ಆರೆಸ್ಸೆಸ್‌ ಬೆಳವಣಿಗೆ ಕುಗ್ಗಿಸುವ ಯತ್ನ

| Published : Oct 22 2025, 01:03 AM IST

ಸಾರಾಂಶ

ಆರೆಸ್ಸೆಸ್‌ ನಿಷೇಧಿಸಲು ಸರ್ಕಾರವು ಈ ಹಿಂದೆ ಹಲವು ಬಾರಿ ವಿಫಲ ಯತ್ನ ವಾಗಿರುವುದನ್ನು ಅರಿಯಬೇಕು. ಅ.26 ರಂದು ಮಾಲೂರು ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಪಥ ಸಂಚಲನ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜಾತ್ಯತೀತವಾಗಿ, ಪಕ್ಷಾತೀತವಾಗಿ ಜನ ಭಾಗವಹಿಸಬೇಕೆಂದು ಮನವಿ.

ಕನ್ನಡಪ್ರಭ ವಾರ್ತೆ ಮಾಲೂರು

ರಾಷ್ಟ್ರಾಭಿಮಾನಕ್ಕೆ ಮತ್ತೊಂದು ಹೆಸರೇ ಆರೆಸ್ಸೆಸ್‌. ಯಾವುದೇ ಜಾತಿ. ಧರ್ಮಕ್ಕೆ ಸೀಮಿತವಾಗದೆ ಭಾರತ ಮತ್ತು ಭಾರತೀಯರಿಗಾಗಿ ಶ್ರಮಿಸುತ್ತಿರುವ ಸಂಸ್ಥೆಯಾಗಿದೆ ಎಂದು ಮಾಜಿ ಶಾಸಕ ಮಂಜುನಾಥ್‌ ಗೌಡ ಹೇಳಿದರು.ಅವರು ತಾಲೂಕಿನ ತೂರ್ನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ಜನರಲ್ಲಿ ಧೇಶಾಭಿಮಾನ ಮೂಡಿಸಿ ದೇಶವಾಸಿಗಳು ಒಗಟ್ಟಾಗಿ ಇರಬೇಕೆಂಬ ಧ್ಯೇಯದಿಂದ ಶ್ರಮಿಸುತ್ತಿರುವ ಆರ್‌.ಎಸ್‌.ಎಸ್‌.ಬಗ್ಗೆ ತಮ್ಮ ರಾಜಕೀಯ ಬೇಳೆ ಗಾಗಿ ಇಲ್ಲಸಲ್ಲದ ಆರೋಪ ಮಾಡಿ ಸಂಘಟನೆ ಬೆಳವಣಿಗೆಯನ್ನು ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

26ರಂದು ಪಥಸಂಚಲನ

ಆರೆಸ್ಸೆಸ್‌ ನಿಷೇಧಿಸಲು ಸರ್ಕಾರವು ಈ ಹಿಂದೆ ಹಲವು ಬಾರಿ ವಿಫಲ ಯತ್ನ ವಾಗಿರುವುದನ್ನು ಅರಿಯಬೇಕು. ಅ.26 ರಂದು ಮಾಲೂರು ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಪಥ ಸಂಚಲನ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜಾತ್ಯತೀತವಾಗಿ, ಪಕ್ಷಾತೀತವಾಗಿ ಜನ ಭಾಗವಹಿಸಬೇಕೆಂದು ಮನವಿ ಮಾಡಿದರು.ರಾಮರಾಜ್ಯದ ಪರಿಕಲ್ಪನೆ

ಜಗತ್ತಿಗೆ ಶ್ರೇಷ್ಠ ಕಾವ್ಯಗಳಲ್ಲಿ ಒಂದಾದ ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿ ಇಡೀ ವಿಶ್ವಕ್ಕೆ ರಾಮರಾಜ್ಯದ ಪರಿಕಲ್ಪನೆಯನ್ನು ಪರಿಚಯ ಮಾಡಿಕೊಟ್ಟ ಮಹಾನ್‌ ದಾರ್ಶನಿಕ,ದರೋಡೆಕೋರ ಬೇಡನೊಬ್ಬ ಮಹಾನ್‌ ಕವಿಯಾಗಿ,ಪ್ರಜಾಪ್ರಭುತ್ವದ ಸಮಗ್ರ ಪರಿಕಲ್ಪನೆಯನ್ನು ರಾಮಾಯಣದ ಮೂಲಕ ಇಡೀ ಜಗತ್ತಿಗೆ ತೋರಿಸಿಕೊಟ್ಟ ಮಹಾಕವಿ ಎಂದರು.ಬಿಜೆಪಿ ತಾಲೂಕು ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ ,ಜಿ.ಪಂ,ಮಾಜಿ ಸದಸ್ಯ ಚಿನ್ನಸ್ವಾಮಿಗೌಡ,ಬೆಳ್ಳಾವಿ ಸೋಮಣ್ಣ ,ಎಂ.ಪಿ.ಚಂದ್ರಶೇಖರ್‌, ತೊರ್ನಹಳ್ಳಿ ಪಂಚಾಯ್ತಿ ಸದಸ್ಯ ಮಂಜುನಾಥ್‌,ಪೂರಿ ಮಂಜುನಾಥ್‌ ,ಪ್ರಶಾಂತ್‌ ಇನ್ನಿತರರು ಇದ್ದರು.