ಪರಿಸರ ಸಮಸ್ಯೆಗೆ ಬಣ್ಣದಲ್ಲಿ ಉತ್ತರ

| Published : Dec 21 2023, 01:15 AM IST / Updated: Dec 21 2023, 01:16 AM IST

ಪರಿಸರ ಸಮಸ್ಯೆಗೆ ಬಣ್ಣದಲ್ಲಿ ಉತ್ತರ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರಕಲಾ ಸ್ಪರ್ಧೆಯನ್ನು ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗ, ಅವಿಷ್ಕಾರ ಪರಿಷತ್ ಮತ್ತು ಎಐಸಿಟಿಈ ಚಟುವಟಿಕೆ ಅಡಿಯಲ್ಲಿ ಆಯೋಜಿಸಲಾಗಿತ್ತು.

ಹಳಿಯಾಳ:

ಸಾಮಾಜಿಕ ಸವಾಲುಗಳು ಹಾಗೂ ಅದರ ಪರಿಹಾರದ ಕುರಿತಾಗಿ ಪಟ್ಟಣದ ಕೆಎಲ್‌ಎಸ್‌ ಸಂಸ್ಥೆಯ ವಿಡಿಐಟಿ ಮಹಾವಿದ್ಯಾಲಯದಲ್ಲಿ ಚಿತ್ರಕಲಾ ಪೋಸ್ಟರ್ ಸ್ಪರ್ಧೆ ನಡೆಯಿತು. 128 ವಿದ್ಯಾರ್ಥಿಗಳ 28 ತಂಡಗಳು ಭಾಗವಹಿಸಿ ತಮ್ಮ ಪರಿಕಲ್ಪನೆಯನ್ನು ಪೋಸ್ಟರ್‌ ಮೇಲೆ ಬಿಡಿಸಿದರು.

ವೈದ್ಯಕೀಯ ಅರಿವು, ಪರಿಸರದಲ್ಲಿರುವ ಸವಾಲು, ಹೊಸ ಕೃತಿ ತಂತ್ರಜ್ಞಾನದ ವಿಧಾನ, ಜಾಗತಿಕ ತಾಪಮಾನ, ಒತ್ತಡ ನಿರ್ವಹಣೆ, ಆಧುನಿಕ ತಂತ್ರಜ್ಞಾನದ ಬಳಕೆ ಮೊದಲಾದ ವಿಷಯಗಳು ಕುಂಚದಲ್ಲಿ ಮನಮೋಹಕವಾಗಿ ಅರಳಿದವು.

ಫಲಿತಾಂಶ:

ಜಾಗತಿಕ ತಾಪಮಾನಗಳ ಸಮಸ್ಯೆಯ ಬಗ್ಗೆ ಬರೆದ ನಿಸರ್ಗ, ಪೂರ್ವ, ನಿಖಿತಾ, ನಿರ್ಮನ್ ಎಲ್ ತಂಡವು ಪ್ರಥಮ ಸ್ಥಾನ ಪಡೆಯಿತು.ಪರಿಸರ ಸಮಸ್ಯೆಗಳನ್ನು ಬಿಡಿಸಿದ ಇರಾನಿ ಅಗ್ನಿ, ಗಂಗಾಧರ ಎಚ್, ಮಹಾಂತೇಶ ಎಚ್, ಹಿಲಾಲ್ ಗುರಾಣಿ ತಂಡ ದ್ವಿತೀಯ, ಮಾನಸಿಕ ಒತ್ತಡಗಳ ನಿರ್ವಹಣೆಗಳನ್ನು ಕುಂಚದಲ್ಲಿ ಅರಳಿಸಿದ ನೇತ್ರಾವತಿ, ರಕ್ಷಾ ಪಿ, ತನಿಷಾ ಪಿ, ಸಂಜನಾ ಯು, ಕೆ.ಪಿ. ಚಿನ್ಮಯ, ಮಹಿಮಾ ಎಚ್, ನಢಹಾ ಖಾನ್, ನವೀನಾ ತಂಡ ತೃತೀಯ ಸ್ಥಾನ ಪಡೆಯಿತು.

ವಿಜೇತರಿಗೆ ಪ್ರಶಸ್ತಿ ವಿತರಿಸಿದ ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ, ಸರ್ವ ಕಲೆಗಳಲ್ಲೂ ಚಿತ್ರಕಲೆ ಅತ್ಯಂತ ಶ್ರೇಷ್ಠವಾಗಿದೆ. ಚಿತ್ರಕಲೆ ಮಾನವ ಕುಲದ ಹುಟ್ಟಿನಿಂದಲೇ ಬಂದಿದೆ. ಆಧ್ಯಾತ್ಮಿಕ, ಧಾರ್ಮಿಕ ಭಾವನೆ ಜಾಗೃತಗೊಳಿಸಲು, ಭಕ್ತಿಯ ಭಾವನೆ ಪ್ರೇರೇಪಿಸುವಲ್ಲಿ ಚಿತ್ರಕಲೆ ಪಾತ್ರ ಮಹತ್ವದಾಗಿದೆ. ಹಾಗೆಯೇ ಸಾಮಾಜಿಕ, ತಂತ್ರಜ್ಞಾನ ಮತ್ತು ಎಲ್ಲ ಕ್ಷೇತ್ರದಲ್ಲಿಯೂ ಚಿತ್ರಕಲೆ ವಿಶಿಷ್ಟ ಸ್ಥಾನಮಾನ ಹೊಂದಿದೆ. ಅದಕ್ಕಾಗಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜತೆಯಲ್ಲಿ ಚಿತ್ರಕಲೆ, ಸಾಂಸ್ಕೃತಿಕ ಕಲೆ, ಕ್ರೀಡೆಯ ಬಗ್ಗೆಯು ಆಸಕ್ತಿ ವಹಿಸಬೇಕೆಂದರು.

ಡಾ. ಮಹೇಂದ್ರ ದೀಕ್ಷಿತ ಚಿತ್ರಕಲೆಯ ಬಗ್ಗೆ ಸ್ಪರ್ಧಾಳುಗಳಿಗೆ ಸೂಕ್ತ ಮಾಹಿತಿ ನೀಡಿ ಪ್ರೇರೇಪಿಸಿದರು. ಪ್ರೊ. ಸುಧೀರ್ ಕುಲಕರ್ಣಿ, ಪ್ರೊ, ನಿಖಿಲ್ ಕುಲಕರ್ಣಿ ನಿರ್ಣಾಯಕರಾಗಿದ್ದರು. ಪ್ರೊ. ಪ್ಲಾಸಿನ್ ಡಾಯಕ ಕಾರ್ಯಕ್ರಮ ನಿರ್ವಹಿಸಿದರು. ಚಿತ್ರಕಲಾ ಸ್ಪರ್ಧೆಯನ್ನು ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗ, ಅವಿಷ್ಕಾರ ಪರಿಷತ್ ಮತ್ತು ಎಐಸಿಟಿಈ ಚಟುವಟಿಕೆ ಅಡಿಯಲ್ಲಿ ಆಯೋಜಿಸಲಾಗಿತ್ತು.