ದಿನನಿತ್ಯ ನಮ್ಮ ಹಾಲು ಉತ್ಪಾದಕರು ತಮ್ಮ ಹಸು ಕರುಗಳನ್ನು ಸಾಕಾಣಿಕೆ ಮಾಡಿಕೊಂಡು ಹಾಲು ಕರೆದು ಡೈರಿಗೆ ಹಾಕುತ್ತಿದ್ದಾರೆ. ಆದರೆ, ಅವರ ಆರೋಗ್ಯದ ಬಗ್ಗೆ ನಮ್ಮ ಸಂಘದ ವತಿಯಿಂದ ಉಚಿತವಾಗಿ ತಪಾಸಣೆ ನಡೆಸಬೇಕು ಎಂಬ ಉದ್ದೇಶದಿಂದ ಶಿಬಿರ ಹಮ್ಮಿಕೊಳ್ಳಲಾಗಿದೆ.
ಹಲಗೂರು:
ಮನುಷ್ಯನಿಗೆ ಅಮೂಲ್ಯವಾದ ಕಣ್ಣಿನ ಬಗ್ಗೆ ನಿರ್ಲಕ್ಷ್ಯ ವಹಿಸದೆ ವರ್ಷಕ್ಕೊಮ್ಮೆ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯವಶ್ಯಕ ಎಂದು ದಳವಾಯಿ ಕೋಡಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯ ನಿರ್ವಾಹಕ ಡಿ.ವೈ.ನಾಗರಾಜ್ ತಿಳಿಸಿದರು.ಗ್ರಾಮದ ಡೇರಿ ಆವರಣದಲ್ಲಿ ಲಯನ್ಸ್ ಕ್ಲಬ್ ಮತ್ತು ಶ್ರೀ ಭೈರವೇಶ್ವರ ಐ ಕೇರ್ ಮತ್ತು ಆಪ್ಟಿಕಲ್ಸ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ದಿನನಿತ್ಯ ನಮ್ಮ ಹಾಲು ಉತ್ಪಾದಕರು ತಮ್ಮ ಹಸು ಕರುಗಳನ್ನು ಸಾಕಾಣಿಕೆ ಮಾಡಿಕೊಂಡು ಹಾಲು ಕರೆದು ಡೈರಿಗೆ ಹಾಕುತ್ತಿದ್ದಾರೆ. ಆದರೆ, ಅವರ ಆರೋಗ್ಯದ ಬಗ್ಗೆ ನಮ್ಮ ಸಂಘದ ವತಿಯಿಂದ ಉಚಿತವಾಗಿ ತಪಾಸಣೆ ನಡೆಸಬೇಕು ಎಂಬ ಉದ್ದೇಶದಿಂದ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.ವೈದ್ಯಾಧಿಕಾರಿ ದಿವ್ಯ 73 ಹಾಲು ಉತ್ಪಾದಕರಿಗೆ ಕಣ್ಣಿನ ತಪಾಸಣೆ ನಡೆಸಿದ್ದಾರೆ. ಅದರಲ್ಲಿ 10 ಜನರಿಗೆ ಕಣ್ಣಿನ ಸಮಸ್ಯೆ ಕಂಡು ಬಂದು ನೇತ್ರ ಚಿಕಿತ್ಸೆ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಗುಣೇಶ್ ಮಾತನಾಡಿ, ವಿಶ್ವದ ದೃಷ್ಟಿ ದಿನ ದ ಅಂಗವಾಗಿ 8 ರಿಂದ 18ರವರೆಗೆ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದು, ಪೊಲೀಸ್ ಇಲಾಖೆ, ಕೆಇಬಿ ನೌಕರರಿಗೆ ಹಾಗೂ ಹಾಲು ಉತ್ಪಾದಕರಿಗೆ ಕಣ್ಣಿನ ತಪಾಸಣೆ ನಡೆಸಲಾಗಿದೆ ಎಂದರು.ಇದೇ ವೇಳೆ ಕಣ್ಣಿನ ವೈದ್ಯಾಧಿಕಾರಿ ದಿವ್ಯ ಅವರಿಗೆ ಡೇರಿ ವತಿಯಿಂದ ಕೊಬ್ಬರಿ ಬೆಲ್ಲ ನೀಡಿ, ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಡಾ.ಎ.ಎಸ್. ನಾಗೇಶ್, ಖಜಾಂಜಿ ಎನ್.ಯೋಗೇಶ್, ಮತ್ತು ಜಿ.ಎಸ್.ಮನೋಹರ ,ಡಿ.ಎಲ್. ಮಾದೇಗೌಡ ಸೇರಿದಂತೆ ಡೇರಿ ಸಿಬ್ಬಂದಿಗಳಾದ ಪುರುಷೋತ್ತಮ, ಸುರೇಶ, ರಾಜು ಹಾಲು ಉತ್ಪಾದಕರಾದ ಮನು, ನಂಜಮ್ಮ, ಶಿವ ಮಾದೇಗೌಡ ಸೇರಿದಂತೆ ಇತರರು ಇದ್ದರು.