ಪ್ರವಾಸಿಗರು ಇಡೀ ದಿನವನ್ನು ಕಳೆಯಲು ಮಲೇಷಿಯಾ, ಡಿಸ್ನಿಲ್ಯಾಂಡ್ ಮಾದರಿಯಂತೆ ಜಿಲ್ಲೆಯಲ್ಲಿ ದೊಡ್ಡ ಅಮ್ಯುಸ್ಮೆಂಟ್ ಪಾರ್ಕ್ ನಿರ್ಮಾಣ ಮಾಡಬೇಕು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಅಧ್ಯಕ್ಷ ರಮೇಶ್ಚಂದ್ರ ಲಹೋಟಿ ಹೇಳಿದರು.
ಜೂ. 16-17 ದಕ್ಷಿಣ ಭಾರತ ಉತ್ಸವ । ಚಿಕ್ಕಮಗಳೂರಿನಲ್ಲಿ ರೋಡ್ ಶೋ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪ್ರವಾಸಿಗರು ಇಡೀ ದಿನವನ್ನು ಕಳೆಯಲು ಮಲೇಷಿಯಾ, ಡಿಸ್ನಿಲ್ಯಾಂಡ್ ಮಾದರಿಯಂತೆ ಜಿಲ್ಲೆಯಲ್ಲಿ ದೊಡ್ಡ ಅಮ್ಯುಸ್ಮೆಂಟ್ ಪಾರ್ಕ್ ನಿರ್ಮಾಣ ಮಾಡಬೇಕು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಅಧ್ಯಕ್ಷ ರಮೇಶ್ಚಂದ್ರ ಲಹೋಟಿ ಹೇಳಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನದಿಂದ ಚಿಕ್ಕಮಗಳೂರಿಗೆ ನಾಲ್ಕುಲೈನ್ ರಸ್ತೆ ನಿರ್ಮಾಣ ವಾಗಬೇಕಿದೆ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಕೈಗಾರಿಕೆಗಳ ಬೆಳವಣಿಗೆ ಅಗತ್ಯವಾಗಿರುವುದರಿಂದ ನೀರಿನ ವ್ಯವಸ್ಥೆ ಅಗತ್ಯವಾಗಿರುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಬೆಳವಣಿಗೆಗೆ ಸಣ್ಣ ಕೈಗಾರಿಕೆಗಳ ಪ್ರದೇಶ ನಿರ್ಮಾಣವಾಗಬೇಕು. ಒಣ ಪ್ರದೇಶದಲ್ಲಿನ ಕೈಗಾರಿಕೆ ಬೆಳವಣಿಗೆಗೆ ನೀರನ್ನು ಒದಗಿಸಬೇಕಾಗಿದ್ದು, ಈ ಕುರಿತು ಸರ್ಕಾರದ ಗಮನ ಸೆಳೆಯ ಲಾಗುವುದು ಎಂದರು.ದಕ್ಷಿಣ ಭಾರತ ಉತ್ಸವ:ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಜೂನ್ 15 ಮತ್ತು 16 ರಂದು ಬಹು ನಿರೀಕ್ಷಿತ ದಕ್ಷಿಣ ಭಾರತದ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೂಡಿಕೆಯ ಅವಕಾಶಗಳು ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡುವ ಮೂಲಕ ದಕ್ಷಿಣ ಭಾರತ ರಾಜ್ಯಗಳ ಪ್ರವಾಸೋದ್ಯಮ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.