾರ ಕೆಲಸದ ನಿಮಿತ್ತ ಹೊರಹೋಗಿದ್ದ ಓಂಕಾರ್ ಮನೆಗೆ ಬರುವ ಸಂದರ್ಭದಲ್ಲಿ ಕಂಠಪೂರ್ತಿ ಮದ್ಯ ಸೇವಿಸಿ ಕೊಳಚೆ ನೀರು ತುಂಬಿದ್ದ ಚರಂಡಿಗೆ ಆಯತಪ್ಪಿ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಬೆಳಗ್ಗೆ ಸ್ಥಳೀಯರು ಚರಂಡಿಗೆ ಬಿದ್ದಿರುವುದನ್ನು ಕಂಡು ಮೇಲೆತ್ತುವ ಸಂದರ್ಭದಲ್ಲಿ ಓಂಕಾರ ಸಾವನ್ನಪ್ಪಿರುವುದು ದೃಢಪಟ್ಟಿದೆ.

ಕನ್ನಡಪ್ರಭ ವಾರ್ತೆ ಬೇಲೂರು

ಮದ್ಯವ್ಯಸನಿಯೊಬ್ಬ ಕಂಠಪೂರ್ತಿ ಕುಡಿದು ಕೊಳಚೆ ನೀರು ತುಂಬಿದ್ದ ಚರಂಡಿಗೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಿಕ್ಕೋಡಿನಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ.

ತಾಲೂಕಿನ ಬಿಕ್ಕೋಡು ಗ್ರಾಮದ ಓಂಕಾರ್ ಸಾವನ್ನಪ್ಪಿದ ವ್ಯಕ್ತಿ. ಗುರುವಾರ ಕೆಲಸದ ನಿಮಿತ್ತ ಹೊರಹೋಗಿದ್ದ ಓಂಕಾರ್ ಮನೆಗೆ ಬರುವ ಸಂದರ್ಭದಲ್ಲಿ ಕಂಠಪೂರ್ತಿ ಮದ್ಯ ಸೇವಿಸಿ ಕೊಳಚೆ ನೀರು ತುಂಬಿದ್ದ ಚರಂಡಿಗೆ ಆಯತಪ್ಪಿ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಬೆಳಗ್ಗೆ ಸ್ಥಳೀಯರು ಚರಂಡಿಗೆ ಬಿದ್ದಿರುವುದನ್ನು ಕಂಡು ಮೇಲೆತ್ತುವ ಸಂದರ್ಭದಲ್ಲಿ ಓಂಕಾರ ಸಾವನ್ನಪ್ಪಿರುವುದು ದೃಢಪಟ್ಟಿದೆ.

ಗ್ರಾಮಸ್ಥರ ಆಕ್ರೋಶ|:ಬಿಕ್ಕೋಡು ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಪಿಡಿಒ ವಿರುದ್ಧ ಪ್ರತಿಭಟನೆ ನಡೆಸಿ ಶವವನ್ನು ಗ್ರಾಮ ಪಂಚಾಯತ್‌ ಮುಂಭಾಗದಲ್ಲಿಟ್ಟು ನೊಂದ ಕುಟುಂಬಕ್ಕೆ ಪರಿಹಾರ ಸಿಗಬೇಕು ಹಾಗೂ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸಲಾಯಿತು.

ಗ್ರಾಮಸ್ಥರಾದ ವಿಶ್ವನಾಥ್ ಹಾಗೂ ಯದುನಂದನ್ ಮಾತನಾಡಿ, ಗ್ರಾಮ ಪಂಚಾಯತ್ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಒಂದು ಬಡ ಕುಟುಂಬ ಬೀದಿಗೆ ಬಿದ್ದಿದೆ. ಗ್ರಾಮದ ಚರಂಡಿಗಳು ಹೂಳು ತುಂಬಿ ಕೊಳಚೆ ನೀರು ಕಟ್ಟಿಕೊಂಡಿವೆ. ಇಂದು ಓಂಕಾರ್‌ ಎನ್ನುವ ವ್ಯಕ್ತಿಯೇ ಬಿದ್ದು ಸಾವನ್ನಪ್ಪಿದ್ದಾರೆ. ಆದರೆ, ಇಲ್ಲಿ ಮಕ್ಕಳು ಕೂಡ ಓಡಾಡುತ್ತಿರುತ್ತವೆ. ಒಂದು ವೇಳೆ ಮಕ್ಕಳು ಬಿದ್ದರೆ ಆಗುವ ಅನಾಹುತಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು.

ನಿರ್ಲಕ್ಷ್ಯ ವಹಿಸಿರುವ ಗ್ರಾಮ ಪಂಚಾಯ್ತಿ ಪಿಡಿಒ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಬಡ ಕುಟುಂಬಕ್ಕೆ ಸೂಕ್ತ ನ್ಯಾಯ ಸಿಗುವವರೆಗೂ ಇಲ್ಲಿಂದ ಶವ ಎತ್ತುವುದಿಲ್ಲ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.