ಕ್ರಿಯಾತ್ಮಕ ಪ್ರವಾಸೋದ್ಯಮ ಉದ್ಯಮದೊಳಗೆ ಪಾಲುದಾರರನ್ನು ತೊಡಗಿಸಿಕೊಳ್ಳಲು ಮತ್ತು ಸಬಲೀಕರಣಗೊಳಿಸಲು ನಿಖರವಾಗಿ ವಿನ್ಯಾಸಗೊಳಿಸಲಾದ ದಕ್ಷಿಣ ಉತ್ಸವ ಎರಡು ದಿವಸ ನಡೆಯಲಿದೆ. ಪ್ರವಾಸೋದ್ಯಮ ಹೂಡಿಕೆದಾರರ ಸಭೆ, ಸಮ್ಮೇಳನಗಳು, ಮತ್ತು ಬಿ 2ಬಿ, ಬಿ 2ಜಿ ಮತ್ತು ಬಿ 2 ಸಿ ಸಂವಹನಗಳ ಮೂಲಕ ಅಮೂಲ್ಯವಾದ ನೆಟ್‌ವರ್ಕಿಂಗ್ ಅವಕಾಶಗಳು ಸೇರಿದಂತೆ ವೈವಿಧ್ಯಮಯ ಚಟುವಟಿಕೆಗಳನ್ನು ಒಳಗೊಂಡಿದೆ ಎಂದರು.ರೋಡ್ ಶೋ:
ಉತ್ಸವ ಸಮಿತಿ ಅಧ್ಯಕ್ಷ ಶಿವಷಣ್ಮುಗಂ ಮಾತನಾಡಿ, ಚಿಕ್ಕಮಗಳೂರಿನಲ್ಲಿ ರೋಡ್‌ಶೋ ನಡೆಸಲಾಗುತ್ತಿದೆ. ದಕ್ಷಿಣ ಭಾರತವನ್ನು ಪ್ರಮುಖ ಪ್ರವಾಸೋದ್ಯಮ ತಾಣವಾಗಿ ಉತ್ತೇಜಿಸಲು ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಆಸಕ್ತ ಎಂಎಸ್‌ಎಂಇ ಗಳನ್ನು ಆಹ್ವಾನಿಸುವ ಗುರಿ ಹೊಂದಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಹಯೋಗದ ಪ್ರಯತ್ನ ಆರ್ಥಿಕ ಸಮೃದ್ಧಿ ಮತ್ತು ಸಾಮಾಜಿಕ ಪ್ರಗತಿ ಪ್ರತೀಕವಾಗಿ ಪ್ರವಾಸೋದ್ಯಮದ ಅಪಾರ ಸಾಮಾರ್ಥ್ಯ ಹಂಚಿಕೆ ಬದ್ಧತೆಯನ್ನು ಒತ್ತಿ ಹೇಳುತ್ತದೆ ಎಂದು ತಿಳಿಸಿದರು.ನಾಲ್ಕು ರಾಜ್ಯಗಳ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಆಗಮಿಸುತ್ತಿದ್ದು, ಪ್ರವಾಸೋದ್ಯಮ ಅಭಿವೃದ್ಧಿಗೆ ಬಂಡವಾಳ ಹೂಡಿಕೆ ಕುರಿತು ಚರ್ಚೆ ನಡೆಸಲಾಗುವುದು. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೂ ಪ್ರತ್ಯೇಕವಾಗಿ ಚರ್ಚಿಸಲಾಗುತ್ತಿದೆ. ರೋಡ್ ಶೋಗಳನ್ನು ದಕ್ಷಿಣ ಭಾರತದ 4 ರಾಜ್ಯಗಳಲ್ಲಿ ಆಯೋಜಿಸಲಾಗುವುದು ಎಂದು ಹೇಳಿದರು.ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಉಪಾಧ್ಯಕ್ಷ ಎಂ.ಜಿ. ಬಾಲಕೃಷ್ಣ, ಉಮಾರೆಡ್ಡಿ, ಮಾಜಿ ಅಧ್ಯಕ್ಷ ಬಿ.ವಿ. ಗೋಪಾಲ ರೆಡ್ಡಿ, ವೆಂಕಟೇಶ್, ಜಿಲ್ಲಾಧ್ಯಕ್ಷ ಶಾಂತರಾಂ ಹೆಗ್ಡೆ ಇದ್ದರು.ಪೋಟೋ ಫೈಲ್ ನೇಮ್ 27 ಕೆಸಿಕೆಎಂ 3